Thursday, May 15, 2025

ರಾಜಕಾರಣಿಗಳ ಜೊತೆ ಡೇಟಿಂಗ್​ಗೆ​ ಹೋಗುವಂತೆ ಬಿಗ್​ಬಾಸ್​ ಸ್ಪರ್ಧಿ ನಮ್ರತಾಗೆ ಕಿರುಕುಳ

ಬೆಂಗಳೂರು : ಮಾಜಿ ಬಿಗ್​ಬಾಸ್​ ಸ್ಪರ್ಧಿ ನಮ್ರಾತಾಗೆ ವ್ಯಕ್ತಿಯೋರ್ವ ಕಿರುಕುಳ ನೀಡಿದ್ದು. ರಾಜಕಾರಣಿಗಳ ಜೊತೆ ಡೇಟಿಂಗ್ ಹೋಗುವಂತೆ ಪೀಡಿಸಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆ ವ್ಯಕ್ತಿ ಕಳುಹಿಸಿರುವ ಮೆಸೆಜ್​ಗಳ ಸ್ಕ್ರೀನ್​ ಶಾಟ್​ ತೆಗೆದು ತಮ್ಮ ಇದನ್ನು ನಿಲ್ಲಿಸುವಂತೆ ಕೋರಿ ಪೋಸ್ಟ್​ ಮಾಡಿದ್ದಾರೆ.

ಮಾಜಿ ಬಿಗ್​ಬಾಸ್​ ಸ್ಪರ್ಧಿ ಮತ್ತು ಖ್ಯಾತ ಕಿರುತೆರೆ ನಟಿ ನಮ್ರತಾಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವ ಕಿರುಕುಳ ನೀಡಿದ್ದಾನೆ. ರಾಕಿ ಜಿ43 (Rocky.g43) ಎಂಬ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಿಂದ ನಮ್ರತಾಗೆ ಮೆಸೇಜ್ ಬಂದಿದ್ದು. ಮೆಸೆಜ್​ ಮಾಡಿರುವ ವ್ಯಕ್ತಿ “ತನಗೆ ಸಾಕಷ್ಟು ರಾಜಕಾರಣಿಗಳು ಮತ್ತು ವಿಐಪಿಗಳ ಜೊತೆ ನಂಟಿದೆ, ನೀವು ರಾಜಕಾರಣಿಗಳ ಜೊತೆ ಡೇಟಿಂಗ್​ ಹೋಗಲು ಇಚ್ಚೆ ಇದ್ದರೆ ನಾನು ನಿಮಗೆ ಅದನ್ನು ಅರೆಂಜ್​ ಮಾಡಿಕೊಡುತ್ತೇನೆ”. ಇದನ್ನೂ ಓದಿ :ಆಸಿಡ್ ದಾಳಿಯಲ್ಲಿ ದೃಷ್ಟಿ ಕಳೆದುಕೊಂಡ ಬಾಲಕಿ 12ನೇ ತರಗತಿ ಪರೀಕ್ಷೆಯಲ್ಲಿ ಶೇ.95.6 ಅಂಕ

“ನೀವು ಡೇಟಿಂಗ್​ಗೆ ಬರಲು ಇಚ್ಚಿಸಿದರೆ ನಿಮ್ಮ ಶುಲ್ಕ ಎಷ್ಟೆಂದು ಹೇಳಿ. ಇದಕ್ಕೆ ನೀವು ನಿನ್ನ ಮೊಬೈಲ್ ನಂಬರ್ ಅಥವಾ ಚಿತ್ರಗಳನ್ನು ಕಳಿಸುವ ಅಗತ್ಯ ಇಲ್ಲ.ನೀವು ಹೆಚ್ಚಿನ ಶುಲ್ಕ ಕೇಳಿದರೂ ಅದನ್ನು ಕೊಡಲು ಸಿದ್ಧ ಇದ್ದೇವೆ. ಈ ವಿಷಯವೆಲ್ಲವೂ ಖಾಸಗಿಯಾಗಿರುತ್ತದೆ. ಎಲ್ಲಿಯೂ ಈ ವಿಷಯ ಬಹಿರಂಗವಾಗುವುದಿಲ್ಲ, ಆಸಕ್ತಿ ಇದ್ದರೆ ಮೆಸೆಜ್​ ಮಾಡಿ” ಎಂದು ನಮ್ರತಾಗೆ ಸಂದೇಶ ಕಳುಹಿಸಿದ್ದೇನೆ. ಇದನ್ನೂ ಓದಿ :ಉಗ್ರ ಮಸೂದ್ ಕುಟುಂಬಕ್ಕೆ ಪಾಕ್​ ಸರ್ಕಾರದಿಂದ 14 ಕೋಟಿ ಪರಿಹಾರ ಘೋಷಣೆ

ನಮ್ರತಾಗೆ ಇನ್ಸ್ಟಗ್ರಾಂನಲ್ಲಿ ಈ ವ್ಯಕ್ತಿ ಎರಡ್ಮೂರು ಭಾರಿ ಈ ಸಂದೇಶ ಕಳುಹಿಸಿದ್ದು, ಇದರಿಂದ ಬೇಸತ್ತ ನಟಿ ಆಘಂತುಕನ ಮೆಸೆಜ್​ಗಳನ್ನು ಸ್ಕ್ರೀನ್​ಶಾಟ್​ ತೆಗೆದು ತಮ್ಮ ಇನ್ಸ್ಟಗ್ರಾಂ ಸ್ಟೋರಿಗೆ ಹಾಕಿದ್ದು. ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಕೋರಿಕೊಂಡಿದ್ದಾರೆ. ಈ ಕುರಿತು ಇನ್ನು ಯಾವುದೇ ದೂರು ದಾಖಲಗಿಲ್ಲ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES