Wednesday, May 14, 2025

‘ಮರಾಠಿ ಮಾತನಾಡದಿದ್ದರೆ ಪಿಜ್ಜಾಗೆ ಹಣ ಕೊಡಲ್ಲ’: ದಂಪತಿ ಕಿರಿಕ್​ ವಿಡಿಯೋ ವೈರಲ್​

ಮುಂಬೈ: ಮರಾಠಿಯಲ್ಲಿ ಮಾತನಾಡದಿದ್ದರೆ ಪಿಜ್ಜಾಗೆ ಹಣ ಕೊಡುವುದಿಲ್ಲ ಎಂದು ಕಿರಿಕ್​ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದ್ದು. ದಂಪತಿಗಳಿಬ್ಬರು ಪಿಜ್ಜಾ ಡೆಲವರಿ ಬಾಯ್​ಗೆ ಕನ್ನಡದಲ್ಲಿ ಮಾತನಾಡಲು ಧಮ್ಕಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮುಂಬೈನ ಭಾಂಡಪ್‌ನಲ್ಲಿರುವ ಸಾಯಿ ರಾಧೆ ಕಟ್ಟಡದಲ್ಲಿ ಘಟನೆಯಾಗಿದೆ ಎಂದು ವರದಿಯಾಗಿದೆ. ಪಿಜ್ಜಾ ಡೆಲವರಿ ಬಾಯ್​ ರೋಹಿತ್​ ಲಾವಾರೆ ಎಂಬಾತ ಪಿಜ್ಜಾ ಡೆಲವರಿ ಮಾಡಲು ಎಂದು ದಂಪತಿಗಳ ಮನೆಗೆ ಬಂದಿದ್ದಾನೆ. ಈ ವೇಳೆ ಮನೆಯಲ್ಲಿದ್ದ ಮಹಿಳೆ ಪಿಜ್ಜಾವನ್ನು ಪಡೆದಿದ್ದು. ಪಿಜ್ಜಾಗೆ ಹಣ ಪಾವತಿ ಮಾಡಲು ಮರಾಠಿಯಲ್ಲಿ ಮಾತನಾಡುವಂತೆ ಒತ್ತಡ ಏರಿದ್ದಾಳೆ. ಇದನ್ನೂ ಓದಿ :ವಿದೇಶಾಂಗ ಸಚಿವ ಜೈ ಶಂಕರ್​ಗೆ ನೀಡಿದ್ದ ಭದ್ರತೆಯಲ್ಲಿ ದಿಢೀರ್​ ಹೆಚ್ಚಳ..!

ಆದರೆ ಈ ವೇಳೆ ಪಿಜ್ಜಾ ಡೆಲವರಿ ಬಾಯ್​ ‘ಮರಾಠಿಯಲ್ಲಿ ಮಾತನಾಡಲೇಬೇಕು ಅಂತ ಕಡ್ಡಾಯ ಇದೆಯೇ?  ಏಕೆ? ಎಂದು. ಅದಕ್ಕೆ ಮರಾಠಿ ದಂಪತಿ, ಹೌದು ಇಲ್ಲಿ ಹಾಗೆಯೇ ಇದೆ ಎಂದು ಹೇಳಿದ್ದು. ಘಟನೆ ದೃಷ್ಯವನ್ನ ರೋಹಿತ್​ ತನ್ನ ಕ್ಯಾಮಾರದಲ್ಲಿ ಸೆರೆಹಿಡಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು. ಘಟನೆ ಸಂಬಂಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

RELATED ARTICLES

Related Articles

TRENDING ARTICLES