Thursday, May 22, 2025

‘ಫ್ರೀ ಪ್ಯಾಲೆಸ್ತೀನ್’ ಘೋಷಣೆ ಕೂಗುತ್ತ ಗುಂಡಿನ ದಾಳಿ; ಓರ್ವ ಇಸ್ರೇಲಿ ರಾಯಭಾರ ಕಛೇರಿ ಸಿಬ್ಬಂದಿ ಸಾ*ವು

ವಾಷಿಂಗ್ಟನ್ : ಅಮೇರಿಕಾದ ವಾಷಿಂಗ್ಟನ್ ಡಿಸಿಯ ಯಹೂದಿ ವಸ್ತು ಸಂಗ್ರಹಾಲಯದ ಬಳಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಇಸ್ರೇಲಿ ರಾಯಭಾರ ಕಚೇರಿಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.   ‘ಫ್ರೀ ಪ್ಯಾಲೆಸ್ತೀನ್’ ಎಂದು ಘೋಷಣೆ ಕೂಗುತ್ತಾ ದುಷ್ಕರ್ಮಿಯೊಬ್ಬ ಇಬ್ಬರು ಇಸ್ರೇಲಿ ರಾಯಭಾರ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದಾರೆ.

ಅಧಿಕಾರಿಗಳು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಬುಧವಾರ ರಾತ್ರಿ ವಾಷಿಂಗ್ಟನ್ ಡಿಸಿಯ ಯಹೂದಿ ವಸ್ತುಸಂಗ್ರಹಾಲಯದಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿತ್ತು. ನಂತರ ಕೆಲವು ಅಪರಿಚಿತ ದುಷ್ಕರ್ಮಿಗಳು ಹೊರಗೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಇಸ್ರೇಲಿ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ :ED ದಾಳಿ ಬಗ್ಗೆ ಪರಂ ಮೊದಲ ರಿಯಾಕ್ಷನ್​: ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದ ಸಚಿವ

ಘಟನೆ ಕುರಿತು “ವಿಶ್ವಸಂಸ್ಥೆಯ ಇಸ್ರೇಲ್ ರಾಯಭಾರಿ ಡ್ಯಾನಿ ಡ್ಯಾನನ್  ಪೋಸ್ಟ್ ಮಾಡಿದ್ದು, ಇಸ್ರೇಲ್ ರಾಯಭಾರ ಕಚೇರಿಯ ನೌಕರರು ಮಾರಕ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಮಾರಕ ಗುಂಡಿನ ದಾಳಿಯು ಯೆಹೂದಿಗಳ ವಿರೋಧಿ ಭಯೋತ್ಪಾದನೆಯ ದುಷ್ಕೃತ್ಯವಾಗಿದೆ. ಯಹೂದಿ ಸಮುದಾಯಕ್ಕೆ ಹಾನಿ ಮಾಡಲು ಆಲೋಚಿಸಿರಬಹುದು ಎಂದು ಅಂದಾಜಿಸಲಾಗಿದೆ. ಅಧಿಕಾರಿಗಳು ಇನ್ನೂ ವಿವರಗಳನ್ನು ದೃಢೀಕರಿಸಿಲ್ಲ. ಮೃತರು ಮತ್ತು ಶಂಕಿತನ ಗುರುತು ಇನ್ನೂ ತಿಳಿದುಬಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ :ಹೊಟ್ಟೆ ಹಸಿವು ಎಂದು ಬಿಸ್ಕೆಟ್​ ಕದ್ದಿದ್ದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಅಮೇರಿಕಾದ ರಾಜಧಾನಿಯಲ್ಲಿರುವ ಎಫ್‌ಬಿಐ ಕ್ಷೇತ್ರ ಕಚೇರಿಯಿಂದ ಸ್ವಲ್ಪವೇ ದೂರದಲ್ಲಿರುವ ಕ್ಯಾಪಿಟಲ್ ಯಹೂದಿ ವಸ್ತುಸಂಗ್ರಹಾಲಯದ ಹೊರಗೆ ಗುಂಡಿನ ದಾಳಿ ನಡೆದಿದ್ದು, ಎಕ್ಸ್​ನಲ್ಲಿ ಪೋಸ್ಟ್‌ನಲ್ಲಿ ನೋಯೆಮ್ ಸಾವನ್ನು ದೃಢಪಡಿಸಿದ್ದಾರೆ.

RELATED ARTICLES

Related Articles

TRENDING ARTICLES