ಹಾಸನ, ಮೇ.23: ಯುವತಿಯೊಬ್ಬಳು ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದಿರುವ ಘಟನೆ ಹಾಸನದಲ್ಲಿ ನಡೆದಿದ್ದು. ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಮದುವೆ ಬೇಡ ಎಂದು ಹಠ ಹಿಡಿದು ಮದುವೆಯನ್ನೇ ನಿಲ್ಲಿಸಿದ್ದಾಳೆ.
ಇದನ್ನೂ ಓದಿ :ತಮ್ಮನ್ನಾಗೆ 2.5 ಮಿಲಿಯನ್ ಫಾಲೋವರ್ಸ್ ಇದಾರೆ, ಅದಕ್ಕೆ ರಾಯಭಾರಿ ಮಾಡಿದ್ದೇವೆ: ಎಂ.ಬಿ ಪಾಟೀಲ್
ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದ್ದು. ಹಾಸನ ತಾಲ್ಲೂಕಿನ, ಬೂವನಹಳ್ಳಿ ಗ್ರಾಮದ ಪಲ್ಲವಿ ಹಾಗೂ ಆಲೂರು ತಾಲ್ಲೂಕಿನ ವೇಣುಗೋಪಾಲ.ಜಿ ಜೊತೆ ಇಂದು ಮದುವೆ ನಿಶ್ಚಯವಾಗಿತ್ತು. ಮಹೂರ್ತದ ವೇಳೆಗೆ ಯುವತಿ ಪಲ್ಲವಿಗೆ ಪೋನ್ ಕರೆಯೊಂದು ಬಂದಿದ್ದು. ಇದಾದ ನಂತರ ಯುವತಿ ಮದುವೆ ಬೇಡ ಎಂದು ವರಸೆ ತೆಗೆದಿದ್ದಾಳೆ.
ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ಪಲ್ಲವಿ ಮದುವೆ ಬೇಡ ಎಂದು ಮನಸು ಬದಲಿಸಿದ್ದು. ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಈ ವೇಳೆ ಯುವತಿ ಮನವೊಲಿಸಲು ಶತಾಯಗತಾಯ ಪೋಷಕರು ಪ್ರಯತ್ನ ಪಟ್ಟಿದ್ದು. ನಗರ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಯುವತಿ ಮದುವೆ ಬೇಡವೇ-ಬೇಡ ಎಂದು ಹಠ ಹಿಡಿದಿದ್ದು. ಮದುವೆ ಮನೆಯನ್ನು ತ್ಯಜಿಸಿ ಹೊರ ಹೋಗಿದ್ದಾಳೆ. ಇದನ್ನೂ ಓದಿ :ಹೆಂಡತಿ ಜೊತೆ ಜಗಳ: ಮದುವೆ ಮಾಡಿಸಿದ ಬ್ರೋಕರರನ್ನೇ ಕೊಲೆ ಮಾಡಿದ ಗಂಡ
ಯುವತಿ ಮದುವೆ ಬೇಡವೆಂದಿದ್ದಕ್ಕೆ, ಯುವಕ ಕೂಡ ಮದುವೆ ಬೇಡವೆಂದು ಹೇಳಿದ್ದು. ಮಗಳ ಮದುವೆ ಮುರಿದಿದ್ದನ್ನು ಕಂಡ ಪೋಷಕರು ಕಣ್ಣೀರಿಟ್ಟಿದ್ದಾರೆ.