ಬೆಂಗಳೂರು : ಕಳೆದ ಎರಡ್ಮೂರು ದಿನದಿಂದ ಬೆಂಗಳೂರಿನಲ್ಲಿ ಸುರಿದಿರುವ ಮಳೆಯಿಂದಾಗಿ ನಗರದ ಅನೇಕ ಪ್ರದೇಶಗಳು ಹಾನಿಗೊಳಗಾಗಿದ್ದು. ಇಂದು(ಮೇ.21) ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಮತ್ತು ಡಿಸಿಎಂ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಆದರೆ ಸಿಎಂ ಭೇಟಿ ನೀಡುವ ಸ್ಥಳದಲ್ಲಿ ರೆಡ್ ಕಾರ್ಪೆಟ್ ವ್ಯವಸ್ಥೆ ಮಾಡಿದ್ದು. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ ರಾಜಧಾನಿ ಜನರನ್ನು ಕಣ್ಣೀರಿನಲ್ಲಿ ಮುಳುಗಿಸಿದ್ದು. ಭಾರೀ ಮಳೆಗೆ ನಗರದ ಹಲವು ಭಾಗಗಳಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಿದೆ. ಇಂದು ಮಳೆಯಿಂದ ಹಾನಿಯಾಗಿರುವ ಸ್ಥಳಗಳಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಇದನ್ನೂ ಓದಿ :ರಾಜಸ್ಥಾನ ತಂಡಕ್ಕೆ ಸೇರಿಸೋದಾಗಿ ವಂಚನೆ: ಮಗನ ಭವಿಷ್ಯಕ್ಕಾಗಿ 24 ಲಕ್ಷ ಕೊಟ್ಟು ಮೋಸ ಹೋದ ತಂದೆ
ಆದರೆ ಎಚ್ಬಿಆರ್ ಲೇಔಟ್ನಲ್ಲಿರುವ ರಾಜಕಾಲುವೆ ಪರಿಶೀಲಿಸಲು ಬರುವ ಸಿಎಂ ಮತ್ತು ಡಿಸಿಎಂಗೆ ರೆಡ್ ಕಾರ್ಪೆಟ್ ಹಾಕಿಸಿದ್ದು. ಅಧಿಕಾರಿಗಳು ರಾಜಕಾಲುವೆ ಬಳಿ ಸ್ವಚ್ಚತ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು. ಜನರು ಸಾಯುತ್ತಿದ್ದಾರೆ, ಆದರೆ ಸಿಎಂ, ಡಿಸಿಎಂಗೆ ರೆಡ್ ಕಾರ್ಪೆಟ್ ಹಾಸಿದ್ದಾರೆ. ಅಧಿಕಾರಿಗಳು ಸಿಎಂ, ಡಿಸಿಎಂರನ್ನು ಮೆಚ್ಚಿಸೋಕೆ ಕೆಲಸ ಮಾಡ್ತಿದ್ದಾರೆ. ನಮಗೆ ಶಾಶ್ವತ ಪರಿಹಾರ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ :ಕನ್ನಡ ಮಾತನಾಡಲ್ಲ ಎಂದು SBI ಬ್ಯಾಂಕ್ ಸಿಬ್ಬಂದಿ ಧಿಮಾಕು: ಟ್ವಿಟ್ ಮಾಡಿ ಸಿಎಂ ಆಕ್ರೋಶ
ಬಿಬಿಎಂಪಿ ಅಧಿಕಾರಿಗಳ ಮೇಲೆ ಆರ್.ಅಶೋಕ್ ಆಕ್ರೋಶ..!
ರೆಡ್ ಕಾರ್ಪೆಟ್ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಆರ್.ಅಶೋಕ್ ” ಬಿಬಿಎಂಪಿ ಅಧಿಕಾರಿಗಳಿಗೆ ಬುದ್ಧಿ ಇಲ್ಲ, ರೆಡ್ ಕಾರ್ಪೆಟ್ ಹಾಕಿದ್ದಾರಲ್ಲ, ಗೋಲ್ಟ್ ಕಾರ್ಪೆಟ್ ಹಾಕಬೇಕಿತ್ತು. ಥೂ..ಈ ಬಿಬಿಎಂಪಿ ಅಧಿಕಾರಿಗಳಿಗೆ ಮಾನ ಮರ್ಯಾದೆ ಇಲ್ಲ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. ಜನ ಸಮಸ್ಯೆಯಿಂದ ಪರದಾಡ್ತಿದ್ದಾರೆ. ಈಗಿರುವಾಗ ಇವರಿಗೆ ರೆಡ್ ಕಾರ್ಪೆಟ್ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.