Monday, May 12, 2025

ದೇಶದ ರಕ್ಷಣೆಗೆ ಇಸ್ರೋ ಸದಾ ಬದ್ದ; ನೆರೆಯವರ ಮೇಲೆ ಸದಾ ಕಣ್ಣಿಟ್ಟಿರುತ್ತೇವೆ ಎಂದ ಇಸ್ರೋ ಮುಖ್ಯಸ್ಥ

ಇಂಪಾಲ್​ : ದೇಶದ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯದೇಶದ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಕಾರ್ಯತಂತ್ರದ ಉದ್ದೇಶಕ್ಕಾಗಿ ಕನಿಷ್ಠ 10 ಉಪಗ್ರಹಗಳು ನಿರಂತರವಾಗಿ ದಿನದ 24 ಗಂಟೆಯೂನ್ನು ಖಚಿತಪಡಿಸಿಕೊಳ್ಳುವ ಕಾರ್ಯತಂತ್ರದ ಉದ್ದೇಶಕ್ಕಾಗಿ ಕನಿಷ್ಠ 10 ಉಪಗ್ರಹಗಳು ನಿರಂತರವಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ ) ಅಧ್ಯಕ್ಷ ವಿ ನಾರಾಯಣನ್ ಹೇಳಿದ್ದಾರೆ.

ನಿನ್ನೆ (ಮೇ.11) ಇಂಫಾಲ್‌ನಲ್ಲಿ ನಡೆದ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ (ಸಿಎಯು) 5 ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಇಸ್ರೋ ಮುಖ್ಯಸ್ಥ ವಿ. ನಾರಾಯಣ್​, ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ನಡುವೆಯೂ ದೇಶದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಸ್ರೋ ಮಾಡುತ್ತಿರುವ ಕಾರ್ಯದ ಬಗ್ಗೆ ವಿವರಿಸಿದರು. “ದೇಶದ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯತಂತ್ರದ ಉದ್ದೇಶಕ್ಕಾಗಿ ಕನಿಷ್ಠ 10 ಉಪಗ್ರಹಗಳು ನಿರಂತರವಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ” ಎಂದು ಹೇಳಿದರು.

ಇದನ್ನೂ ಓದಿ :ಭೀಕರ ರಸ್ತೆ ಅಪಘಾತ: 13 ಮಂದಿ ಸಾ*ವು, 11 ಮಂದಿಗೆ ಗಂಭೀರ ಗಾಯ

ಮುಂದುವರಿದು ಮಾತನಾಡಿದ ವಿ. ನಾರಯಣ್​ ” ನಮ್ಮ ನೆರೆಹೊರೆಯವರ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ನಮ್ಮ ದೇಶದ ಸುರಕ್ಷತೆಯನ್ನು ಖಚಿತಪಡಿಸಿ ಕೊಳ್ಳಬೇಕಾದರೆ, ನಾವು ನಮ್ಮ ಉಪಗ್ರಹಗಳ ಮೂಲಕ ಸೇವೆ ಸಲ್ಲಿಸಬೇಕು. ನಮ್ಮ 7,000 ಕಿ.ಮೀ. ಸಮುದ್ರ ತೀರ ಪ್ರದೇಶಗಳನ್ನು ನಾವು ಮೇಲ್ವಿಚಾರಣೆ ಮಾಡಬೇಕು. ನಾವು ಸಂಪೂರ್ಣ ಉತ್ತರ ಭಾಗವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಉಪಗ್ರಹ ಮತ್ತು ಡ್ರೋನ್ ತಂತ್ರಜ್ಞಾನವಿಲ್ಲದೆ, ನಾವು ಅದನ್ನು ಸಾಧಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

ಇದನ್ನೂ ಓದಿ :Virat Kohli: ಟೆಸ್ಟ್​ ಕ್ರಿಕೆಟ್​ಗೆ ವಿರಾಟ್​ ಕೊಹ್ಲಿ ವಿದಾಯ

ಪಹಲ್ಗಾಮ್​ ಘಟನೆ ಪ್ರತಿಕಾರವಾಗಿ ಭಾರತ ಕೈಗೊಂಡ ಆಪರೇಷನ್​ ಸಿಂಧೂರ್​ಗೆ ಇಸ್ರೋ ಬಹಳಷ್ಟು ಕೊಡುಗೆಯನ್ನು ಕೊಟ್ಟಿದ್ದು. ಉಗ್ರರ ಲಾಂಚ್‌ ಪ್ಯಾಡ್‌, ಉಗ್ರರ ಅಡುಗುತಾಣಗಳ ನಿಖರ ಪೋಟೋಗಳು ಸೇರಿದಂತೆ ಅವರ ಮೇಲೆ ನಿಗಾ ಇರಿಸುವ ಕೆಲಸವನ್ನ ಇಸ್ರೋ ಮಾಡಿದೆ.

RELATED ARTICLES

Related Articles

TRENDING ARTICLES