ಉಡುಪಿ : ಕಾಪು ಮುಲ್ಲಾರು ಕೊಂಬು ಗುಡ್ಡೆಯ ಕುಟುಂಬದ ನವ ವಧುವಿನಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಶಿವಮೊಗ್ಗದ ಹೊಸನಗರಕ್ಕೆ ಮದುವೆಯಾಗಿರುವ ವಧುವಿನಲ್ಲಿ ಜುಲೈ 6 ರಂದು ಕೊರೋನಾ ಪತ್ತೆಯಾಗಿತ್ತು. ಸದ್ಯ ಈ ಹಿನ್ನಲೆಯಲ್ಲಿ ಕುಟುಂಬ 3 ಮಕ್ಕಳು ಸೇರಿ, 3 ಮಹಿಳೆಯರ ಸಹಿತ ಒಟ್ಟು ಏಳು ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ವಧುವಿನ ಮದುವೆ ಮೆಹೆಂದಿ ಕಾರ್ಯಕ್ರಮದಲ್ಲಿ ಸುಮಾರು 80 ಜನ ಭಾಗವಹಿಸಿದ್ದು, ಸದ್ಯ ಅವರ ಗಂಟಲ ದ್ರವದ ಪರೀಕ್ಷೆ ನಡೆಯುತ್ತಿದೆ.