ಮೈಸೂರು : ಮಾಜಿ ಸಂಸದ ಪ್ರತಾಪ್ ಸಿಂಹ ಸಂತೋಷ್ ಲಾಡ್ ವಿರುದ್ದ ವಾಗ್ದಾಳಿ ನಡೆಸಿದ್ದು. ‘ಸಂತೋಷ್ ಲಾಡ್ ಒಬ್ಬ ಮೇಧಾವಿಯಂತೆ ಪೋಸ್ ಕೊಡ್ತಾರೆ, ಆದರೆ ಸಂತೋಷ್ ಲಾಡ್ ಒಬ್ಬ ತಿಳಿಗೇಡಿ. ಆತನಿಗೆ ಮೋದಿ ಬಗ್ಗೆ ಮಾತನಾಡದಿದ್ದರೆ ತಿಂದಿದ್ದು ಕರಗುವುದಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ” ಕರ್ನಾಟಕದಲ್ಲಿ ಇಬ್ಬರು ಸಚಿವರು ದಿನ ಬೆಳಗಾದರೆ ಕಾಗೆ ಥರ ಕಾಕಾ ಥರ ಮಾತಾಡುತ್ತಾರೆ. ಸಚಿವ ಸಂತೋಷ್ ಲಾಡ್ಗೆ ಮೋದಿ ಬಗ್ಗೆ ಮಾತನಾಡದಿದ್ದರೆ ತಿಂದಿದ್ದು ಕರಗುವುದಿಲ್ಲ. ಮರಾಠ ಸಮುದಾಯದ ಸಂತೋಷ್ ಲಾಡ್ ಬಾಯಲ್ಲಿ ಶಿವಾಜಿ ಅವರ ರೀತಿಯ ಮಾತು ಬರೋದಿಲ್ಲ. ಸಂತೋಷ್ ಲಾಡ್ ಬಹಳ ಮೇಧಾವಿ ಏನು ಅಲ್ಲ. ಸಂತೋಷ್ ಲಾಡ್ ಒಬ್ಬ ತಿಳಿಗೇಡಿ ಎಂದು ಹೇಳಿದರು. ಇದನ್ನೂ ಓದಿ :ಸರಿಗಮಪ ಸಿಂಗರ್ ಪೃಥ್ವಿ ಭಟ್ ಅದ್ಧೂರಿ ರಿಸೆಪ್ಷನ್: ವಿಜಯ್ ಪ್ರಕಾಶ್ ಸೇರಿದಂತೆ ಹಲವರು ಭಾಗಿ
ಮುಂದುವರಿದು ಮಾತನಾಡಿದ ಸಂತೋಷ್ ಲಾಡ್ ” ನೇಹಾ ಹತ್ಯೆ ಬಗ್ಗೆ ಪತ್ರಕರ್ತರು ಲಾಡ್ ಬಳಿ ಪ್ರಶ್ನಿಸಿದರೆ ಮೋದಿ ಕೇಳ್ರಿ ಅಂತಾರೆ. ಹತ್ಯೆ ಮಾಡಿದವರ ಎನ್ಕೌಂಟರ್ ಮಾಡೋಕೆ ಮೋದಿ ಅನುಮತಿ ಯಾಕೆ ಬೇಕು. ನೇಹಾ ಹತ್ಯೆಯಾಗಿ ಒಂದು ವರ್ಷ ಕಳೆದಿದೆ, ಆದರೆ ಆಕೆಗೆ ನ್ಯಾಯ ಕೊಡಿಸಿದ್ರಾ..? ಕಾರ್ಮಿಕ ಇಲಾಖೆಯ ಹೆಲ್ತ್ ಕಿಟ್ ಹಗರಣದ ಕಥೆ ಏನಾಯ್ತು. 600 ರೂಪಾಯಿ ಕಿಟ್ನ 2500 ರೂಪಾಯಿಗೆ ಟೆಂಡರ್ ಕೊಟ್ಟಿದ್ದೀರ. ನೀವು ಮೋದಿಗೆ ಬುದ್ದಿ ಹೇಳಿ ಕೊಡುವಷ್ಟು ಬುದ್ದಿವಂತರಾ. ಇದನ್ನೂ ಓದಿ:ಬಿಜೆಪಿಯವರು ಕರೆಯದೆ ಅವರಪ್ಪನಾಣೆ ನಾನು ಬಿಜೆಪಿಗೆ ಹೋಗಲ್ಲ: ಯತ್ನಾಳ್
1971 ರಲ್ಲಿ ಇಂದಿರಾಗಾಂಧಿ ಏನ್ ಕಡಿದು ಕಟ್ಟೆ ಹಾಕಿದ್ರು. ಅವತ್ತಿನ ಯುದ್ದವನ್ನ ಗೆದ್ದ ಇಂದಿರಾಗಾಂಧಿ ಅದನ್ನು ಹಾಳು ಮಾಡಿಕೊಂಡರು. 52 ಭಾರತೀಯ ಸೈನಿಕರು ಪಾಕ್ ವಶದಲ್ಲಿದ್ದರು, ಅವರು ಏನಾದರು. ಇವನೆಲ್ಲಾ ಕನಿಷ್ಠ ಪರಿಜ್ಞಾನ ಇಟ್ಟುಕೊಂಡು ಸಂತೋಷ್ ಲಾಡ್ ಮಾತಾಡಿ. ಪಹಲ್ಗಾಮ್ನಿಂದ ಕನ್ನಡಿಗರನ್ನ ಕರೆದುಕೊಂಡು ಬಂದೆ ಅಂತ ಹೇಳ್ತಾರೆ. ಆದರೆ ಪೆಹಲ್ಗಾಮ್ನಿಂದ ಕನ್ನಡಿಗರನ್ನ ಕರೆ ತರಲು ಅವಕಾಶ ಮಾಡಿ ಕೊಟ್ಟಿದ್ದು ಮೋದಿ. ಈಗಿರುವಾಗ ನಿಮ್ಮ ಸಾಧನೆ ಏನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನವರು ನಿಮ್ಮ ಅನಿಷ್ಟಕೆಲ್ಲಾ ಮೋದಿ ಕಾರಣ ಅನ್ನೋ ರೀತಿ ಮಾತಾಡ್ತೀರಿ. ಪಾಕಿಸ್ತಾನ ಮಾತ್ರ ನಮ್ಮ ಶತೃ ಅಲ್ಲ. ನಮ್ಮ ಜೊತೆಯಲ್ಲೆ ಇಂತಹ ಹಿತಶತ್ರುಗಳು ಟೈಂ ಬಾಂಬ್ ಥರ ಇದ್ದಾರೆ. ಸಂತೋಷ್ ಲಾಡ್ಗೆ ಮೈ ತುಂಬಾ ಮೈನಿಂಗ್ ದುಡ್ಡು ಅಂಟಿ ಕೊಂಡಿದೆ. ಹೊರಗಡೆ ಮಾತ್ರ ತಾನೂ ಬಹಳ ಸಾಚಾ ಅನ್ನೋ ರೀತಿ ಪೋಸ್ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಮೂಡಾ ಹಗರಣಕ್ಕೆ ಸಿಲುಕಿದ ಕಾರಣ ಸಂತೋಷ್ ಲಾಡ್ ಕಾರ್ಮಿಕ ಕಿಟ್ ಹಗರಣದಿಂದ ಬಚಾವ್ ಆದ್ರು. ಇದನ್ನೂ ಓದಿ :ಮುಂಬೈ ವಿಮಾನ ನಿಲ್ದಾಣದಲ್ಲಿ ಐಸಿಸ್ ಉಗ್ರರನ್ನು ಬಂಧಿಸಿದ NIA
ಇಲ್ಲದೆ ಇದ್ದಿದ್ದರೆ ಎರಡನೇ ಬಾರಿ ರಾಜೀನಾಮೆ ಕೊಡಬೇಕಿತ್ತು. ದುಡ್ಡಿನ ಕೊಬ್ಬಿನಿಂದ ಲಾಡ್ ಈ ರೀತಿಯಾಗಿ ಮಾತಾಡ್ತಿದ್ದಾರೆ. ನಿಮಗೆ ದುಡ್ಡು ಇರಬಹುದು ಪತ್ರಕರ್ತರಿಗೆ ನೈತಿಕತೆ ಇದೆ ಇದು ನೆನಪಿಟ್ಟು ಕೊಳ್ಳಿ. ಪಾಕಿಸ್ತಾನವೇ ತನ್ನ ಮೇಲೆ ದಾಳಿ ಆಗಿರುವುದಕ್ಕೆ ಸಾಕ್ಷಿ ಕೊಟ್ಟಿದೆ. ಆದರೂ ಭಾರತದಲ್ಲಿ ಕೆಲವರ ತಕರಾರು ನಿಲ್ಲುತ್ತಿಲ್ಲ. ಕಾಂಗ್ರೆಸ್‌ಗೆ ಪಾಕಿಸ್ತಾನದ ಮೇಲೆ ಸದಾ ಪ್ರೀತಿ. ಕಾಂಗ್ರೆಸ್ ಪಾಕಿಸ್ತಾನದ ಪಿತಾಮಹ ಅದಕ್ಕೆ ಪಾಕ್ ಮೇಲೆ ಪ್ರೀತಿ ಇದೆ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.