ಕಲಬುರಗಿ : ವರದಕ್ಷಿಣೆ ಕಿರುಕುಳ ನೀಡಿ ಮತ್ತು ಪತ್ನಿಯ ಶೀಲ ಶಂಕಿಸಿ ಗಂಡನೇ ತನ್ನ ಹೆಂಡತಿಯು ಕೊಲೆಗೈದಿರುವ ಆರೋಪ ಕೇಳಿ ಬಂದಿದ್ದು. ಮೃತ ಮಹಿಳೆಯನ್ನು ಸುಧಾಭಾಯಿ ಎಂದು ಗುರುತಿಸಲಾಗಿದೆ.
ಇನ್ನೂ ಮೃತ ಸುಧಾಬಾಯಿ ಕಲಬುರಗಿ ತಾಲ್ಲೂಕಿನ ಶ್ರೀನಿವಾಸ ಸರಡಗಿ ಗ್ರಾಮದ ನಿವಾಸಿಯಾಗಿದ್ದು. ಅದೇ ಗ್ರಾಮದ ಹೇಮು ರಾಠೋಡ್ ನನ್ನ ಕಳೆದ ಹದಿನೆಂಟು ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ತಾಯಿ ಶಾಂತಾಬಾಯಿಗೆ ಸುಧಾಬಾಯಿ ಒಬ್ಬಳೆ ಹೆಣ್ಣು ಮಗಳು. ಬಡತನದಲ್ಲಿಯೇ ಇದ್ದ ಒಬ್ಬ ಮಗಳನ್ನ ಮುದ್ದಾಗಿ ಬೆಳೆಸಿ ಲಕ್ಷಾಂತರ ರೂಪಾಯಿ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಇದನ್ನೂ ಓದಿ :‘ಪರಿಹಾರ ಕೊಡ್ತಾರಂತೆ.., ನಾನೇ 10 ಲಕ್ಷ ಕೊಡ್ತೀನಿ ನನ್ನ ಮಗಳನ್ನ ತಂದುಕೊಡಿ’: ಬಾಲಕಿ ತಂದೆ ಆಕ್ರೋಶ
ಹೇಮು ರಾಠೋಡ್ ಮದುವೆಯಾಗಿದ್ದ ಸುಧಾಬಾಯಿಗೆ ನಾಲ್ವರು ಮಕ್ಕಳಿದ್ದಾರೆ. ಮದುವೆಯಾಗಿ ಹದಿನೆಂಟು ವರ್ಷ ಕಳೆದರು ಗಂಡ ಹೇಮು ರಾಠೋಡ್ ಮತ್ತು ಆತನ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಮಾತ್ರ ಮುಂದುವರೆದಿತ್ತಂತೆ. ಅಲ್ಲದೆ ನಿತ್ಯ ದೈಹಿಕ ಹಲ್ಲೆ ಮಾಡುತ್ತ ಕಿರುಕುಳ ನೀಡ್ತಿದ್ದರಂತೆ. ಅಲ್ಲದೆ ಈ ಹಿಂದೆಯೂ ಎರಡ್ಮೂರು ಬಾರಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದರಂತೆ.
ಜೊತೆಗೆ ಇತ್ತೀಚೆಗೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಡುತ್ತಿದ್ದ ಹೇಮು ರಾಠೋಡ್ ಮತ್ತು ಆತನ ಕುಟುಂಬಸ್ಥರು ಸುಧಾ ಭಾಯಿಗೆ ಮಾರಣಾಂತಿಕ ಹಲ್ಲೆ ನಡೆಸಿ, ಬಲವಂತವಾಗಿ ವಿಷ ಕುಡಿಸಿ ಕೊಲೆಗೈದಿದ್ದು. ನಂತರ ತಕ್ಷಣ ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ :ಕಾರ್ಗೋಶಿಪ್ ಮುಳುಗಡೆ; ದಡಕ್ಕೆ ತೇಲಿಬಂದ ಕಂಟೇನರ್ಗಳು, ಮುಟ್ಟದಂತೆ ಜನರಿಗೆ ಸೂಚನೆ
ಇನ್ನು ಘಟನೆ ಸಂಬಂಧ ಕಲಬುರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಗಂಡನ ಅನುಮಾನದ ಭೂತಕ್ಕೆ ನಾಲ್ಕು ಮಕ್ಕಳು ತಾಯಿಯನ್ನು ಕಳೆದುಕೊಂಡು ತಬ್ಬಲಿಗಳಾಗಿವೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು. ತನಿಖೆಯ ನಂತರ ಕೊಲೆಯಾ ಅಥವಾ ಆತ್ಮಹತ್ಯೆಯಾ ಎಂಬುದು ತಿಳಿಯಬೇಕಿದೆ.