ಬೆಂಗಳೂರು : ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳ ಹಾನಿಗೊಳಗಾಗಿದೆ. ಇದರ ಬೆನ್ನಲ್ಲೇ ಸಿಎಂ ಮತ್ತು ಡಿಸಿಎಂ ಸಿಟಿ ರೌಂಡ್ಸ್ ಕೈಗೊಂಡಿದ್ದು. ಸಾಯಿ ಲೇಔಟ್ಗೆ ಭೇಟಿ ನೀಡಿದ ಸಿಎಂ ಮತ್ತು ಸ್ಥಳೀಯ ಶಾಸಕ ಭೈರತಿ ಬಸವರಾಜ್ಗೆ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಲ್ಲಿ ಸಾಯಿ ಲೇಔಟ್ ಕೂಡ ಸಂಪೂರ್ಣ ನೀರಿನಿಂದ ಆವೃತ್ತವಾಗಿತ್ತು. ಸಾಯಿ ಲೇಔಟ್ನಲ್ಲಿನ ನಿವಾಸಿಗಳಿಗೆ ಊಟವನ್ನು ಜೆಸಿಬಿಯಲ್ಲಿ ವಿತರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಜನರು ತನ್ನ ಆಕ್ರೋಶವನ್ನು ಸಿಎಂ ಮತ್ತು ಡಿಸಿಎಂ ಮುಂದೆ ತೋಡಿಕೊಂಡಿದ್ದು, ರಸ್ತೆ ಮಧ್ಯೆಯೆ ಜನ ತಮ್ಮ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ :ರಾಹುಲ್-ಸೋನಿಯಾಗೆ ED ಶಾಕ್: 142 ಕೋಟಿ ರೂಪಾಯಿ ಅಕ್ರಮ ಲಾಭ ಪಡೆದಿರುವ ಆರೋಪ
ಸಾಯಿ ಲೇಔಟ್ಗೆ ಭೇಟಿ ಕೊಟ್ಟ ಸಿದ್ದರಾಮಯ್ಯರನ್ನು ರಸ್ತೆ ಮಧ್ಯೆಯೆ ತಡೆದ ಜನರ ಹಾನಿಯಾದ ಪ್ರದೇಶವನ್ನು ನೋಡದಂತೆ ನಡೆದಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಸ್ಥಳೀಯ ಶಾಸಕ ಭೈರತಿ ಬಸವರಾಜ್ ಅವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಗಲಾಟೆ ಆಗುತ್ತಿದ್ದಂತೆ ಸಿಎಂ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಬದುಕನ್ನೇ ಕಸಿದ ಮಳೆ..!
ಸಾಯಿ ಲೇಔಟ್ನಲ್ಲಿ ಬಿದ್ದ ಮಳೆ ಕುಟುಂಬವೊಂದರ ಜೀವನವನ್ನೇ ಕಸಿದುಕೊಂಡಿದ್ದು. ಮನೆಗೆ ನೀರು ನುಗ್ಗಿದ್ದನ್ನು ನೋಡಿ ಗಾಬರಿಯಾದ ಯುವಕನೊಬ್ಬ ಸ್ಟ್ರೋಕ್ಗೆ ಒಳಗಾಗಿದ್ದಾನೆ. ಇದನ್ನೂ ಓದಿ :ಪವನ್ ಕಲ್ಯಾಣ್ಗೆ ರಾಜ್ಯದ 5 ಕುಮ್ಕಿ ಆನೆಗಳನ್ನ ಹಸ್ತಾಂತರಿಸಿದ ಕರ್ನಾಟಕ ಸರ್ಕಾರ
ಸಾಯಿಲೇಔಟ್ನ 40 ವರ್ಷದ ನಿವಾಸಿ ಸ್ಟ್ರೋಕ್ಗೆ ಒಳಗಾಗಿದ್ದು. ಮನೆಗೆ ನೀರು ನುಗ್ಗಿದ ಗಾಬರಿಯಿಂದ ಚೀರಾಡಿದ್ದ ಯುವಕನಿಗೆ ಸ್ಟ್ರೋಕ್ ಆಗಿದೆ. ಮನೆಗೆ ಆಧಾರವಾಗಿದ್ದ ವ್ಯಕ್ತಿಯೇ ಹಾಸಿಗೆ ಹಿಡಿದಿದ್ದಕ್ಕೆ ಮನೆಯವರು ಕಂಗಾಲಾಗಿದ್ದು. ಮಾತನಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.