ಮಂಗಳೂರು: ಹೆಂಡತಿ ಜೊತೆ ಜಗಳ ಮಾಡಿಕೊಂಡ ಗಂಡನೊಬ್ಬ ಮದುವೆ ಮಾಡಿಸಿದ ಬ್ರೋಕರ್ ತಲೆ ಕಡಿದು ಕೊಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು. ಕೊಲೆಯಾದ ದುರ್ದೈವಿಯನ್ನು ಸುಲೇಮಾನ್ ಎಂದು ಗುರುತಿಸಲಾಗಿದೆ.
ಮಂಗಳೂರು ಹೊರವಲಯದ ವಳಚ್ಚಿಲ್ನಲ್ಲಿ ಘಟನೆ ನಡೆದಿದ್ದು. ಬ್ರೋಕರ್ ಸುಲೇಮಾನ್ ತನ್ನ ಸಂಬಂಧಿ ಯುವತಿಯನ್ನು ಮುಸ್ತಫಾಗೆ ಮದುವೆ ಮಾಡಿ ಕೊಟ್ಟಿದ್ದ. ಕಳೆದ ಎಂಟು ತಿಂಗಳ ಹಿಂದೆ ಮದುವೆಯಾಗಿದ್ದ ಜೋಡಿಗಳ ಜೀವನದಲ್ಲಿ ಕೆಲ ತಿಂಗಳಿಂದ ಜಗಳ ಆರಂಭವಾಗಿತ್ತು. ಎರಡು ತಿಂಗಳ ಹಿಂದೆ ಯುವತಿ ಮುಸ್ತಫಾನನ್ನು ಬಿಟ್ಟು ಹೋಗಿದ್ದಳು. ಇದನ್ನೂ ಓದಿ :ಕೋವಿಡ್ ಹೆಚ್ಚಳ, ಮಾಸ್ಕ್ ಕಡ್ಡಾಯಗೊಳಿಸಿದ ಆಂದ್ರ ಸರ್ಕಾರ: ರಾಜ್ಯದಲ್ಲೂ ಹೆಚ್ಚುತ್ತಿದೆ ಮಹಾಮಾರಿ
ಇದರ ರಾಜಿ-ಸಂಧಾನಕ್ಕೆ ಎಂದು ಸುಲೇಮಾನ್ ನಿನ್ನೆ(ಮೇ.22) ರಾತ್ರಿ ಮುಸ್ತಫಾನ ಮನೆಗೆ ಬಂದಿದ್ದನು. ಮುಸ್ತಾಫ ತನ್ನ ಇಬ್ಬರು ಮಕ್ಕಳನ್ನು ಜೊತೆಗೆ ಕರೆದುಕೊಂಡು ಬಂದಿದ್ದನು. ಆದರೆ ಈ ವೇಳೆ ಮಾತುಕತೆಗೆ ಬರುತ್ತಿದ್ದಂತೆ ರೊಚ್ಚಿಗೆದ್ದ ಮುಸ್ತಫಾ, ಸುಲೇಮಾನ್ ಜೊತೆ ಜಗಳ ತೆಗೆದಿದ್ದು. ಸುಲೇಮಾನ್ನನ್ನು ಅಟ್ಟಾಡಿಸಿಕೊಂಡು ಹೋಗಿ ತಲವಾರ್ನಿಂದ ಕತ್ತು ಕಡಿದು ಕೊಲೆ ಮಾಡಿದ್ದಾನೆ. ಇದನ್ನೂ ಓದಿ :ಗುದದ್ವಾರದ ನೋವಿಗೆ ಚಿಕಿತ್ಸೆ ಪಡೆಯಲು ಪಶು ಆಸ್ಪತ್ರೆಗೆ ಬಂದ ಕಪಿರಾಯ: ವಿಡಿಯೋ ವೈರಲ್
ಈ ವೇಳೆ ಅಡ್ಡಬಂದ ಸುಲೇಮಾನ್ ಮಕ್ಕಳಿಳಾದ ರಿಯಾಬ್ ಮತ್ತು ಸಿಬಾಗ್ಗೂ ತಲವಾರ್ ಏಟು ಬಿದ್ದಿದ್ದು. ಇಬ್ಬರನ್ನು ಅಡ್ಯಾರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆರೋಪಿ ಮುಸ್ತಫಾನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.