ಬೀದರ್ : ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ರಾಯಭಾರಿಯಾಗಿ ನೇಮಕವಾಗಿರುವ ಕುರಿತು ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ “ರಾಜ್ಯ ಸರ್ಕಾರಕ್ಕೆ ಅಭಿವೃದ್ದಿಗೆ ಅನುದಾನ ಕೊಡುವ ಯೋಗ್ಯತೆ ಇಲ್ಲ, ಆದರೆ ಬಾಲಿವುಡ್ ನಟಿಗೆ 6 ಕೋಟಿ ಕೊಡುತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಕನ್ನಡಿಗರಿಗೆ ಅವಮಾನ ಮಾಡುತ್ತಿದೆ ಎಂದು ಹೇಳಿದರು.
ಬೀದರ್ನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ವಿಜಯೇಂದ್ರ “ಮೈಸೂರು ಸ್ಯಾಂಡಲ್ ಸಂಸ್ಥೆ 1916ರಲ್ಲಿ ನಾಲ್ವಡಿ ಮಹಾರಾಜರು ಹುಟ್ಟು ಹಾಕಿದ್ದರು. ಅಂತಹ ಸಂಸ್ಥೆಗೆ ಬಾಲಿವುಡ್ ತಾರೆಯರನ್ನು ಕರೆತಂದ ಸರ್ಕಾರಕ್ಕೆ ಏನು ಹೇಳಬೇಕು..? ತಮನ್ನಾ ಅವರನ್ನು ರಾಯಭಾರಿ ಮಾಡುವುದು ಅನಿವಾರ್ಯ ಎಂದು ಸಚಿವರು ಹೇಳ್ತಾರೆ. ಆದರೆ ಈ ಅನಿವಾರ್ಯ ಸಂಸ್ಥೆಗೆ ಇದೆಯೋ ಅಥವ ಇನ್ಯಾರಿಗಾದರೂ ಇದೆಯಾ ಎಂಬ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ :ಕೋವಿಡ್ ಹೆಚ್ಚಳ: ಜನರ ಅಹವಾಲು ಸ್ವೀಕರಿಸಲು ಮಾಸ್ಕ್ ಧರಿಸಿ ಬಂದ CM
ಮುಂದುವರಿದು ಮಾತನಾಡಿದ ವಿಜಯೇಂದ್ರ “ರಾಯಭಾರಿಯಾಗಿ ಮಾಡಲು ನಮ್ಮ ರಾಜ್ಯದಲ್ಲಿ ಯಾರು ಚಲನಚಿತ್ರ ನಟ, ನಟಿಯರಿದ್ದಿಲ್ವಾ..? 6 ಕೋಟಿ ಕೊಟ್ಟು ಹೊರ ರಾಜ್ಯದವರನ್ನು ಯಾಕೆ ತಂದಿದ್ದೀರಾ?
ಇವರ ಯೋಗ್ಯತೆಗೆ ಶಾಸಕರಿಗೆ ಅಭಿವೃದ್ಧಿಗೆ ಹಣ ಕೊಡೋಕೆ ಆಗ್ತಿಲ್ಲ. ಇಂತಹದರಲ್ಲಿನ ತಮನ್ನಾಗೆ 6 ಕೋಟಿ ಕೊಡ್ತಿದ್ದಾರೆ. ಈ ರೀತಿ ಹಣ ಕೊಡುವ ಸರ್ಕಾರದ ಆಧ್ಯತೆ ಏನು ಅಂತ ಗಮನಿಸಬೇಕು ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ :ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸ್ಪೋಟ; ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಆರಂಭಿಸಲು ಸೂಚನೆ
ರಾಜ್ಯ ಸರ್ಕಾರ ಕನ್ನಡಿಗರಿಗೆ ಅಪಮಾನ ಮಾಡುವಂತಹ ಕೆಲಸ ಮಾಡುತ್ತಿದೆ. ಹಿಂದೆ ಕಾರ್ಯಕ್ರಮವೊಂದರಲ್ಲಿ ಸ್ಯಾಂಡಲ್ ವುಡ್ ನಟ-ನಟಿಯರ ನಟ್ಟು-ಬೊಲ್ಟು ಟೈಟ್ ಮಾಡ್ತಿನಿ ಅಂತ ಹೇಳಿದ್ದೀರಾ ಎಂಬ ಪರಿಣಾಮ ಹೀಗೆ ಮಾಡಿದ್ದಾರೆ ಎಂದು ಹೇಳಿದರು. ಈ ವೇಳೆ ತಮ್ಮನ್ನಾರನ್ನು KSDLಗೆ ರಾಯಭಾರಿಯಾಗಿ ನೇಮಿಸಲು ಡಿಕೆ ಶಿವಕುಮಾರ್ ಅವರ ಹೆಸರಿದೆಯ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ. ” ತಮನ್ನಾ ಭಾಟಿಯಾ ವಿಚಾರದಲ್ಲಿ ಡಿಕೆ ಶಿವಕುಮಾರ ಅವರನ್ನು ಯಾಕೆ ತರ್ತಿಯಾ ಎಂದ ಡಿಕೆಶಿ ಕುರಿತು ತಮ್ಮ ಸಾಫ್ಟ್ ಕಾರ್ನರ್ ತೋರಿಸಿದ್ದಾರೆ.