ಬೆಂಗಳೂರು: ಕಳೆದ ರಾತ್ರಿ ಮತ್ತು ಇಂದು ಬೆಳಗಿನ ಜಾವ ಸುರಿದ ಸುರಿದ ಭಾರೀ ಮಳೆಗೆ ರಾಜ್ಯ ರಾಜಧಾನಿ ತತ್ತರಿಸಿದ್ದು. ನಗರದ ಹಲವು ಪ್ರದೇಶಗಳು ನೀರಿನಿಂದ ಜಲಾವೃತವಾಗಿದ್ದು, ಜನರು ಪರದಾಡುವಂತಾಗಿದೆ. ಇನ್ನು ಈ ಕುರಿತು ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದು. ಡಿಸಿಎಂ ಅವರ ಉಸ್ತುವಾರಿ ಇದೇ, ಅವರೇ ನೋಡಿಕೊಳ್ತಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಳೆಯಿಂದ ಸೃಷ್ಟಿಯಾಗಿರುವ ಅವಾಂತರದ ಬಗ್ಗೆ ಮಾತನಾಡಿದ ಪರಮೇಶ್ವರ್ “ನಗರದ ಹಲವೆಡೆ ಚರಂಡಿಯಲ್ಲಿ ನೀರು ತುಂಬಿ ಸಮಸ್ಯೆ ಆಗಿದೆ. ಮಳೆಯಿಂದ ನೀರು ತುಂಬಿ ಟ್ರಾಫಿಕ್ ಕೂಡ ಆಗಿದೆ. ಈ ಕುರಿತು ಬಿಬಿಎಂಪಿ ಅವರು ಸ್ಥಳಕ್ಕೆ ಹೋಗಿ ಕ್ರಮ ತೆಗೆದುಕೊಳ್ಳುತ್ತಾರೆ. ಮಳೆಗಾಲದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಡಿಸಿಎಂ ಅವರ ಉಸ್ತುವಾರಿ ಇದೆ ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:ಭಾರೀ ಮಳೆಗೆ ರಾಜಧಾನಿ ತತ್ತರ: ಸಿಸಿಬಿ ಕಛೇರಿಗೆ ನೀರು ನುಗ್ಗಿ ಅವಾಂತರ, ಈಜೀಪುರದಲ್ಲಿ ಈಜಾಡೋ ಪರಿಸ್ಥಿತಿ
ಮುಂದುವರಿದು ಮಾತನಾಡಿದ ಪರಮೇಶ್ವರ್ “ಬಿಬಿಎಂಪಿ ಜಾಯಿಂಟ್ ಕಮಿಷನರ್ ಅವರು ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ಎರಡು ತಿಂಗಳಿಂದ ಬೇಸಿಗೆ ಇತ್ತು. ಮೇ ಅಥವಾ ಜೂನ್ನಲ್ಲಿ ಮಳೆ ಬರುತ್ತೆ, ಈ ಕುರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಕೆಲಹಂತದಿಂದಲೂ ಸಮಸ್ಐಎ ಆಗುತ್ತದೆ ಎಂದು ಪರಮೇಶ್ವರ್ ಹೇಳಿದರು.