ರಾಮನಗರ : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದ್ದು. ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲಾಗಿದೆ.
ಸಚಿವ ಸಂಪುಟ ಸಭೆ ಮುಗಿದ ನಂತರ ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿಕೆ. ಶಿವಕುಮಾರ್ “ರಾಮನಗರ ಜಿಲ್ಲೆಗೆ ಇವತ್ತಿನಿಂದ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಸಲು ತೀರ್ಮಾನ ಆಗಿದೆ. ರಾಮನಗರ,ಹೊಸಕೋಟೆ ಎಲ್ಲವೂ ಮೊದಲು ಬೆಂಗಳೂರು ಅಂತಿತ್ತು, ನಂತರ ಇವುಗಳನ್ನ ಬೇರ್ಪಡಿಸಿದರು ಎಂದು ಹೇಳಿದರು. ಇದನ್ನೂ ಓದಿ :‘ಮೊದಲು ಇಲ್ಲಿಂದ ಎದ್ದು ಹೊರಹೋಗು’: ವರದಿಗಾರನ ಮೇಲೆ ಟ್ರಂಪ್ ಗರಂ
ಜಿಲ್ಲೆ ಹೆಸರು ಬದಲಿಸಲು ಕೇಂದ್ರದ ಒಪ್ಪಿಗೆ ಬೇಕಿಲ್ಲ..!
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ತಿರಸ್ಕರಿಸಿತ್ತು. ಈ ಕುರಿತು ಮಾತನಾಡಿದ ಡಿಕೆಶಿ ‘ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಕೇಂದ್ರದ ಒಪ್ಪಿಗೆಯ ಅವಶ್ಯಕತೆ ಇಲ್ಲ. ಈ ವಿಷಯವನ್ನು ಕೇಂದ್ರಕ್ಕೆ ತಿಳಿಸಬೇಕಿತ್ತು, ಅದನ್ನ ನಾವು ತಿಳಿಸಿದ್ದೇವೆ. ಈ ಹಿಂದೆಯೂ ಗದಗ, ಚಾಮರಾಜ ನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡುವಾಗಲೂ ಕೇಂದ್ರ ಸರ್ಕಾರದ ಬಳಿ ಕೇಳಿರಲಿಲ್ಲ. ರಾಮನಗರ ಅಂತ ಹೆಸರು ಇಟ್ಟಾಗಲು ಕೇಳಿಲ್ಲ ಎಂದು ಹೇಳಿದರು. ಇದನ್ನೂ ಓದಿ :ರಾಕೇಶ್ ಪೂಜಾರಿ ನೆನೆದು ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೇಲೆ ಕಣ್ಣೀರಿಟ್ಟ ಕಲಾವಿದರು
ಇನ್ನು ರಾಮನಗರ ಹೆಸರು ಬದಲಾವಣೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷ ವಿರೋಧಿಸುತ್ತಿದ್ದು. ಹೆಸರು ಬದಲಾವಣೆಯಿಂದ ಅಭಿವೃದ್ದಿ ಆಗುವುದಿಲ್ಲ ಎಂದು ಟೀಕಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿ ಡಿಕೆ ಶಿವಕುಮಾರ್ ‘ಅವರು ಕೆಲ ಸಮಯ ಕಾದು ನೋಡಲಿ’ ಎಂದು ಉತ್ತರಿಸಿದರು.