ಬಾಗಲಕೋಟೆ: ಮಂಗನಿಂದ ಮಾನವ ಎಂಬ ಮಾತು ಎಷ್ಟು ಸತ್ಯ ಎಂಬುದಕ್ಕೆ ಈ ಸ್ಟೋರಿ ಸಾಕ್ಷಿಯಾಗಿದೆ. ಮನುಷ್ಯರಷ್ಟೇ ಬುದ್ದಿಶಾಲಿಯಾಗಿರುವ ಮಂಗಗಳು ಮಾತನಾಡಲು ಬರುವುದಿಲ್ಲ ಎಂಬುದನ್ನು ಬಿಟ್ಟರೆ ಅವುಗಳು ಮನಷ್ಯನಂತೆ ಯೋಚಿಸುವ ಮತ್ತು ಕೆಲಸ ಮಾಡುವ ಸಾಮರ್ಥ್ಯವಿದೆ ಎಂಬುದು ಬಾಗಲಕೋಟೆಯಲ್ಲಿ ನಡೆದ ಘಟನೆಯಿಂದ ರುಜುವಾತಾಗಿದೆ.
ಅಂದಹಾಗೆ, ಮನುಷ್ಯನಿಗೆ ಏನಾದರೂ ಆರೋಗ್ಯ ಸಮಸ್ಯೆಯಾದರೆ ತಕ್ಷಣ ಆಸ್ಪತ್ರೆಗೆ ಹೋಗುತ್ತಾನೆ. ಆದರೆ, ಮೂಕ ಪ್ರಾಣಿಗಳಿಗೆ ಸಮಸ್ಯೆಯಾದರೆ ಎಲ್ಲಿಗೆ ಹೋಗಬೇಕು? ಪಶುವೈದ್ಯಕೀಯ ಆಸ್ಪತ್ರೆಗಳಿದ್ದರು ಕೂಡ ಪ್ರಾಣಿಗಳಿಗೆ ಅದರ ಬಗ್ಗೆ ಅರಿವು ಇರುವುದಿಲ್ಲ. ಆದರೆ ಇಲ್ಲೊಂದು ಚಾಲಕಿ ಮಂಗ ಗುದದ್ವಾರದಲ್ಲಿನ ನೋವು ಸಹಿಸಲಾರದೇ ತಾನಾಗೆ ಪಶು ಆಸ್ಪತ್ರೆಗೆ ಆಗಮಿಸಿದ ಅಪರೂಪದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೂಡೂರಿನಲ್ಲಿ ನಡೆದಿದೆ. ಇದನ್ನೂ ಓದಿ :Viral Video: ಸೆಕೆ ತಾಳಲಾರದೆ ಎಟಿಎಂ ಎಸಿಯಲ್ಲಿ ವಾಸ್ತವ್ಯ ಹೂಡಿದ ಕುಟುಂಬ
ಗೂಡೂರಿನ ಎಸ್ ಸಿ ಪಶು ಆಸ್ಪತ್ರೆಗೆ ಬಂದ ಮಂಗವೊಂದು, ಪಶು ವೈದ್ಯರಿಗೆ ತನ್ನ ಗುದದ್ವಾರದ ಕಡೆ ಕೈ ತೋರಿಸಿ, ತನ್ನ ಸಮಸ್ಯೆಯನ್ನು ಹೇಳಿಕೊಂಡಿದೆ. ತನಗಾದ ವೇದನೆಯನ್ನು ಕೈ ಸನ್ನೆ ಮೂಲಕ ಕಪಿರಾಯ ತೋರಿಸಿದ್ದಾನೆ. ತಕ್ಷಣ ಕೋತಿಯ ನೋವನ್ನು ಅರ್ಥ ಮಾಡಿಕೊಂಡ ವಶುವೈದ್ಯ ಜಿ.ಜಿ. ಬಿಲ್ಲೋರ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಯನ್ನು ಪಡೆದ ಮಂಗ ನಂತರ ಅಲ್ಲಿಂದ ಹೊರಟು ಹೋಯಿತು. ಈ ದೃಶ್ಯವನ್ನು ಕಂಡ ಸ್ಥಳೀಯರು ಹುಬ್ಬೇರಿಸಿದ್ದು, ಕೋತಿಯ ಬುದ್ಧಿವಂತಿಕೆಯನ್ನು ಕೊಂಡಾಡಿದ್ದಾರೆ. ಇದನ್ನೂ ಓದಿ :Z+ ಭದ್ರತೆಯೊಂದಿಗೆ ರಸ್ತೆ ದಾಟಿದ ಬಾಲಕಿ: ಶ್ವಾನಗಳ ಹೃದಯಸ್ಪರ್ಷಿ ವಿಡಿಯೋ ವೈರಲ್