Sunday, May 18, 2025

ಅಮೆರಿಕಾದಿಂದ ಪಾಕ್​ ಬದುಕುಳಿದಿದೆ: ಭಾರತದ ದಾಳಿಯ ಬಗ್ಗೆ ಸತ್ಯ ಬಿಚ್ಚಿಟ್ಟ ಪಾಕ್​ ಪರ್ತಕರ್ತ

ಆಪರೇಷನ್​ ಸಿಂಧೂರ್​ ಹೆಸರಿನಲ್ಲಿ ಭಾರತ ನಡೆಸಿದ ಕಾರ್ಯಚರಣೆಯನ್ನ ತಿರಸ್ಕರಿಸಿದ್ದ ಪಾಕಿಸ್ತಾನದ ಮರ್ಯಾದೆಯನ್ನ ಅದೇ ದೇಶದ ಪತ್ರಪರ್ತನೊಬ್ಬ ಹರಾಜು ಹಾಕಿದ್ದು. ‘ಭಾರತ ಪಾಕಿಸ್ತಾನದ ಮೇಲೆ ಎಲ್ಲಿ ಬೇಕಾದರು ದಾಳಿ ಮಾಡುವ ಸಾಮರ್ಥ್ಯವಿದೆ. ಈ ದಾಳಿಯಿಂದ ಅಮೇರಿಕಾ ನಮ್ಮನ್ನು ರಕ್ಷಿಸಿದೆ ಎಂದು ಹೇಳಿಕೊಂಡಿದ್ದಾರೆ.

ಭಾರತ ಮತ್ತು ಪಾಕ್​ ನಡುವಿನ ಸಂಘರ್ಷದಲ್ಲಿ ಭಾರತದ ದಾಳಿಯನ್ನ ತಿರಸ್ಕರಿಸಿದ್ದ ಪಾಕ್​, ನಮಗೆ ಏನು ಹಾನಿಯಾಗಿಲ್ಲ ಎಂದು ಬಿಲ್ಡಪ್​ ಕೊಟ್ಟುಕೊಂಡು ಬಂದಿತ್ತು. ಆದರೆ ಇದನ್ನು ಪಾಕಿಸ್ತಾನದ ಪರ್ತಕರ್ತ ಮೊಯೀದ್​ ಪಿರ್ಜಾದ್​ ಎಂಬಾತ ಅಲ್ಲೆಗಳೆದಿದ್ದು. ‘ಪಾಕಿಸ್ತಾನದ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ. ಭಾರತ ಪಾಕಿಸ್ತಾನದಲ್ಲಿನ ನೆಲೆಗಳನ್ನು ನಿಖರದವಾಗಿ ಹೊಡೆದಿದೆ. ಇವುಗಳನ್ನು ತಡೆಯಲು ಪಾಕ್​​ಗೆ ಸಾಧ್ಯವಾಗಿಲ್ಲ. ಬ್ರಹ್ಮೋಸ್​ ಕ್ಷಿಪಣಿ ಬಳಸಿದ ಭಾರತ ನಿಖರವಾಗಿ ದಾಲಿ ನಡೆಸಿದೆ ಎಂದು ಹೇಳಿದರು. ಇದನ್ನೂ ಓದಿ :ಕನ್ನಡಿಗರಿಗೆ ಅಪಮಾನ ಮಾಡಿದ್ದ ಹೋಟೆಲ್​ ಸೀಜ್: ಮ್ಯಾನೇಜರ್ ಬಂಧನ

ಇನ್ನು ಪಾಕಿಸ್ತಾನದ ಮೇಲೆ ದಾಳಿ ನಡೆಸಿರುವ ಭಾರತ ಹಾನಿಯ ಕುರಿತು ಉಪಗ್ರಹ ಚಿತ್ರಗಳನ್ನ ತೋರಿಸಿದೆ. ಆದರೆ ಪಾಕಿಸ್ತಾನ ಇಂತಹ ಯಾವುದೇ ಚಿತ್ರಗಳನ್ನ ಪ್ರಸ್ತುತಪಡಿಸಿಲ್ಲ. ಭಾರತವು F-16 ವಿಮಾನಗಳಿಗೆ ಹೆಸರುವಾಸಿಯಾದ ಭೋಲಾರಿ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಅಷ್ಟೇ ಅಲ್ಲದೇ  ನೂರ್ ಖಾನ್ ವಾಯುನೆಲೆ ಮತ್ತು ರಹೀಮ್ ಯಾರ್ ಖಾನ್ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿದೆ.

ಆದರೆ ಪಾಕಿಸ್ತಾನದ ಭಾರತದ ಉದಮ್​ಪುರದ ವಾಯುನೆಲೆ ಮೇಲೆ ದಾಳಿ ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು. ಇದನ್ನು ದೃಡೀಕರಿಸುವಂತೆ ಯಾವುದೇ ಸಾಕ್ಷವನ್ನ ಪಾಕಿಸ್ತಾನದ ಪ್ರಸ್ತುತಪಡಿಸಿಲ್ಲ. ಪಾಕಿಸ್ತಾನದ ಯಾವುದೇ ಕ್ಷಿಪಣಿಗಳು ಭಾರತದ ಮೇಲೆ ಪರಿಣಾಮ ಬೀರಿಲ್ಲ. ಇಂತಹ ವಿಷಯಗಳನ್ನ ಸಾರ್ವಜನಿಕವಾಗಿ ಹೇಳಿದರೆ ಸೈಬರ್​ ಅಪರಾಧ ಎಂದು ಆರೋಪ ಹೊರಿಸುತ್ತಾರೆ ಎಂದು ತಮ್ಮ ದೇಶದ ಪರಿಸ್ಥಿತಿಯನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ :ತಾಂತ್ರಿಕ ದೋಷ; ಇಸ್ರೋದ 101ನೇ ಉಪಗ್ರಹ ಉಡಾವಣೆ ವಿಫಲ

ಪಾಕ್​ ರಕ್ಷಿಸಿದ ಅಮೆರಿಕಾ..!

ಕದನ ವಿರಾಮದ ಬಗ್ಗೆ ಮಾತನಾಡಿದ ಫಿರ್ಜಾದ್​ “ಪಾಕಿಸ್ತಾನಿ ಸರ್ಕಾರ ತನ್ನ ದೇಶದಲ್ಲಿ ಅಣುಬಾಂಬ್​ ಬೆದರಿಕೆ ಹಾಕಿದ್ದಕ್ಕೆ ಭಾರತ ಕದನ ವಿರಾಮ ಮಾಡಿಕೊಂಡಿದೆ ಎಂದು ಹೇಳುತ್ತಿದೆ. ಆದರೆ ಪಾಕಿಸ್ತಾನವನ್ನು ರಕ್ಷಿಸಲು ಅಮೆರಿಕಾ ಕದನ ವಿರಾಮ ಮಾಡಿಕೊಳ್ಳಲು ಸಹಾಯ ಮಾಡಿದೆ. ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಮನಸ್ಥಿತಿಯಲ್ಲಿತ್ತು. ಒಂದು ವೇಳೆ ಈ ದಾಳಿ ನಡೆದಿದ್ದರೆ ಪಾಕಿಸ್ತಾನದ ಯಾವುದೇ ರನ್​ವೇಗಳು ಉಳಿಯುತ್ತಿರಲಿಲ್ಲ. ಇದನ್ನೂ ಓದಿ :ಹಾಲು ಮಾರಿ ಕ್ರಿಕೆಟ್​​ ಕಿಟ್​ ಖರೀದಿ; ಈಗ ತನ್ನದೇ ಸ್ವಂತ ಬ್ರ್ಯಾಂಡ್​ ‘ಹಿಟ್​ಮ್ಯಾನ್​’

ಭಾರತದ ದಾಳಿ ಪಾಕಿಸ್ತಾನಕ್ಕೆ ದೊಡ್ಡ ಬಿಕ್ಕಟ್ಟಾಗಿತ್ತು ಮತ್ತು ಅಮೆರಿಕ ಅದನ್ನು ಪಾರು ಮಾಡಿದೆ. ಪಾಕಿಸ್ತಾನ ಸರ್ಕಾರ ಜನರ ದಾರಿ ತಪ್ಪಿಸುತ್ತಿದೆ. ಪಾಕಿಸ್ತಾನ ಧೀರ್ಘಕಾಲದವರೆಗೆ ಪರಮಾಣು ಕಾರ್ಡ್​ ಬಳಸಲು ಸಾಧ್ಯವಾಗಲ್ಲ. ಮುಂದೆ ಅಮೇರಿಕಾ ಕೂಡ ಸಹಾಯಕ್ಕೆ ಬರಲ್ಲ ಎಂದು ಫಿರ್ಜಾದ್​ ತಮ್ಮ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES