ಹಾಸನ: ಹೃದಯಘಾತದಿಂದ ಕುಸಿದು ಬಿದ್ದು ಓರ್ವ ಯುವತಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಮೃತ ಯುವತಿಯನ್ನು 19 ವರ್ಷದ ಸಂದ್ಯಾ ಎಂದು ಗುರುತಿಸಲಾಗಿದೆ. ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಹಾಸನದ ಅಭಿಷೇಕ ಎಂಬ 19 ವರ್ಷದ ಯುವಕ ಹೃದಯಘಾತಕ್ಕೆ ಸಾವನ್ನಪ್ಪಿದ್ದಾನೆ.
ಹಾಸನದ, ಹೊಳೆನರಸೀಪುರ ಪಟ್ಟಣದ, ಮಡಿವಾಳ ಬಡಾವಣೆಯಲ್ಲಿ ಘಟನೆ ನಡೆದಿದ್ದು. ವೆಂಕಟೇಶ್-ಪೂರ್ಣಿಮ ದಂಪತಿ ಪುತ್ರಿ ಸಂಧ್ಯಾ ಅಂತಿಮ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದಳು. ಕೆಲ ವರ್ಷಗಳಿಂದ ಬಿಪಿ-ಶುಗರ್‌ನಿಂದ ಬಳಲುತ್ತಿದ್ದ ಸಂಧ್ಯಾ ಬಾತ್ರೂಂನಲ್ಲಿ ಹೃದಯಘಾತವಾಗಿ ಕುಸಿದು ಬಿದ್ದಿದ್ದಾರೆ. ಈ ವೇಲೆ ಆಕೆಯ ಪೋಷಕರು ಬಾಗಿಲು ಹೊಡೆದು ಯುವತಿಯನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರೊಳಗೆ ಸಂಧ್ಯ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ :ನಮ್ಮ ಮೆಟ್ರೋದಲ್ಲಿ ಶೌಚಾಲಯ ಬಳಸಲು ದರ ನಿಗದಿ: BMRCL ನಿರ್ಧಾರಕ್ಕೆ ಪ್ರಯಾಣಿಕರ ಆಕ್ರೋಶ
ಕ್ಯಾಬ್ ಚಾಲಕ ಹೃದಯಘಾತಕ್ಕೆ ಬಲಿ..!
ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಅಭಿಷೇಕ್ ಎಂಬ ಯುವಕ ಹೃದಯಘಾತಕ್ಕೆ ಬಲಿಯಾಗಿದ್ದು. ಅರಕಲಗೂಡು ತಾಲ್ಲೂಕಿನ, ಕಾಡನೂರು ಗ್ರಾಮದ ಅನಸೂಯ ರಾಮಕೃಷ್ಣ ದಂಪತಿ ಪುತ್ರ ಅಭಿಷೇಕ್.ಕೆ.ಆರ್. ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಿಂತಿದ್ದ ಜಾಗದಲ್ಲೇ ಕುಸಿದು ಬಿದ್ದು ಅಭಿಷೇಕ್ ಸಾವನ್ನಪ್ಪಿದ್ದು. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.