Saturday, May 24, 2025

‘ರೇಪ್​ ಮಾಡಿರೋದ್ಕೆ, ಬಾಳ್​ ಕೊಟ್ಟಿದ್ದೀನಿ’: ಮಡೆನೂರು ಮನು ಆಡಿಯೋ ವೈರಲ್​..!

ಬೆಂಗಳೂರು : ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮತ್ತು ಸಂತ್ರಸ್ಥೆಯ ನಡುವೆ ರಾಜಿ-ಸಂಧಾನ ಮಾಡಿರುವ ಕುರಿತು ಆಡಿಯೋ ವೈರಲ್​ ಆಗಿದ್ದು. ಈ ಆಡಿಯೋದಲ್ಲಿ ಮಾತನಾಡಿರುವ ಮನು ‘ರೇಪ್​ ಮಾಡಿರೋದ್ಕೆ, ಬಾಳ್​ ಕೊಟ್ಟಿದ್ದೀನಿ, ಆಕೆ ಇನ್ನು ಮುಂದೆ ನನ್ನ ಹೆಂಡ್ತಿ, ಆಕೆಯೆ ಜವಬ್ದಾರಿ ನನ್ನದು ಎಂದು ಹೇಳಿದ್ದಾನೆ.

ಇದನ್ನೂ ಓದಿ :ಕನ್ನಡದಲ್ಲೇ ಜನಪ್ರಿಯ ನಟಿಯರಿದ್ದರು, ತಮನ್ನಾ ಭಾಟಿಯಾ ಯಾಕೆ: ಸಂಸದ ಯದುವೀರ್ ಒಡೆಯರ್​

ಅತ್ಯಾಚಾರ ಆರೋಪದ ಮೇಲೆ ನಟ ಮಡೆನೂರು ಮನು ಕಂಬಿ ಎಣಿಸುವಂತಾಗಿದೆ. ಈ ಕುರಿತಾದ ಆಡಿಯೋ ವೈರಲ್​ ಆಗಿದ್ದು. ಮೂರನೇ ವ್ಯಕ್ತಿಯ ಸಮ್ಮುಖದಲ್ಲಿ ಮನು ಸಂತ್ರಸ್ಥ ಮಹಿಳೆ ಇನ್ನು ಮುಂದೆ ನನ್ನ ಹೆಂಡತಿ ಎಂದು ಹೇಳಿಕೊಂಡಿದ್ದಾನೆ.

ಆಡಿಯೋದಲ್ಲಿ ಏನಿದೆ..!

ಮೂರನೇ ವ್ಯಕ್ತಿಯ ಸಂಧಾನವ ವೇಳೆ ಈ ಆಡಿಯೋ ವೈರಲ್​ ಆಗಿದ್ದು. “ಆಕೆಯ ಜೊತೆ ನನಗೆ ಬಾಳಕಾಗ್ತಿಲ್ಲ, ಆಕೆಗೆ ಟೈಮ್​ ಕೊಡಕಾಗಿರಲಿಲ್ಲ ಅದಕ್ಕೆ ಸ್ವಲ್ಪ ದೂರ ಆಗಿದೆ. ಕಾನೂನು ಉಲ್ಟಾ ಮಾಡಿ ಮಾತಾಡುತ್ತಿಲ್ಲ, ರೇಪ್​ ಆಗಿರೋದಕ್ಕೆ, ಆಕೆ ಜೊತೆಗೆ ಸೇರಿರೋದಕ್ಕೆ ಬಾಳ್​ ಕೊಟ್ಟಿದ್ದೀನಿ. ಆಕೆಗೆ ನಾನು ಟೈಮ್​ ಕೊಡೊದಕ್ಕೆ ಆಗ್ತಿಲ್ಲ.
ಇಬ್ಬರು ಬಗೆಹರಿಸಿಕೊಳ್ಳಬೇಕು ಅಂತ ಶರಣಯ್ಯ ಸಾರ್​ ಹೇಳಿದ್ರು. ಕನಸಿದ್ರೆ ಬದುಕ್ತಿರಾ, ಇಲ್ಲಾ ಅಂದ್ರೆ ಸಾಯ್ತೀರಾ ಅಂತ ಹೇಳಿದ್ರು.

ಇದನ್ನೂ ಓದಿ :ಬೆದರಿಕೆ ಹಾಕಿ ವಿಡಿಯೋ ಮಾಡಿಸಿಕೊಂಡಿದ್ದಾನೆ: ವಿಚಾರಣೆ ಮುಗಿಸಿ ಶಾಕಿಂಗ್​ ಹೇಳಿಕೆ ಕೊಟ್ಟ ಸಂತ್ರಸ್ಥೆ

ಆಕೆಗೆ ನಾನು ತಾಳಿ ಕಟ್ಟಿದ್ದೀನಿ ಅವಳು ನನ್ನ ಹೆಂಡತಿ, ಆಕೆಯ ಜೊತೆ ಹೇಗೆ ಬೇಕಾದರು ಇರ್ತಿನಿ, ಇದನ್ನ
ನನ್ನ ಹೆಂಡತಿ ದಿವ್ಯಾಗೆ ಬೇಕಾದ್ರು ಹೇಳ್ತೀನಿ. ಅವಳ ಗಂಡನ್ನ ಒಳಿಸಿಕೊಳ್ಳೋದು ಆವಳ ಜವಬ್ದಾರಿ, ಆಕೆಗೆ ನಾನು ತಾಳಿ ಕಟ್ಟುತ್ತೀನಿ. ನಾವು ಹಳ್ಳಿ ಕಡೆಯವರು, ನಮಗೆ ಬೇಜರಾದ್ರೆ ತಿಂಗಳಾದರು ಮನೆಗೆ ಹೋಗಲ್ಲ. ಆಕೆಗೆ ತಾಳಿ ಕಟ್ಟಿರೋದಕ್ಕೆ ನಾನು ಉಪ್ಪಿಕೊಂಡಿದ್ದೇನೆ.

ಆಕೆ ನನ್ನ ಹೆಂಡತಿ ಅಂತ ಎಲ್ಲರ ಮುಂದೆ ಹೇಳ್ತೀನಿ, ಎಲ್ಲರ ಜೊತೆ ಎರಡನೇ ಸಲ ತಾಲಿ ಕಟ್ಟೋದಕ್ಕೆ ಹಾಗಲ್ಲ. ಇದನ್ನ ಎಲ್ಲರ ಮುಂದೆ ಹೇಳ್ತೀನಿ. ನಾನು ನನ್ನ ಹೆಂಡತಿನ ಹೇಗಾದರು ನೋಡ್ಕೋತಿನಿ. ಬೆಳಿಗ್ಗೆಗೆ ಏನು ಬೇಕು ಅಂತ ಕೇಳು ತಂದಾಕುತ್ತೀನಿ. ಇನ್ನು ಮುಂದೆ ನಿನ್ನ ಅಕೌಂಟ್​ಗೆ ಬರೋ ದುಡೆಲ್ಲಾ ನನಗೆ ಕೊಡು ಎಂದು ಈ ಆಡಿಯೋದಲ್ಲಿ ಮನು ಹೇಳಿದ್ದಾನೆ.

 

RELATED ARTICLES

Related Articles

TRENDING ARTICLES