Tuesday, May 13, 2025

ಪತ್ನಿ ಜೊತೆ ಅನೈತಿಕ ಸಂಬಂಧ: ಯುವಕನನ್ನು ಕೊಂದು ಕಾಲುವೆಗೆ ಎಸೆದ ಪತಿ

ಕೊಪ್ಪಳ : ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನು ಆಕೆಯ ಗಂಡ, ಮೈದುನ ಮತ್ತು ಸ್ನೇಹಿತರು ಹೊಡೆದು ಕೊಲೆ ಮಾಡಿ ಬಾವಿಗೆ ಎಸೆದಿರುವ ಘಟನೆ ಕೊಪ್ಪಳದಲ್ಲಿ ನಡೆದಿದ್ದು. ಕೊಲೆಯಾದ ಯುವಕನನ್ನು 27 ವರ್ಷದ ಸುರೇಶ್​ ಎಂದು ಗುರುತಿಸಲಾಗಿದೆ.

ಸುರೇಶ್​ ಎಂಬಾತ ಹಣವಾಳ ಗ್ರಾಮದ ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದನು. ಮಧ್ಯರಾತ್ರಿ ಮಹಿಳೆಯೊಂದಿಗೆ ಇದ್ದ ಸಂದರ್ಭದಲ್ಲಿ ಸುರೇಶ್​ನನ್ನು ಮಹಿಳೆಯ ಪತಿ, ಮೈದುನ ಮತ್ತು ಆತನ ಸ್ನೇಹಿತರು ಹಿಡಿದಿದ್ದರು. ನಂತರ ಆತನನ್ನು ಹೊಡೆದು ಕೊಲೆ ಮಾಡಿ, ಆತನ ಶವವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಮಹಿಳೆಯ ಮನೆಗೆ ಹೋಗಿ ತೋರಿಸಿ, ಆಕೆಯ ಪೋಷಕರಿಗೆ ವಿಶಯ ತಿಳಿಸಿ ಶವವನ್ನು ಕೊರೆಕೊಪ್ಪ ಸಮೀಪದ ಕಾಲುವೆ ಒಂದರಲ್ಲಿ ಎಸೆದಿದ್ದರು. ಇದನ್ನೂ ಓದಿ :ನೆಹರು, ಇಂದಿರಾ ಗಾಂಧಿ ಮಾಡಿದ ತಪ್ಪನ್ನ ಮೋದಿ ಮಾಡಬಾರದು: ಯತ್ನಾಳ್​​

ಆದರೆ ಸುರೇಶ್​ ಮನೆಗೆ ಮರಳದ ಕಾರಣ ಸುರೇಶ್​ ಪೋಷಕರು ಮಗ ಕಾಣೆಯಾಗಿದ್ದಾನೆ ಎಂದು ಗಂಗಾವತಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ಮೊದಲಿಗೆ ಯುವಕನ ಮೊಬೈಲ್​ನ ಪೋನ್ ಕಾಲ್​ ವಿವರ ಮತ್ತು ಸಿಡಿಆರ್​ ಪರಿಶೀಲಿಸಿದ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

ಇದನ್ನೂ ಓದಿ :ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮೋದಿ ಭಾಷಣ: ಕೊಡ್ತಾರಾ ಖಡಕ್​ ಸಂದೇಶ..?

ಸತತ 24 ಗಂಟೆಗಳ ಕಾರ್ಯಾಚರಣೆ ನಂತರ ಅಂದಾಜು ನೂರು ಅಡಿಗಳ ಆಳದ ಭವರ್‍ನಲ್ಲಿ ಎಸೆದಿದ್ದ ಸುರೇಶನ ಶವವನ್ನು ಪೊಲೀಸರು ಜಪ್ತಿ ಮಾಡಿದ್ದು. ಒಟ್ಟಿನಲ್ಲಿ ಮುಚ್ಚಿಹೋಗಬೇಕಾದ ಪ್ರಕರಣವೊಂದು ಪೊಲೀಸರ ಕಾರ್ಯಚರಣೆಯಿಂದಾಗಿ ಆರೋಪಿಗಳ ಬಂಧನವಾಗಿದೆ.

RELATED ARTICLES

Related Articles

TRENDING ARTICLES