Wednesday, May 14, 2025

ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್​ ಮೇಲೆ ಲಾರಿ ಹತ್ತಿಸಿದ ಚಾಲಕ: ಕಾನ್ಸ್​ಟೇಬಲ್ ಸಾ*ವು

ದಾವಣಗೆರೆ : ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್​ ಪೇದೆ ಮೇಲೆ ಹಂತಕನೊಬ್ಬ ಲಾರಿ ಹತ್ತಿಸಿದ್ದು. ಘಟನೆಯಲ್ಲಿ ಪೊಲೀಸ್​ ಪೇದೆ ಸಾವನ್ನಪ್ಪಿದ್ದಾನೆ. ಮೃತ ಪೊಲೀಸ್​ನನ್ನು 32 ವರ್ಷದ ರಾಮಪ್ಪ ಪೂಜಾರಿ ಎಂದು ಗುರುತಿಸಲಾಗಿದೆ.

ದಾವಣಗೆರೆಯ ಹೆಬ್ಬಾಳ್ ಟೋಲ್ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು. ಎಂದಿನಂತೆ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನ ತಡೆದು ಪರಿಶೀಲನೆ ನಡೆಸುತ್ತಿದ್ದರು. ಆದರೆ ಈ ವೇಳೆ ದಾವಣಗೆರೆಯ ಗ್ರಾಮಾಂತರ ಠಾಣೆಯ ಕಾನ್ಸ್​ಟೇಬಲ್​ ರಾಮಪ್ಪ ಪೂಜಾರಿ ಲಾರಿಯೊಂದನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಲಾರಿ ಚಾಲಕ ಲಾರಿಯನ್ನ ನಿಲ್ಲಿಸದೇ ಪೇದೆ ಮೇಲೆಯೆ ಲಾರಿ ಹತ್ತಿಸಿದ್ದಾನೆ. ಇದನ್ನು ಓದಿ :ವಿಕಲಚೇತನ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊ*ಲೆ: ಗ್ರಾಮಸ್ಥರಿಂದ ಪ್ರತಿಭಟನೆ

ಲಾರಿ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ರಾಮಪ್ಪ ಪೂಜಾರಿಯನ್ನ ದಾವಣಗೆರೆಯ ಖಾಸಗಿ ಆಸ್ಪತ್ರೆ ರವಾನಿಸಿತಾದರೂ. ಚಿಕಿತ್ಸೆ ಫಲಿಸದೆ ರಾಮಪ್ಪ ಸಾವನ್ನಪ್ಪಿದ್ದಾನೆ. ಇನ್ನು ಶವಗಾರದ ಬಳಿ ಕುಟುಂಬಸ್ಥರ ಅಕ್ರಂಧನ ಮುಗಿಲು ಮುಟ್ಟಿದ್ದು, ಕಳೆದ ದಿನ ರಾಮಪ್ಪ ತನ್ನ ಒಂದು ವರ್ಷದ ಮಗಳ ಹುಟ್ಟು ಹಬ್ಬ ಆಚರಣೆ ಮಾಡಿದ್ದ ಎನ್ನಲಾಗಿದ್ದು, ಮದುವೆಯಾಗಿ ಕೇಲವ ಒಂದು ವರ್ಷ ಕಳೆದಿತ್ತು ಎನ್ನಲಾಗಿದೆ.

ಇದನ್ನೂ ಓದಿ :DUDE ಸಿನಿಮಾ ಶೀರ್ಷಿಕೆಗಾಗಿ ಜಟಾಪಟಿ; ಮೈತ್ರಿ ಮೂವಿ ಮೇಕರ್ಸ್​ ಜೊತೆ ಮಾತುಕತೆ

ಘಟನಾ ಸ್ಥಳಕ್ಕೆ ಐಜಿಪಿ ರವಿಕಾಂತೇಗೌಡ, ಎಸ್ಪಿ ಉಮಾ ಪ್ರಶಾಂತ್, ಡಿವೈಎಸ್ಪಿ ಶರಣಬಸವೇಶ್ವರ ಸೇರಿದಂತೆ ಸಿಬ್ಬಂದಿಗಳು ಆಗಮಿಸಿದ್ದು, ಕಂಬನಿ ಮಿಡಿದಿದ್ದಾರೆ. ಇತ್ತ ಹೆಬ್ಬಾಳ್ ಟೋಲ್ ಗೇಟ್ ನಲ್ಲಿ ಸರಿಯಾದ ಸಿಸಿ ಟಿವಿ ಅಳವಡಿಸಿರಲಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ, ಇದರಿಂದ ಘಟನೆಯೂ ಕ್ಯಾಮರದಲ್ಲಿ ಸರಿಯಾಗಿ ಸೆರೆಯಾಗಿಲ್ಲ ಎಂದು ಅಧಿಕಾರಿಗಳು ಟೋಲ್​ ಸಿಬ್ಬಂದಿ ವಿರುದ್ದ ಗರಂ ಆಗಿದ್ದಾರೆ.

RELATED ARTICLES

Related Articles

TRENDING ARTICLES