Tuesday, May 13, 2025

‘ನಿನ್ನ ಜಾತಿಯವರು ದೇವಸ್ಥಾನಕ್ಕೆ ಬರಬಾರ್ದು ಎಂದು ಅವಮಾನ’: ಅಧಿಕಾರಿಗಳಿಂದ ಪರಿಹಾರ

ತುಮಕೂರು: ದಲಿತ ಯುವಕನೊಬ್ಬ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಅವಮಾನ ಮಾಡಿದ್ದ ಘಟನೆ ತುಮಕೂರಿನ ಮಧುಗಿರಿಯ ಸಮೀಪ ನಡೆದಿತ್ತು. ಆದರೆ ಇದೀಗ ಈ ಪ್ರಕರಣವನ್ನ ಪೊಲೀಸರು ಮತ್ತು ಅಧಿಕಾರಿಗಳು ಪರಿಹರಿಸಿದ್ದು. ಸವರ್ಣಿಯರ ಮತ್ತು ದಲಿತರ ನಡುವೆ ಸಾಮರಸ್ಯ ಮೂಡಿಸಿ, ದಲಿತರನ್ನ ಸಾಮೂಹಿಕವಾಗಿ ದೇವಸ್ಥಾನ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಕಳೆದ ಮೇ. 10ರ ಶನಿವಾರ ಸಂಜೆ ತುಮಕೂರು ಜಿಲ್ಲೆಯ ಮದುಗಿರಿ ತಾಲ್ಲೂಕಿನ ಕವಣದಾಲ ಗ್ರಾಮದಲ್ಲಿ ಘಟನೆ ನಡೆದಿತ್ತು. ದಲಿತ ಸಮುದಾಯದ ಯುವಕ ಸ್ವಾಮಿನಾಥ್ ಎಂಬಾತ ಗ್ರಾಮದ ರಾಮಾಂಜನೇಯ ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಎಂದು ದೇವಸ್ಥಾನ ಪ್ರವೇಶಿಸಿದ್ದ, ಆದರೆ ಅಲ್ಲಿದ್ದ ಸವರ್ಣಿಯರು, ಯುವಕನನ್ನ ದೇವಸ್ಥಾನ ಪ್ರವೇಶಿಸಿದ್ದಕ್ಕೆ ಅವಮಾನ ಮಾಡಿ, ‘ನಿನ್ನ ಜಾತಿಯವರು ಎಂದು ದೇವಸ್ಥಾನ ಪ್ರವೇಶಿಸಿಲ್ಲ, ನೀನು ದೇವಸ್ಥಾನದ ಒಳಗೆ ಬರಬೇಡ’ ಎಂದು ಅವಮಾನ ಮಾಡಿದ್ದರು.

ಇದನ್ನೂ ಓದಿ :ದೇಶದ ರಕ್ಷಣಾ ನಿಧಿಗೆ ಮಂತ್ರಾಲಯ ಮಠದಿಂದ 25 ಲಕ್ಷ ರೂ ದೇಣಿಗೆ

ಇದೀಗ ಈ ಪ್ರಕರಣವನ್ನ ಗ್ರಾಮದ ಉಪವಿಭಾಗಾಧಿಕಾರಿ, ಪೊಲೀಸರು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಹರಿಸಿದ್ದು. ದಲಿತರು ಮತ್ತು ಸವರ್ಣಿಯರ ನಡುವೆ ಸಾಮಾರಸ್ಯ ಮೂಡಿಸಲು ಯತ್ನಿಸಿದ್ದಾರೆ. ಬಳಿಕ ದಲಿತರನ್ನ ಸಾಮೂಹಿಕವಾಗಿ ದೇವಸ್ಥಾನ ಪ್ರವೇಶ ಮಾಡಿಸಿ, ಜಾತಿ ಎಂಬುದು ಈ ಸಮಾಜಕ್ಕೆ ಅಂಟಿರುವ ಕಳಂಕ, ಇದರಿಂದ ಹೊರ ಬಂದು ಮಾನವರಾಗಿ ಬದುಕಿ ಎಂಬ ಸಂದೇಶ ನೀಡಿದ್ದಾರೆ.

RELATED ARTICLES

Related Articles

TRENDING ARTICLES