ಹಾವೇರಿ : ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ 7 ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು. ಜೈಲಿನಿಂದ ಬಿಡುಗಡೆಗೊಂಡ ಆರೋಪಿಗಳು ಜೈಲಿನಿಂದ ರೋಡ್ ಶೋ ನಡೆಸಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಏನಿದು ಪ್ರಕರಣ..!
ಕಳೆದ ಜನವರಿ 8, 2024 ರಂದು ತನ್ನ ಮೇಲೆ ಗ್ಯಾಂಗ್ ರೇಪ್ ನಡೆದಿರೋದಾಗಿ ಸಂತ್ರಸ್ಥೆಯೊಬ್ಬಳು ದೂರು ನೀಡಿದ್ದಳು. ಈ ಪ್ರಕರಣದಲ್ಲಿ ಪೊಲೀಸರು ಸುಮಾರು 19 ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಕಳೆದ 10 ತಿಂಗಳ ಹಿಂದೆಯೇ 12 ಮಂದಿ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದರು. ಆದರೆ ಈ ಪ್ರಕರಣದ ಪ್ರಮುಖ 7 ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನೂ ಓದಿ :ತಾಳಿ ಕಟ್ಟುವ ವೇಳೆ ಮುರಿದು ಬಿತ್ತು ಮದುವೆ: ‘ಕಡೇ ಕ್ಷಣದಲ್ಲಿ ಕರಿಮಣಿ ಮಾಲೀಕ ನೀನಲ್ಲ’ ಎಂದ ವಧು
ಆದರೆ ಅತ್ಯಾಚಾರ ಸಂತ್ರಸ್ಥೆ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆಗಳನ್ನು ಉಳಿಸಿಕೊಳ್ಳಲು ವಿಫಲವಾದ ಹಿನ್ನಲೆ. ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಎಲ್ಲಾ 7 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಇದೀಗ ಈ ಆರೋಪಿಗಳು ರೋಡ್ ಶೋ ನಡೆಸಿರುವ ಘಟನೆ ವರದಿಯಾಗಿದೆ.
A1 ಆರೋಪಿ- ಅಪ್ತಾಬ್ ಚಂದನಕಟ್ಟಿ, A2- ಮದರ್ ಸಾಬ್ ಮಂಡಕ್ಕಿ, A3- ಸಮಿವುಲ್ಲಾ ಲಾಲನವರ
A7- ಮಹಮದ್ ಸಾದಿಕ್ ಅಗಸಿಮನಿ, A8- ಶೊಯಿಬ್ ಮುಲ್ಲಾ, A11- ತೌಸಿಪ್ ಚೋಟಿ, A13- ರಿಯಾಜ್ ಸಾವಿಕೇರಿಗೆ ನ್ಯಾಯಲಯ ಜಾಮೀನು ಮಂಜೂರು ಮಾಡಿದ್ದು. ಜಾಮೀನು ಸಿಗುತ್ತಲೇ ಆರೋಪಿಗಳಿಂದ ರೋಡ್ ಶೋ ನಡೆದಿದೆ. ಇದನ್ನೂ ಓದಿ :ತಮ್ಮನ್ನಾಗೆ 2.5 ಮಿಲಿಯನ್ ಫಾಲೋವರ್ಸ್ ಇದಾರೆ, ಅದಕ್ಕೆ ರಾಯಭಾರಿ ಮಾಡಿದ್ದೇವೆ: ಎಂ.ಬಿ ಪಾಟೀಲ್
ಜೈಲಿನಿಂದ, ಅಕ್ಕಿ ಆಲೂರು ಪಟ್ಟಣದವರೆಗೆ ಆರೋಪಿಗಳು ರೋಡ್ ಶೋ ನಡೆಸಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಆರೋಪಿಗಳು 5 ಕಾರುಗಳಲ್ಲಿ 20ಕ್ಕು ಹೆಚ್ಚು ಹಿಂಬಾಲಕರ ಜೊತೆ ಮೆರವಣಿಗೆ ನಡೆಸಿದ್ದಾರೆ.