ಟ್ಯಾಲೆಂಟ್ ಅನ್ನೋದು ಯಾರಪ್ಪನ ಸೊತ್ತು ಅಲ್ಲ. ಕೂಲಿ ಕಾರ್ಮಿನೊಳಗು ಒಬ್ಬ ಅದ್ಭುತ ನೃತ್ಯ ಪಟು ಇದ್ದಾನೆ ಎಂಬುದಕ್ಕೆ ಈ ದೃಶ್ಯನೆ ಸಾಕ್ಷಿಯಾಗಿದೆ. ಕಟ್ಟಡ ಕಾರ್ಮಿಕನೊಬ್ಬ ಇದ್ದಕ್ಕಿದ್ದಂತೆ ಎದ್ದು ನಿಂತು ಮೂನ್ ವಾಕ್ ನೃತ್ಯವನ್ನು ಮಾಡುವ ಮೂಲಕ ತನ್ನೊಳಗಿನ ಅದ್ಬುತ ಪ್ರತಿಭೆಯನ್ನು ಈ ದೃಶ್ಯದಲ್ಲಿ ಅನಾವರಣ ಮಾಡಿದ್ದಾನೆ. ಕಟ್ಟಡ ಕಾರ್ಮಿಕನ ನೃತ್ಯದ ಈ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಶಹಬ್ಬಾಶ್ ಅಂದಿದ್ದಾರೆ.
Never judge a book by its cover. pic.twitter.com/cIp2oZqfzI
— The Figen (@TheFigen_) May 1, 2025
ಮುಖ ನೋಡಿ ಮಣೆ ಹಾಕಬೇಡ ಅನ್ನೊ ಒಂದು ಗಾದೆ ಮಾತಿದೆ. ಹೌದು ಯಾರೊಬ್ಬರ ಟ್ಯಾಲೆಂಟ್ ಅವರ ಮುಖ ಅವರ ವೇಷ ಭೂಷಣದಲ್ಲಿ ಅಡಗಿರಲ್ಲ ಅನ್ನೋದಕ್ಕೆ ಕಟ್ಟಡ ಕಾರ್ಮಿಕನ ಈ ನೃತ್ಯವೇ ಸಾಕ್ಷಿಯಾಗಿದೆ. ಈ ಕಟ್ಟಡ ಕಾರ್ಮಿಕ ಇದ್ದಕ್ಕಿದ್ದಂತೆ ಎದ್ದು ನಿಂತು ಮೂನ್ ವಾಕ್ನಲ್ಲಿ ನೃತ್ಯ ಮಾಡಿರುವ ಈ ದೃಶ್ಯ ನೋಡಿದರೆ ಮೈಕಲ್ ಜ್ಯಾಕ್ಸನ್ನನ್ನು ಈ ಕಾರ್ಮಿಕನ ಮುಂದೆ ನಿವಾಳಿಸಿ ತೆಗಿಬೇಕು. ಮೂನ್ ವಾಕ್ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಮೈಕೆಲ್ ಜ್ಯಾಕ್ಸನ್ ಹೆಜ್ಜೆಯನ್ನು ದಿಟ್ಟೋ ದಿಟ್ಟು ಅನುಕರಣೆ ಮಾಡಿದ್ದಾನೆ ಈ ಕಟ್ಟಡ ಕಾರ್ಮಿಕ.
ಇದನ್ನೂ ಓದಿ :ಆಪರೇಷನ್ ಸಿಂಧೂರ್ ಕಾರ್ಯಚರಣೆ: 17 ನವಜಾತ ಶಿಶುಗಳಿಗೆ ‘ಸಿಂಧೂರ’ ಎಂದು ನಾಮಕರಣ
ಇವಳೊಗಿನ ಅದ್ಭುತ ಪ್ರತಿಭೆಗೆ ಉತ್ತಮ ವೇದಿಕೆ ಸಿಕ್ಕಿದರೆ, ಈತ ಮೈಕಲ್ ಜ್ಯಾಕ್ಸನ್ನನ್ನು ಮೀರಿಸಬಹುದು. ಈತ ಡಾನ್ಸ್ ಮಾಡುತ್ತಿರಬೇಕಾದರೆ ಈತನ ಸಹೋಧ್ಯೋಗಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡುವ ಮೂಲಕ ಈತನೊಳಗಡೆ ಇನ್ನಷ್ಟು ಉತ್ಸಾಹವನ್ನು ತುಂಬಿದ್ದಾರೆ. ಕಾರ್ಮಿಕನ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದು ವೀಕ್ಷಕರು ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.