ಅಮರಾವತಿ: ಆಂಧ್ರಪ್ರದೇಶದ ವೈಎಸ್ಆರ್ ಕಡಪ ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ವರದಿಗಳ ಪ್ರಕಾರ, ಸಂತ್ರಸ್ತೆಯ ಪೋಷಕರು ಆಕೆಯನ್ನು ಹಳ್ಳಿಯೊಂದರ ಸಂಬಂಧಿಕರ ಮದುವೆಗೆ ಕರೆದುಕೊಂಡು ಹೋದಾಗ ಈ ಘಟನೆ ನಡೆದಿದೆ. ಇದನ್ನೂ ಓದಿ :CT Ravi: ನಿಯತ್ತು ಇಲ್ಲದ ನಾಯಿಗಳು ಪಾಕಿಸ್ತಾನದ ಪರವಾಗಿ ಬೊಗಳುತ್ತವೆ: ಸಿಟಿ ರವಿ ಘರ್ಜನೆ
ಬಾಲಕಿ ಹೊರಗೆ ಆಟವಾಡುತ್ತಿದ್ದಾಗ, ಆರೋಪಿ ರಹಮತುಲ್ಲಾ ಬಾಲಕಿಗೆ ಬಾಳೆಹಣ್ಣಿನ ಆಮಿಷವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮಗಳ ಕಾಣೆಯಾಗಿದ್ದರಿಂದ ಪೋಷಕರು ಮಗಳಿಗಾಗಿ ಹುಡುಕಾಡಿದ್ದಾಗ, ಪೊದೆಯೊಂದರಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಇದನ್ನೂ ಓದಿ :16 ವರ್ಷಗಳಲ್ಲಿ ಮೊದಲ ಭಾರಿಗೆ ವೇಗವಾಗಿ ಕೇರಳ ಪ್ರವೇಶಿಸಿ ಮುಂಗಾರು: ರೆಡ್ ಅಲರ್ಟ್ ಘೋಷಣೆ
ಆರೋಪಿ ರಹಮತುಲ್ಲಾನನ್ನು ಗ್ರಾಮಸ್ಥರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದು. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.