Monday, May 19, 2025

ಆರ್​ಸಿಬಿ-ಕೆಕೆಆರ್​ ಪಂದ್ಯ ರದ್ದು: ಟಿಕೆಟ್​ ಹಣ ಮರುಪಾವತಿಸಲು ಫ್ರಾಂಚೈಸಿ ನಿರ್ಧಾರ

ಬೆಂಗಳೂರು: ಆಪರೇಷನ್​ ಸಿಂಧೂರದ ಬಳಿಕ ಐಪಿಎಲ್​ ಪುನರ್​​ ಆರಂಭವಾಗಿದ್ದು. ನಿನ್ನೆ (ಮೇ.17) ನಡೆದ ಆರ್​ಸಿಬಿ ಮತ್ತು ಕೆಕೆಆರ್​ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆದರೆ ಟಿಕೆಟ್​ ಖರೀದಿಸಿ ಪಂದ್ಯ ನೋಡಲು ಹೋಗಿದ್ದ ಅಭಿಮಾನಿಗಳಿಗೆ ಆರ್​ಸಿಬಿ ಫ್ರಾಂಚೈಸಿ ಗುಡ್​ನ್ಯೂಸ್​ ಕೊಟ್ಟಿದ್ದು. ಟಿಕೆಟ್​ ಹಣವನ್ನು ವಾಪಾಸ್ ಪಾವತಿಸುವುದಾಗಿ ಹೇಳಿದೆ. ಇದನ್ನೂ ಓದಿ:ವಿರಾಟ್‌ಗೆ ಭಾರತ ರತ್ನ ಸಿಗಲೇಬೇಕು ಎಂದು ಆಗ್ರಹಿಸಿದ ಸುರೇಶ್​ ರೈನಾ

ಆರ್​ಸಿಬಿ ಮತ್ತು ಕೆಕೆಆರ್​ ನಡುವೆ ನಡೆದ ಪಂದ್ಯ ವರುಣನ ಅವಕೃಪೆಯಿಂದ ನಿನ್ನೆ ರದ್ದಾಗಿದೆ. ಮಳೆಯಿಂದಾಗಿ ಟಾಸ್​ ಪ್ರಕ್ರಿಯೆ ನಡೆಸಲು ಕೂಡ ಸಾಧ್ಯವಾಗದೆ ಪಂದ್ಯ ರದ್ದಾದ ಹಿನ್ನಲೆ ಟಿಕೆಟ್ ಹಣವನ್ನು ವಾಪಾಸ್​ ನೀಡಲು ಬೆಂಗಳೂರು ಫ್ರಾಂಚೈಸಿ ನಿರ್ಧರಿಸಿದೆ. ಮಳೆಯಿಂದ ಪಂದ್ಯ ರದ್ದಾದ ಬಳಿಕ ನಿರಾಸೆಗೊಂಡಿದ್ದ ಅಭಿಮಾನಿಗಳು ತಮ್ಮ ಟಿಕೆಟ್ ಹಣವನ್ನ ಕ್ಲೈಮ್ ಮಾಡಲು ಅವಕಾಶ ನೀಡಲಾಗಿದೆ.

ಟಿಕೆಟ್​ ಹಣ ಕ್ಲೈಮ್​ ಮಾಡೋದು ಹೇಗೆ..!

ಕೌಂಟರ್​ ಮೂಲಕ ಮ್ಯಾನುಯೆಲ್​ ಆಗಿ ಟಿಕೆಟ್​ ಖರೀದಿಸಿದವರು ಅಧಿಕೃತವಾಗಿ ಮಾರಾಟಗಾರರಿಗೆ ಟೆಕೆಟ್​ ಹಿಂದುರುಗಿಸಿ ಹಣ ಪಡೆದುಕೊಳ್ಳಬಹುದಾಗಿದೆ. ಆನ್​ಲೈನ್​ ಮೂಲಕ ಟಿಕೆಟ್​ ಖರೀದಿಸದವರಿಗೆ ಹಣ ಪಾವತಿಸಲು ಬಳಸಿದ ಬ್ಯಾಂಕ್​ ಖಾತೆಗೆ ಮುಂದಿನ 10 ದಿನಗಳಲ್ಲಿ ಹಣ ಸಂದಾಯವಾಗಲಿದೆ. ಇದನ್ನೂ ಓದಿ:‘ಆ ಟ್ರಂಪ್​ ಬಡ್ಡೆತದು ಹೇಳ್ತು, ಅಂತ ಈ ಬಡ್ಡೆತದು ಕೇಳ್ತು’: ಮೋದಿ ವಿರುದ್ದ ಇಬ್ರಾಹಿಂ ವಾಗ್ದಾಳಿ

ಒಂದು ವೇಳೆ ಮೇ.31ರೊಳಗೆ ಟಿಕೆಟ್​ ಹಣ ಸಂದಾಯವಾಗದಿದ್ದರೆ ನಿಮ್ಮ ಟಿಕೆಟ್ ಬುಕ್ಕಿಂಗ್ ಮಾಹಿತಿಯನ್ನು refund@ticketgenie.inಗೆ ಮೇಲ್ ಮಾಡಬಹುದಾಗಿದೆ. ಆದರೆ ಕಾಂಪ್ಲಿಮೆಂಟರಿ ಟಿಕೆಟ್‌ಗಳಿಗೆ ಮರುಪಾವತಿ ಇಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ಪಷ್ಟಪಡಿಸಿದೆ.

RELATED ARTICLES

Related Articles

TRENDING ARTICLES