ರಾಜಸ್ಥಾನ : ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಬಿಕನೇರ್ಗೆ ಆಗಮಿಸಿ ಅನೇಕ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಈ ವೇಳೆ ಮಾತನಾಡಿದ ಮೋದಿ ” ಪಾಕಿಸ್ತಾನಕ್ಕೆ ನಾವು ಬಲವಾದ ಸಂದೇಶ ನೀಡಿದ್ದೇವೆ, ಪಹಲ್ಗಾಂನಲ್ಲಿ ನಡೆದ ದಾಳಿಗೆ ನಾವು ಕೇಲವ 22 ನಿಮಿಷಗಳಲ್ಲಿ ಸೇಡು ತೀರಿಸಿಕೊಂಡಿದ್ದೇವೆ” ಎಂದು ಹೇಳಿದರು.
ಬಿಕಾನೆರ್ ಜಿಲ್ಲೆಯ ದೇಶ್ನೋಕ್ನಲ್ಲಿ ದೇಶದ ಅನೇಕ ಭಾಗಗಳಲ್ಲಿ ನಿರ್ಮಾಣವಾಗಿರುವ 103 ರೈಲು ನಿಲ್ದಾಣಗಳಲ್ಲಿ ಉದ್ಘಾಟಿಸಿದ ಮೋದಿ, ಬಿಕಾನೆರ್-ಬಾಂದ್ರಾ ರೈಲಿಗೆ ಹಸಿರು ನಿಶಾನೆ ತೋರಿದರು. ಇದರೊಂದಿಗೆ ಸುಮಾರು 26 ಸಾವಿರ ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಿದರು. ಇದನ್ನೂ ಓದಿ :ಮದುವೆ ಮಧ್ಯೆ ಶಿಕ್ಷಣಕ್ಕೆ ಮಹತ್ವ: ತಾಳಿ ಕಟ್ಟಿಸಿಕೊಂಡು ಪರೀಕ್ಷೆಗೆ ಹಾಜರಾದ ಯುವತಿಯರು
ಕಾರ್ಯಕ್ರಮದಲ್ಲಿ ಭಾಷಣ ಆರಂಭಿಸಿದ ಮೋದಿ ರಾಜಸ್ಥಾನಿ ಶೈಲಿಯಲ್ಲಿ “ರಾಮ್-ರಾಮ್” ಎಂದು ಹೇಳುವ ಮೂಲಕ ತಮ್ಮ ಭಾಷಣ ಪ್ರಾರಂಭಿಸಿದರು. ‘ಪಹಲ್ಗಾಂ ದಾಳಿಯ ಬಗ್ಗೆ ಮಾತನಾಡಿದ ಮೋದಿ, ಈ ದಾಳಿಯ ನಂತರ ನಾವು ಸೇನೆಗೆ ಪೂರ್ಣ ಸ್ವಾತಂತ್ರ್ಯ ನೀಡಿದೆವು. ಮೂರು ಸೇನೆಗಳು ಉಗ್ರರ ವಿರುದ್ದ ಚಕ್ರವ್ಯೂಹ ನಿರ್ಮಿಸಿದ್ದವು. ಇದರಿಂದ ಪಾಕಿಸ್ತಾನ ನಮ್ಮ ಮುಂದೆ ಮಂಡಿಯೂರಿತು, ಏಪ್ರೀಲ್ 22ರಂದು ನಡೆದ ದಾಳಿಗೆ ನಾವು 22 ನಿಮಿಷಗಳಲ್ಲಿ ಪ್ರತಿಕ್ರಿಯೆ ನೀಡಿ 9 ದೊಡ್ಡ ಭಯೋತ್ಫಾದಕ ಅಡಗುತಾಣ ನಾಶ ಮಾಡಿದ್ದೇವೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಮೋದಿ ” ಸಿಂಧೂರ ಮದ್ದು-ಗುಂಡಾಗಿ ಬದಲಾದರೆ ಏನಾಗುತ್ತದೆ ಎಂದು ಪ್ರಪಂಚವೇ ನೋಡಿದೆ, ಸಿಂದೂರ ಅಳಿಸಲು ಹೊರಟವರನ್ನು ನಾವು ಮಣ್ಣಾಗಿಸಿದ್ದೇವೆ. ಈಗ ಭಾರತ ಮಾತೆಯ ಸೇವಕ ಇಲ್ಲಿ ಎದೆ ಮೇಲೆತ್ತಿ ನಿಂತಿದ್ದಾನೆ ಎಂದು ಮೋದ ಹೇಳಿದರು. ಇದನ್ನೂ ಓದಿ :ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ದ ರೇಪ್ ಕೇಸ್
ಪ್ರಧಾನಮಂತ್ರಿಯವರ ಈ ಭೇಟಿಯನ್ನು ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ದೃಷ್ಟಿಕೋನದಿಂದ ಬಹಳ ಮಹತ್ವದ್ದಾಗಿ ಪರಿಗಣಿಸಲಾಗುತ್ತಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಒಂದು ತಿಂಗಳ ನಂತರ ಬಿಕಾನೇರ್‌ಗೆ ಬಂದು ಪಾಕಿಸ್ತಾನದ ವಿರುದ್ಧ ಇಷ್ಟೊಂದು ಬಲವಾದ ಸಂದೇಶವನ್ನು ನೀಡುವುದು ಸಹ ಕಾರ್ಯತಂತ್ರದ ಮಹತ್ವದ್ದಾಗಿದೆ.
ದೇಶ್ನೋಕ್ ವಾಯುನೆಲೆಯಲ್ಲಿ ಇಳಿದ ನಂತರ, ಮೋದಿ ಮೊದಲು ಕರ್ಣಿ ಮಾತಾ ದೇವಸ್ಥಾನವನ್ನು ತಲುಪಿದರು. ದರ್ಶನದ ನಂತರ, ಅವರು ದೇಶ್ನೋಕ್ ರೈಲು ನಿಲ್ದಾಣಕ್ಕೆ ಮತ್ತು ನಂತರ ಪಲಾನದಲ್ಲಿರುವ ಸಭೆ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿ ಒಬ್ಬ ಮಹಿಳೆ ಅವರಿಗೆ ಎತ್ತಿನ ಬಂಡಿಯ ಮಾದರಿಯನ್ನು ನೀಡಿ ಅವರ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದಳು. ಆದರೆ ಮೋದಿ ಸ್ವತಃ ಆ ಮಹಿಳೆಗೆ ನಮಸ್ಕರಿಸಿ ಸ್ವಾಗತಿಸಿದರು.