ಮೈಸೂರು : ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ರಾಮಲಲ್ಲಾ ಮೂರ್ತಿ ನಿರ್ಮಾಣಕ್ಕೆ ಬಳಸಲಾದ ಕೃಷ್ಣಶಿಲೆ ದೊರೆತ ಈ ಸ್ಥಳವಾದ ಗುಜ್ಜೇಗೌಡನಪುರದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕುಟುಂಬಸ್ಥರು ಮತ್ತು ಗ್ರಾಮಸ್ಥರು ನಡೆಸುತ್ತಿದ್ದ ಭೂಮಿ ಪೂಜೆಗೆ ದಲಿತ ಸಂಘಟನೆಗಳು ಅಡ್ಡಿಪಡಿಸಿ ದಾಂಧಲೆ ನಡೆಸಿದ್ದಾರೆ.
ಇದನ್ನೂ ಓದಿ :ಪರಂ ವಿರುದ್ದದ ತನಿಖೆಗೆ ಮಹಾ ನಾಯಕನಿಂದ ಪತ್ರ: ರಾಜಕೀಯದಲ್ಲಿ ಇವೆಲ್ಲ ಇರುತ್ತೆ ಎಂದ ಜಾರಕಿಹೊಳಿ
ಮೈಸೂರು ತಾಲೂಕಿನ, ಗುಜ್ಜೇಗೌಡನಪುರದಲ್ಲ ಅಯೋಧ್ಯೆ ಮೂಲ ಶಿಲೆ ಸಿಕ್ಕ ಸ್ಥಳದಲ್ಲಿ ಗಲಾಟೆ ನಡೆದಿದ್ದು. ದಕ್ಷಿಣ ಅಯೋಧ್ಯೆ ನಿರ್ಮಿಸಲು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಮುಂದಾಗಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿರುವ ದಲಿತ ಸಂಘರ್ಷ ಸಮಿತಿಯ ಮುಖಂಡರು ದೇವಸ್ಥಾನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದು. ನಡೆಯುತ್ತಿದ್ದ ಪೂಜಾ-ಕೈಂಕರ್ಯಕ್ಕೆ ಅಡ್ಡಿಪಡಿಸಿದ್ದಾರೆ. ಇಲ್ಲಿ ದೇವಸ್ಥಾನ ನಿರ್ಮಾಣ ಮಾಡಲು ಬಿಡಲ್ಲ, ಈ ಜಾಗದಲ್ಲಿ ಅಂಬೆಡ್ಕರ್ ಪ್ರತಿಮೆ ನಿರ್ಮಿಸಿ ಎಂದು ಪಟ್ಟು ಹಿಡಿದಿದ್ದಾರೆ.
ಬಾಲರಾಮ ಶಿಲೋದ್ಭವಕ್ಕೆ ಪೇಜಾವರ ಶ್ರೀಗಳು ಚಾಲನೆ ನೀಡಬೇಕಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದ ರಾಜವಂಶಸ್ಥ ಯದುವೀರ್ ಒಡೆಯರ್, ಶಾಸಕ ಜಿ.ಟಿ.ದೇವೇಗೌಡ, ಆರ್ ಎಸ್ ಎಸ್ ಮುಖಂಡ ಮಾ.ವೆಂಕಟೇಶ್ಜೀ, ಶಿಲ್ಪಿ ಅರುಣ್ ಯೋಗಿರಾಜ್, ಇತಿಹಾಸ ತಜ್ಞ ಶೆಲ್ವಪಿಲೈ ಅಯ್ಯಂಗಾರ್ ಅವರು ಭೇಟಿ ನೀಡಲಿದ್ದರು. ಆದರೆ ದಲಿತ ಮುಖಂಡರು ಏಕಾಏಕಿ ಸ್ಥಳಕ್ಕೆ ಬಂದು ಸ್ಥಳದಲ್ಲಿದ್ದ ಫ್ಲೆಕ್ಸ್ಗಳನ್ನು ಹರಿದು ಹಾಕಿ ಕಿಡಿಕಾರಿದ್ದಾರೆ. ಇದನ್ನೂ ಓದಿ :ಗ್ಯಾಂಗ್ರೇಪ್ ಆರೋಪಿಗಳಿಗೆ ಜಾಮೀನು: ಜೈಲಿನಿಂದಲೇ ರೋಡ್ ಶೋ ನಡೆಸಿದ ಆರೋಪಿಗಳು
ರಾಮಲಲ್ಲಾ ಮೂರ್ತಿ ಸಿಕ್ಕ ಸ್ಥಳದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ ಮಾಡ್ತೀವಿ..!
ಅಯೋಧ್ಯೆ ಶ್ರೀರಾಮಲಲ್ಲ ಮೂರ್ತಿ ಸಿಕ್ಕ ಜಾಗದಲ್ಲಿ ದಕ್ಷಿಣ ಅಯೋಧ್ಯೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿರುವ ದಲಿತ ಸಂಘರ್ಷ ಸಮಿತಿ. ‘ದೇವಸ್ಥಾನ ನಿರ್ಮಾಣ ಮಾಡಿ ಮೌಡ್ಯ ಭಿತ್ತಬೇಡಿ. ಶ್ರೀರಾಮಲಲ್ಲ ಮೂರ್ತಿ ಸಿಕ್ಕ ಜಾಗದಲ್ಲಿ ನಳಂದ ವಿಶ್ವವಿದ್ಯಾಲಯದ ಮಾಡ್ತೀವಿ. ಜಮೀನು ಮಾಲೀಕ ರಾಮದಾಸ್ ಅವರ ಕುಟುಂಬಕ್ಕೆ ಶಿಕ್ಷಣ ಸಿಕ್ಕಿದ್ದು ಬಾಬಾ ಸಾಹೇಬರು ಕೊಟ್ಟ ಸಮಾನತೆಯಿಂದ. ಅದೇ ಜಾಗದಲ್ಲಿ ನಳಂದ ವಿವಿ ಕಟ್ಟುತ್ತೇವೆ. ಜಮೀನಿನ ಮೂಲ ಮಾಲೀಕರು ದೇವಸ್ಥಾನ ನಿರ್ಮಾಣ ಮಾಡೋದು ಬೇಡ ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿಕೆ ನೀಡಿದ್ದಾರೆ.