Monday, May 19, 2025

ಸಂಪೂರ್ಣ ಗಾಜಾವನ್ನು ವಶಕ್ಕೆ ಪಡೆಯುತ್ತೇವೆ: ನೆತನ್ಯಾಹು ಮಹತ್ವದ ಘೋಷಣೆ

ಇಸ್ರೇಲ್​ ಸಂಪೂರ್ಣ ಗಾಜಾ ಪಟ್ಟಿಯನ್ನು ವಶಕ್ಕೆ ಪಡೆಯಲಿದೆ ಎಂದು ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಘೋಷಿಸಿದ್ದು. ಇಸ್ರೇಲಿ ರಕ್ಷಣಾ ಪಡೆ ಸಂಪೂರ್ಣ ಗಾಜಾವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದೆ ಎಂದು ನೆತನ್ಯಾಹು ಹೇಳಿದ್ದಾರೆ.

ಇಸ್ರೇಲಿ ಸೇನೆಯು ಗಾಜಾದಲ್ಲಿ ದೊಡ್ಡ ಪ್ರಮಾಣದ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಹೋರಾಟ ತೀವ್ರವಾಗಿದ್ದು, ನಾವು ಮುಂದುವರಿಯುತ್ತಿದ್ದೇವೆ. ಗಾಜಾ ಪಟ್ಟಿಯ ಎಲ್ಲಾ ಪ್ರದೇಶಗಳ ಮೇಲೆ ನಾವು ಹಿಡಿತ ಸಾಧಿಸುತ್ತೇವೆ. ನಾವು ಬಿಟ್ಟುಕೊಡುವುದಿಲ್ಲ. ಹಮಾಸ್ ಉಗ್ರರು ಯಶಸ್ವಿಯಾಗಲು ನಾವು ಬಿಡದಂತೆ ಕಾರ್ಯ ನಿರ್ವಹಿಸುತ್ತೇವೆ ಎಂದು ಟೆಲಿಗ್ರಾಮ್​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ನೆತನ್ಯಾಹು ಹೇಳಿದ್ದಾರೆ. ಇದನ್ನೂ ಓದಿ:ಸಿಎಂ ಸಿಟಿ ರೌಂಡ್ಸ್​ ಕ್ಯಾನ್ಸಲ್​: ವಿಡಿಯೋ ಕಾನ್ಫರೆನ್ಸ್​ ಮೂಲಕ ಮಳೆಹಾನಿ ಪ್ರದೇಶ ವೀಕ್ಷಣೆ

ಗಾಜಾದಲ್ಲಿ ನಿರಾಶ್ರಿತರಾಗಿರುವ ಜನರಿಗೆ ವಿಶ್ವಸಂಸ್ಥೆ ಮತ್ತು ಇತರ ಸಂಸ್ಥೆಗಳು ನೀಡಿದ್ದ ಆಹಾರದ ದಾಸ್ತಾನು ಸಂಪೂರ್ಣ ಖಾಲಿಯಾಗಿದ್ದು. ಗಾಜಾದಲ್ಲಿ ಕ್ಷಾಮ ಮತ್ತು ಹಸಿವಿನ ಅಪಾಯ ಹೆಚ್ಚಾಗಿದೆ. ಈ ಕಾರಣದಿಂದಾಗಿ ಅಮೇರಿಕಾ ಸೇರಿದಂತೆ ಹಲವು ದೇಶಗಳು ಇಸ್ರೇಲ್​ ಮೇಲೆ ದಾಳಿ ನಿಲ್ಲಿಸುವಂತೆ ಒತ್ತಡ ಹೇರಿದ್ದು. ಈ ಕಾರಣ ಬೆಂಜಮಿನ್​ ನೆತನ್ಯಾಗು ಗಾಜಾ ಜನರಿಗೆ ಅಗತ್ಯ ಸಹಾಯ ಪುನರ್​ ಆರಂಭಿಸುವಂತೆ ಆದೇಶಿಸಿದ್ದಾರೆ.

ಇದನ್ನೂ ಓದಿ :ಹೃದಯ ವಿದ್ರಾವಕ ಘಟನೆ: ಕಾರಿ​ನಲ್ಲಿ ಆಟವಾಡುತ್ತಿದ್ದ ನಾಲ್ಕು ಮಕ್ಕಳು ಉಸಿರುಗಟ್ಟಿ ಸಾ*ವು

ಇಸ್ರೇಲ್, ಗಾಜಾದಲ್ಲಿ ಹಮಾಸ್​ ವಿರುದ್ದ ಮಿಲಿಟರಿ ಕಾರ್ಯಚರಣೆ ನಡೆಸುತ್ತಿದೆ. ಗಾಜಾದಲ್ಲಿ ಕ್ಷಾಮ ಉಂಟಾಗದಂತೆ ಅಗತ್ಯವಿರುವವರಿಗೆ ಮಾತ್ರ ಅಗತ್ಯವಸ್ತುಗಳು ಸಿಗುವಂತೆ ನೋಡಿಕೊಳ್ಳುತ್ತೇವೆ. ಕದನ ವಿರಾಮದ ಬಗ್ಗೆ ಇಸ್ರೇಲ್ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು. ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಯಾವುದೇ ಪ್ರಸ್ತಾಪದ ಮಾತುಕತೆ ನಡೆಯೊಲ್ಲ. ಗಾಜಾದಲ್ಲಿರುವ ಸಂಪೂರ್ಣ ಶಸ್ತ್ರಾಸ್ಥವನ್ನು ಖಾಲಿ ಮಾಡಬೇಕು. ಹಮಾಸ್​ ಉಗ್ರರು ಗಾಜಾ ತೊರೆಯಬೇಕು ಎಂದು ಬೆಂಜಮಿನ್​ ನೆತನ್ಯಾಹು ಹೇಳಿದರು.

RELATED ARTICLES

Related Articles

TRENDING ARTICLES