ಲಕ್ನೋ: ಪತಿಯೊರ್ವ ತನ್ನ ಪತ್ನಿಯನ್ನೇ ಹತ್ಯೆಗೈದು ಬಳಿಕ ದೇಹದ ಭಾಗಗಳನ್ನು ತುಂಡರಿಸಿ ಎಸೆದಿರುವ ಘಟನೆ ಉತ್ತರಪ್ರದೇಶದ ಶ್ರಾವಸ್ತಿಯಲ್ಲಿ ನಡೆದಿದ್ದು. ಮೃತ ಮಹಿಳೆಯನ್ನು 28 ವರ್ಷದ ಸಬೀನಾ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಪಾಪಿ ಪತಿ ಸೈಫುದ್ದೀನ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಏನಿದು ಪ್ರಕರಣ..?
ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯ ಸಬೀನಾ ಎಂಬಾಕ ಕಳೆದ ಐದು ವರ್ಷಗಳ ಹಿಂದೆ ಅದೇ ಗ್ರಾಮದ ಸೈಫುದ್ದೀನ್ ಎಂಬಾತನನ್ನು ವಿವಾಹವಾಗಿದ್ದರು, ಆದರೆ ಕಳೆದ ಮಂಗಳವಾರ (ಮೇ.13) ರಂದು ಸಬೀನಾಳನ್ನು ಪತಿ ಸೈಫುದ್ದೀನ್ ಚಿಕಿತ್ಸೆಗೆಂದು ಲಖ್ನೋಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಹೋಗಿದ್ದ, ಆದರೆ ಸಂಜೆ ಸೈಫುದ್ದೀನ್ ಮಾತ್ರ ಮನೆಗೆ ಬಂದಿದ್ದು ಸಬೀನಾ ಜೊತೆಗೆ ಇರಲಿಲ್ಲ. ಇದನ್ನೂ ಓದಿ :ಅನೈತಿಕ ಸಂಬಂಧ: ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ ಮಹಿಳೆಯ ಕೊ*ಲೆ
ಈ ಕುರಿತು ಸಬೀನಾ ಅವರ ಸಹೋದರ ಸೈಫುದ್ದೀನ್ ಅವರ ಬಳಿ ಕೇಳಿದಾಗ ಆಕೆಯ ವಿಚಾರ ಹೇಳುವುದು ಬಿಟ್ಟು ಬೇರೆ ವಿಚಾರಗಳ ಬಗ್ಗೆ ಮಾತನಾಡಿ ವಿಚಾರ ತಿರುಗಿಸುತ್ತಿದ್ದ ಇದರಿಂದ ಗಾಬರಿಗೊಂಡ ಸಹೋದರ ಸಬೀನಾಳ ಮೊಬೈಲ್ ಗೆ ಕರೆ ಮಾಡಿದ್ದಾನೆ ಆದರೆ ಸಬೀನಾಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು, ಇದರಿಂದ ಗಾಬರಿಗೊಂಡ ಸಹೋದರ ಹತ್ತಿರದ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾನೆ.
ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾದ ಮಹಿಳೆಯ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಈ ವೇಳೆ ಆತ ತನಗೆ ಏನೂ ಗೊತ್ತಿಲ್ಲ ಎಂದು ಹೇಳಿ ಪೊಲೀಸರನ್ನು ದಾರಿ ತಪ್ಪಿಸುತ್ತಿದ್ದ, ಆದರೆ ಆತನ ಮಾತಿನಿಂದ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ ಇದಾದ ಬಳಿಕ ತಾನು ಮಾಡಿದ ಕೃತ್ಯವನ್ನು ಪೊಲೀಸರಲ್ಲಿ ವಿವರಿಸಿದ್ದಾನೆ. ಇದನ್ನೂ ಓದಿ:ರಾಷ್ಟ್ರದ ಹಿತಾಸಕ್ತಿ ವಿಚಾರದಲ್ಲಿ ಜವಬ್ದಾರಿ ನೀಡಿರುವುದು ಗೌರವದ ಸಂಗತಿ: ಶಶಿ ತರೂರ್
ಪತ್ನಿಯನ್ನು ಚಿಕಿತ್ಸೆ ಕೊಡಿಸುವ ನೆಪದಲ್ಲಿ ಲಕ್ಕೋ ಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಆಕೆಯನ್ನು ಹತ್ಯೆಗೈದು ಬಳಿಕ ಆಕೆಯ ದೇಹದ ಭಾಗಗಳನ್ನು ತುಂಡರಿಸಿ ಕೆಲವೊಂದು ಭಾಗಗಳನ್ನು ಸುಟ್ಟು ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾಗಿ ಉಳಿದ ಭಾಗಗಳನ್ನು ಸುಮಾರು ಹತ್ತು ಕಿಲೋಮೀಟರ್ ದೂರದ ಪ್ರದೇಶದಲ್ಲಿರುವ ಕಾಲುವೆಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ:ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡುತ್ತಿದ್ದ ಹರಿಯಾಣದ ವಿದ್ಯಾರ್ಥಿ ಬಂಧನ
ಸಬೀನಾ ಅವರ ಪೋಷಕರ ಮಾಹಿತಿಯಂತೆ ಆರೋಪಿ ಸೈಫುದ್ದೀನ್ ತನ್ನ ಮಗಳಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದು ತನ್ನ ಮಗಳು ಆಗಾಗ ಹೇಳುತ್ತಿದ್ದಳು ಇದೆ ಕಾರಣಕ್ಕೆ ತನ್ನ ಮಗಳನ್ನು ಹತ್ಯೆಗೈಯಲಾಗಿದೆ ಎಂದು ಪೋಷಕರು ದೂರಿದ್ದಾರೆ. ಸದ್ಯ ಆರೋಪಿ ಸೈಫುದ್ದೀನ್ ಪೋಲೀಸರ ವಶದಲ್ಲಿದ್ದು ಇನ್ನೂ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.