Thursday, January 16, 2025

ಕೊರೋನಾ ಆತಂಕ : ಸೌರವ್ ಗಂಗೂಲಿ ಹೋಮ್ ಕ್ವಾರಂಟೈನ್

ಕೋಲ್ಕತ್ತಾ : ಬಿಸಿಸಿಐ ಅಧ್ಯಕ್ಷ, ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಹೋಂ ಕ್ವಾರೆಂಟೈನ್​ಗೆ ಒಳಗಾಗಿದ್ದಾರೆ. ಸೌರವ್ ಗಂಗೂಲಿ ಅಣ್ಣ, ವೆಸ್ಟ್ ಬೆಂಗಾಲ್ ಕ್ರಿಕೆಟ್ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಸ್ನೇಹಸಿಶ್ ಗಂಗೂಲಿಗೆ ಕೊರೋನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಸೌರವ್  ಹೋಂ ಕ್ವಾರೆಂಟೈನ್​​ನಲ್ಲಿದ್ದಾರೆ.

ಸ್ನೇಹಸಿಶ್ ಗಂಗೂಲಿ ಪಶ್ಚಿಮ ಬಂಗಾಳದ ಮಾಜಿ ಪ್ರಥಮ ದರ್ಜೆ ಕ್ರಿಕೆಟರ್ ಕೂಡ ಹೌದು. ಕೆಲದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಕೋವಿಡ್ ಪರೀಕ್ಷೆ ಮಾಡಿಸಲಾಗಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಅವರನ್ನು ಬೆಲ್ಲೆ ವ್ಯೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಣ್ಣ ಸ್ನೇಹಸಿಶ್​ಗೆ ಕೊರೋನಾ ಪಾಸಿಟಿವ್ ಬಂದಿರೋದ್ರಿಂದ ಸೌರವ್ ಗಂಗೂಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿಗದಿತ ಅವದಿವರೆಗೆ ಹೋಮ್​ ಕ್ವಾರೆಂಟೈನ್​ನಲ್ಲಿರಲಿದ್ದಾರೆ.

RELATED ARTICLES

Related Articles

TRENDING ARTICLES