ಬೆಂಗಳೂರು: ಗೃಹ ಸಚಿವ ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರ ಕುರಿತು ಸಚಿವರು ಮೊದಲ ಬಾರಿಗೆ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದು. “ನಮ್ಮ ಕಾಲೇಜಿಗೆ ಬಂದು ಅಕೌಂಟ್ಸ್ ಮಾಹಿತಿ ಕೇಳಿದ್ದಾರೆ. ಆ ಮಾಹಿತಿಯನ್ನು ನಾವು ನೀಡಿದ್ದೇವೆ” ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಸಚಿವ ಪರಮೇಶ್ವರ್ “ನಿನ್ನೆ ಇಡಿ ದಾಳಿ ಆಗಿದೆ, ಅಧಿಕಾರಿಗಳು ನಮ್ಮ ಸಂಸ್ಥೆಯ ಮೂರು ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆದರೆ ಯಾಕೆ ಅಂತ ಗೊತ್ತಿಲ್ಲ. ಅಧಿಕಾರಿಗಳು ಅಕೌಂಟ್ಸ್ ಕೇಳಿದ್ದರು, ಅದೇನೇ ಕೇಳಿದರೂ ಕೊಡಿ ಅಂತ ಹೇಳಿದ್ದೆ. ಪರಿಶೀಲನೆ ನಡೆಸಿದ್ದಾರೆ, ಇಂದು ಕೂಡು ಪರಿಶೀಲನೆ ಮುಂದುವರಿದಿದೆ. ಇಡಿ ಅಧಿಕಾರಿಗಳಿಗೆ ನಾವು ಸಹಕಾರ ಕೊಟ್ಟಿದ್ದೇವೆ. ಇದನ್ನೂ ಓದಿ :ಹೊಟ್ಟೆ ಹಸಿವು ಎಂದು ಬಿಸ್ಕೆಟ್ ಕದ್ದಿದ್ದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ
ಆದರೆ ಯಾಕೆ ದಾಳಿ ನಡೆದಿದೆ ಎಂಬ ಬಗ್ಗೆ ಗೊತ್ತಿಲ್ಲ. ನಾನು ಮೊದಲಿನಿಂದಲೂ ಕಾನೂನಿಗೆ ಗೌರವ ಕೊಟ್ಟಿದ್ದೇನೆ, ಯಾವುದೇ ಸಂದರ್ಭದಲ್ಲಿ ಕಾನೂನು ಗೌರವಿಸುತ್ತೇನೆ, ಇದು ಸಂಸ್ಥೆಯ ವಿಚಾರ ನಾನೊಬ್ಬ ಪ್ರತ್ಯೇಕ ಅಲ್ಲ, ಮುಂದೆಯೂ ಕೂಡ ಸಹಕಾರ ನೀಡ್ತೀವಿ. ಯಾವ ತನಿಖೆ ನಡೆಯುತ್ತಿದೆ ಎಂಬ ಬಗ್ಗೆ ಗೊತ್ತಿಲ್ಲ. ಆದರೆ ವರದಿ ಬಂದ ನಂತರ ಎಲ್ಲಾ ಗೊತ್ತಾಗುತ್ತೆ. ಅವರು ಏನೂ ಬೇಕಾದ್ರು ತನಿಖೆ ಮಾಡಲು ಎಂದು ಪರಂ ಹೇಳಿದರು.
ರಾಜಕೀಯ ಪ್ರೇರಿತದ ಕುರಿತು ಮಾತನಾಡಲ್ಲ..!
ಇಡಿ ದಾಳಿಯ ಬಗ್ಗೆ “ರಾಜಕೀಯ ಪ್ರೇರಿತ ದಾಳಿ ಎಂಬ ಬಗ್ಗೆ ನಾನು ಈ ಸಂದರ್ಭದಲ್ಲಿ ಏನು ಮಾತನಾಡಲ್ಲ. ಬಿಜೆಪಿಯವರಯ ಆರೋಪ ಮಾಡುತ್ತಿದ್ದಾರೆ. ಅದು ಕೇವಲ ಆರೋಪ. ಇಡಿಯಿಂದ ನನಗೆ ಇನ್ನು ಬುಲಾವ್ ಬಂದಿಲ್ಲ. ನಮ್ಮ ಸಂಸ್ಥೆ 65 ವರ್ಷದಿಂದ ಇರುವ ಸಂಸ್ಥೆ. ಈ ಸಂಸ್ಥೆಯಿಂದ ಅನೇಕ ಇಂಜಿನಿಯರ್ ಡಾಕ್ಟರ್ ಹೊರ ಬಂದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ :ಅನುಮಾನಸ್ಪದ ರೀತಿಯಲ್ಲಿ ಯುವತಿ ಶವ ಪತ್ತೆ: ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಶಂಕೆ
ಜಾತಿ ನೋಡಿ ಯಾರು ಬರಲ್ಲ..!
ಪರಮೇಶ್ವರ್ ಮನೆ ಮೇಲೆ ಇಡಿ ದಾಳಿ ನಡೆದಿದ್ದರ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ “ದಲಿತ ನಾಯಕನ ಮೇಲೆ ಬಿಜೆಪಿ ರಾಜಕೀಯ ದ್ವೇಶದಿಂದ ದಾಳಿ ನಡೆಸಿದೆ ಎಂದಿದ್ದರು. ಈ ಕುರಿತು ಮಾತನಾಡಿದ ಪರಂ “ಯಾರು ಜಾತಿ ನೋಡಿ ಬರಲ್ಲ, ಈಗ ನಾನು ಏನು ಮಾತನಾಡಲ್ಲ, ಇಡಿ ಇಲ್ಲಿಯವರೆಗೆ ಏನು ಹೇಳಿಲ್ಲ. ನಮ್ಮ ಸಂಸ್ಥೆ ಬೆಳೆಯಬೇಕು. ಶಫಿ ಅಹ್ಮದ್ ಅವರ ಸಂಸ್ಥೆ ಮುಚ್ಚುವ ಹಂತಕ್ಕೆ ತಲುಪಿತ್ತು. ಅವರ ಕೋರಿಕೆ ಮೇಲೆ ಅದನ್ನು ಪುನಶ್ಚೇತನ ಮಾಡುತ್ತಿದ್ದೇವೆ, ವಿಚಾರಣೆ ವೇಳೆ ಏನು ಹೇಳಲು ಆಗಲ್ಲ ಎಂದು ಪರಂ ಹೇಳಿದರು.