ಜಾರ್ಖಂಡ್: ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದ ರಾಹಲ್ ಗಾಂಧಿ ವಿರುದ್ದ ಜಾರ್ಖಂಡ್ ವಿರುದ್ದ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದು. ಜೂನ್ 26ಕ್ಕೆ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಆದೇಶ ಹೊರಡಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಏನಿದು ಪ್ರಕರಣ..!
2018 ರಲ್ಲಿ, ಕಾಂಗ್ರೆಸ್ ಅಧಿವೇಶನದ ವೇಳೆ, ರಾಹುಲ್ ಗಾಂಧಿ ಅವರು ಕೊಲೆ ಆರೋಪ ಹೊತ್ತಿರುವ ಯಾರಾದರೂ ಬಿಜೆಪಿ ಅಧ್ಯಕ್ಷರಾಗಬಹುದು ಎಂದು ಹೇಳಿಕೆ ನೀಡಿದ್ದರು. ಈ ಸಮಯದಲ್ಲಿ ಅಮಿತ್ ಶಾ ರಾಷ್ಟ್ರ ಬಿಜೆಪಿ ಅಧ್ಯಕ್ಷರಾಗಿದ್ದರು. ಈ ಹೇಳಿಕೆಯನ್ನ ಖಂಡಿಸಿ ಬಿಜೆಪಿಯ ನಾಯಕ ಪ್ರತಾಪ್ ಕಟಿಯಾರ್ ಜುಲೈ 9, 2018 ರಂದು ದೂರು ದಾಖಲಿಸಿದ್ದರು. ಇದನ್ನೂ ಓದಿ :ಹಣಕ್ಕಾಗಿ ಭಾರತದ ಗೌಪ್ಯ ಮಾಹಿತಿಯನ್ನ ಪಾಕ್ ಹಂಚಿಕೊಳ್ಳುತ್ತಿದ್ದ ದೇಶದ್ರೋಹಿ ಬಂಧನ
ಪ್ರಾರಂಭದಲ್ಲಿ ಈ ಪ್ರಕರಣವನ್ನು ಚೈಬಾಸಾದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಬಳಿಕ 2020 ರಲ್ಲಿ ಜಾರ್ಖಂಡ್ ಹೈಕೋರ್ಟ್ ಆದೇಶದ ನಂತರ ರಾಂಚಿಯ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಯ್ತು. ನಂತರ ಚೈಬಾಸಾದ ಸಂಸದ-ಶಾಸಕ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ನ್ಯಾಯಾಲಯವು ಪದೇ ಪದೇ ಸಮನ್ಸ್ ಜಾರಿ ಮಾಡಿದರೂ, ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಲಿಲ್ಲ. ಹೀಗಾಗಿ ನ್ಯಾಯಾಲಯವು ಮೊದಲು ಜಾಮೀನು ಸಹಿತ ವಾರಂಟ್ ಹೊರಡಿಸಿತು.
ಇದನ್ನೂ ಓದಿ :ಮಹಾಮಾರಿಯಿಂದ ಹೆಚ್ಚಿನ ಸಾವು-ನೋವು ಉಂಟಾಗಲಿದೆ; ಯುದ್ದದ ಭೀತಿ ಮತ್ತೆ ಆರಂಭವಾಗಲಿದೆ: ಕೋಡಿ ಶ್ರೀ