Saturday, May 17, 2025

‘ನಿನ್ನ ದೇಹದಲ್ಲಿ 15 ಆತ್ಮಗಳಿವೆ’: ಪೊಲೀಸರಿಗೆ ವಂಚಿಸಿ ಹಣ ವಸೂಲಿ ಮಾಡಿದ ಡೋಂಗಿ ಬಾಬಾ

ಬೆಂಗಳೂರು : ಡೋಂಗಿ ಬಾಬನೊಬ್ಬ ಆತ್ಮದ ಕಥೆ ಹೇಳಿ ಪೊಲೀಸ್​ ಕಾನ್ಸ್​ಟೇಬಲ್​ ಒಬ್ಬರನ್ನು ಯಾಮಾರಿಸುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಹಣ ಕಳೆದು ಕೊಂಡ ಕಾನ್ಸ್​ಟೇಬಲ್​ ಈಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಮಹಿಳಾ ಕಾನ್ಸ್​ಟೇಬಲ್​ ಒಬ್ಬರು ಆಡುಗೋಡಿಯಲ್ಲಿರುವ ಪೊಲೀಸ್​ ಕ್ವಾಟ್ರಸ್​ನಲ್ಲಿದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಇವರಿಗೆ ಸ್ನೇಹಿತರ ಮೂಲಕ ಕಲಬುರಗಿಯ ಜ್ಯೋತಿಷಿ ಹೇಮಂತ್​ ಭಟ್​ ಎಂಬ ಜ್ಯೋತಿಷಿಯ ಪರಿಚಯವಾಗಿತ್ತು. ನಂತರ ಮಹಿಳೆಯ ಬಳಿ ಆತ್ಮದ ಬಗ್ಗೆ, ವಶೀಕರಣ ಮಾಡಿದ್ದಾರೆ ಎಂದು ಬಡಾಯಿ ಬಿಟ್ಟಿದ್ದ. ಇದನ್ನೂ ಓದಿ :ಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆ: ದೇಹವನ್ನ 6 ತುಂಡುಗಳಾಗಿ ಕತ್ತರಿಸಿ ಎಸೆದ ಪತ್ನಿ

‘ನಿನ್ನ ದೇಹದಲ್ಲಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಹದಿನೈದು ಆತ್ಮಗಳಿವೆ. ಆ ಆತ್ಮಗಳ ತೊಂದರೆಯಿಂದ ನಿನಗೆ ಅನಾರೋಗ್ಯವಾಗಿದೆ. ಒಂದು ವೇಳೆ ನೀನು ಹೀಗೆ ಬಿಟ್ಟರೆ ನಿನ್ನ ಪ್ರಾಣಕ್ಕೆ ಅಪಾಯ. ನಿನ್ನ ಜಾತಕದಲ್ಲಿ ತುಂಬಾ ದೋಷವಿದ್ದು, ಪೂಜೆ ಮಾಡಿಸಲೇಬೇಕು. ಭಯಬೇಡ ಈ ವಿಚಾರದಲ್ಲಿ ನಾನು ಡಾಕ್ಟರ್ ಇದ್ದೀನಿ.
ಪೂಜೆ ಹಾಕಿ ನಿನ್ನ ಆರೋಗ್ಯ ಸರಿ ಹೋಗುವಂತೆ ಮಾಡ್ತೇನೆ, ನಿನಗೆ ಮದುವೆಯೂ ಆಗುತ್ತೆ ಎಂದು ನಂಬಿಸಿದ್ದನು. ಇದನ್ನೂ ಓದಿ: ಸ್ವಂತ ತಂದೆಯನ್ನೇ ಕೊಲೆ ಮಾಡಿ, ಸಹಜ ಸಾ*ವು ಎಂದು ನಾಟಕವಾಡಿದ ಕಟುಕ ಮಗ

ಕೋರಮಂಗಲದಲ್ಲಿ ಲಾಡ್ಜ್​ಗೆ ಕರೆಸಿ ಪೂಜೆ ಮಾಡಿದ್ದ ಈತ ಮಹಿಳೆ ಬಳಿ ಹಂತ ಹಂತವಾಗಿ ಸುಮಾರು 5 ಲಕ್ಷ ಹಣ ಪಡೆದಿದ್ದನು. ಪೂಜೆ ಹೆಸರಲ್ಲಿ ಮೋಸ ಮಾಡಿದ್ದಾನೆ ಎಂದು ತಿಳಿದ ಮಹಿಳೆ ಆಡುಗೋಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಪಡೆದ ಪೊಲೀಸರು ಕಲಬುರಗಿ ಪೊಲೀಸರಿಗೆ ಮಾಹಿತಿ ನೀಡಿದ್ದು. ಮಾಹಿತಿ ಪಡೆದ ಕಲಬುರಗಿ ಪೊಲೀಸರು ಆರೋಪಿ ಜ್ಯೋತಿಷಿಯನ್ನ ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES