Sunday, May 18, 2025

ಹೃದಯಘಾತ: ತಾಳಿ ಕಟ್ಟಿ ಹಸೆಮಣೆ ಮೇಲೆ ಪ್ರಾಣಬಿಟ್ಟ ಯುವಕ

ಬಾಗಲಕೋಟೆ : ಮದುವೆಯಾದ 15 ನಿಮಿಷದಲ್ಲೇ ಯುವಕ ಹೃದಯಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು. ಮೃತ ಯುವಕನನ್ನು 25 ವರ್ಷದ ಪ್ರವೀಣ್​ ಕುರಣಿ ಎಂದು ಗುರುತಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯ, ಜಮಖಂಡಿ ನಗರದ ಘಟನೆ ನಡೆದಿದ್ದು. ಕುಂಭಾರ ಹಳ್ಳದ ಗ್ರಾಮದ ನಿವಾಸಿ ಪ್ರವೀಣ್​ ಕುರಣಿ ವಿವಾಹ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿತ್ತು. ಮದುವೆ ಕೂಡ ಸಂಪನ್ನವಾಗಿತ್ತು, ಆದರೆ ಅಕ್ಷತೆ ಬಿದ್ದ ಹದಿನೈದು ನಿಮಿಷದಲ್ಲೇ ಯುವಕನಿಗೆ ಹೃದಯಘಾತ ಸಂಭವಿಸಿದ್ದು. ವೇದಿಕೆ ಮೇಲೆಯೇ ಪ್ರವೀಣ್​ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಇದನ್ನೂ ಓದಿ :ಮೇಧಾವಿ ತರ ಪೋಸ್​ ಕೊಡೊ ಸಂತೋಷ್​ ಲಾಡ್​ ಒಬ್ಬ ತಿಳಿಗೇಡಿ: ಪ್ರತಾಪ್​ ಸಿಂಹ ವಾಗ್ದಾಳಿ

ಮದುವೆಯಾಗಿ ಹೊಸಜೀವನ ಆರಂಭಿಸುವ ಮೊದಲೇ ಯುವಕ ಪ್ರವೀಣ್​ ಬಾಳ ಬದುಕಿಗೆ ಕೊನೆಯ ವಿದಾಯ ಹೇಳಿದ್ದು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆ ಮನೆಯೀಗ ಸೂತಕದ ಮನೆಯಾಗಿ ಮಾರ್ಪಟ್ಟಿದೆ. ಈ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ದೊರಕಬೇಕಿದೆ.

RELATED ARTICLES

Related Articles

TRENDING ARTICLES