Tuesday, May 13, 2025

International Taekwon Competition : ಎರಡು ಚಿನ್ನ ಗೆದ್ದ ಕನ್ನಡಿಗ ‘ದಕ್ಷಿಣ್ ಸೂರ್ಯ’

ಮಲೇಷ್ಯಾದ ಪ್ಯಾನಸೋನಿಕ್‍ನಲ್ಲಿ ಅಂತಾರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಬೆಂಗಳೂರಿನ ದಕ್ಷಿಣ್ ಸೂರ್ಯ, 2 ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದು ಅಸಾಧಾರಣ ಸಾಧನೆ ಮಾಡಿದ್ದಾರೆ. 15ರಿಂದ 17 ವರ್ಷದೊಳಗಿನ ವಯೋಮಿತಿಯಲ್ಲಿ 62 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ದಕ್ಷಿಣ ಸೂರ್ಯ ಸ್ಪರ್ಧಿಸಿದ್ದ 4 ವಿಭಾಗಗಳಲ್ಲೂ ಪದಕಗಳ ಬೇಟೆಯಾಡಿರೋದು ವಿಶೇಷವಾಗಿದೆ.

ಸ್ಪಾರಿಂಗ್ ವಿಭಾಗದಲ್ಲಿ 1 ಚಿನ್ನ, ಪ್ಯಾಟರ್ನ್ ವಿಭಾಗದಲ್ಲಿ 1 ಚಿನ್ನ, ವಾರಿಯರ್ ಸ್ಪಾರಿಂಗ್ ವಿಭಾಗದಲ್ಲಿ 1 ಬೆಳ್ಳಿ ಹಾಗೂ ವಾರಿಯರ್ ಪ್ಯಾಟರ್ನ್ ವಿಭಾಗದಲ್ಲಿ 1 ಕಂಚಿನ ಪದಕವನ್ನು ದಕ್ಷಿಣ್ ಸೂರ್ಯ
ಗಳಿಸಿದ್ದಾರೆ. ಭಾರತ, ಇಂಡೋನೇಷ್ಯಾ, ಬಾಂಗ್ಲಾದೇಶ, ಮ್ಯಾನ್ಮಾರ್, ಸಿರಿಯಾ, ಮಲೇಷ್ಯಾ ಸೇರಿದಂತೆ ವಿವಿಧ ರಾಷ್ಟ್ರಗಳ 1000ಕ್ಕೂ ಹೆಚ್ಚು ಪ್ರತಿನಿಧಿಗಳು ಈ ವಲ್ರ್ಡ್ ಚಾಂಪಿಯನ್‍ಷಿಪ್‍ನಲ್ಲಿ ಭಾಗವಹಿಸಿದ್ದರು..
ಭಾರತ ತಂಡದಿಂದ ಸುಮಾರು 65ಕ್ಕೂ ಹೆಚ್ಚು ಕ್ರೀಡಾಕೂಟಗಳು ಭಾಗಿಯಾಗಿದ್ದು ವಿಶೇಷ.

ಇದನ್ನೂ ಓದಿ : Virat Kohli: ಟೆಸ್ಟ್​ ಕ್ರಿಕೆಟ್​ಗೆ ವಿರಾಟ್​ ಕೊಹ್ಲಿ ವಿದಾಯ

ಬೆಂಗಳೂರಿನ ಹೆಬ್ಬಾಳದಲ್ಲಿರೋ ಎನ್‍ಎಫ್‍ಸಿ ತರಬೇತಿದಾರ ಕೆ. ಪವನ್ ಗರಡಿಯಲ್ಲಿ ದಕ್ಷಿಣ್ ಸೂರ್ಯ ಪಳಗಿದ್ದು, ಎನ್‍ಎಫ್‍ಸಿ ವತಿಯಿಂದ 14 ಸ್ಪರ್ಧಿಗಳು ಸ್ಪರ್ಧಿಸಿದ್ದರು. ದಕ್ಷಿಣ ಸೂರ್ಯ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೇಕ್ವಾಂಡೋಗೆ ಆಯ್ಕೆಯಾಗಿದ್ದು, ಈ ಹಿಂದೆ ಚೆನ್ನೈ, ಹೈದ್ರಾಬಾದ್, ಕೇರಳ, ಗೋವಾದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಚಿನ್ನ ಹಾಗೂ ಬೆಳ್ಳಿಯ ಪದಕ ಗಳಿಸಿದ್ದಾರೆ.

RELATED ARTICLES

Related Articles

TRENDING ARTICLES