Thursday, January 16, 2025

ಅಂತರ್ಜಾತಿ ಪ್ರೇಮ | ನಡು ರಸ್ತೆಯಲ್ಲಿ ಯುವಕನ ಶೂಟೌಟ್..!

ಹಾಸನ : ಅಂತರ್ ಜಾತಿ ಪ್ರೇಮ ಕಲಹ ಕೊಲೆಯಲ್ಲಿ ಅಂತ್ಯವಾಗಿದ್ದು, ಯುವತಿಯ ಚಿಕ್ಕಪ್ಪ ಪ್ರಿಯಕರನನ್ನು ನಡುರಸ್ತೆಯಲ್ಲಿಯೇ ಗುಂಡಿಕ್ಕಿ ಕೊಂದಿದ್ದಾನೆ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಸೊಪ್ಪಿನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದೇ ಗ್ರಾಮದ ಮಧು (28) ಎಂಬ ಯುವಕನ ಕೊಲೆಯಾಗಿದೆ. ಸೊಪ್ಪಿನಹಳ್ಳಿ ಗ್ರಾಮದ ಸುಶ್ಮಿತ ಹಾಗೂ ಮಧು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಯುವತಿ ಅಪ್ರಾಪ್ತೆ ಹಿನ್ನೆಲೆಯಲ್ಲಿ 2019 ರಲ್ಲಿ ಆಲೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ಕೂಡಾ ದಾಖಲಾಗತ್ತು. ಇದಾದ ಬಳಿಕ ಮಧು‌ ಯುವತಿ ಮನೆಯ ಮುಂದೆ ಪದೇ ಪದೇ ಗಲಾಟೆ ಮಾಡುತ್ತಿದ್ದನೆಂದು ಆರೋಪಿಸಿದ್ದು, ಇದರಿಂದ ಕೋಪಗೊಂಡ ಯುವತಿ ಚಿಕ್ಕಪ್ಪ ರೂಪೇಶ್ ಇಂದು ಮನೆಯ ಮುಂದೆ ಪ್ರಿಯತಮೆಯನ್ನು ಚುಡಾಯಿಸುತ್ತಿದ್ದಾಗ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ. ಯುವತಿ ಚಿಕ್ಕಪ್ಪ ರೂಪೇಶ್ ಬೆಂಗಳೂರಿನಿಂದ ಬಂದು ಹೋಂ ಕ್ವಾರೆಂಟೈನ್ ಆಗಿದ್ದನು, ಶೂಟ್ ಔಟ್ ನಂತರ ಆರೋಪಿ ಪರಾರಿಯಾಗಿದ್ದಾನೆ. ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES