Sunday, May 11, 2025

ಭಾರತದ ದಾಳಿಗೆ ಹೆದರಿ ಅಮೆರಿಕಾ ಬಳಿ ಅಂಗಲಾಚಿದ ಪಾಕಿಸ್ತಾನ ವಿದೇಶಾಂಗ ಸಚಿವ..!

ನವದೆಹಲಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಳ್ಳಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಷ್ಕ್ ದರಾರ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಇತ್ತ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ ಮಿಶ್ರಿ ಕೂಡ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದು ಎರಡು ದೇಶಗಳ ನಡುವಿನ ಕದನ ವಿರಾಮದ ಬಗ್ಗೆ ಖಚಿತಪಡಿಸಿದ್ದಾರೆ. ಆದರೆ ಭಾರತದ ದಾಳಿಗ ಹೆದರಿ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್​ ದಾರ್​ ದೊಡ್ಡಣನ ಬಳಿ ಕದನ ವಿರಾಮ ಮಾಡಿಸಲು ಅಂಗಲಾಚಿದ್ದರು ಎಂದು ಮಾಹಿತಿ ದೊರೆತಿದೆ.

ಈ ಕುರಿತು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್​ ಟ್ವಿಟ್​ ಮಾಡಿದ್ದು. “ಪಾಕಿಸ್ತಾನ ಮತ್ತು ಭಾರತ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಪಾಕಿಸ್ತಾನವು ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗದಂತೆ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಯಾವಾಗಲೂ ಶ್ರಮಿಸಿದೆ ಎಂದು ಪಾಕ್ ಸಚಿವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ :ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿ: ಭಾರತ ಸ್ಪಷ್ಟನೆ

ಭಾರತದ ಪ್ರತಿದಾಳಿಗೆ ಹೆದರಿರುವ ಪಾಕಿಸ್ತಾನ, ಕದನ ವಿರಾಮಕ್ಕೆ ನಮಗೆ ಅವಕಾಶ ನೀಡಬೇಕೆಂದು ಅಮೆರಿಕ ಮುಂದೆ ಹೋಗಿತ್ತು. ಅಮೆರಿಕೆಯ ಮಧ್ಯಸ್ಥಿಕೆಯಲ್ಲಿ ಪಾಕ್ ಕದಮ ವಿರಾಮಕ್ಕೆ ಅಂಗಲಾಚಿಕೊಂಡಿತ್ತು ಎಂದು ವರದಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಪಾಕಿಸ್ತಾನದ ಡಿಜಿಎಂಒ ಫೋನ್ ಕರೆ ಮಾಡುವ ಮೂಲಕ ಉಪಕ್ರಮವನ್ನು ತೆಗೆದುಕೊಂಡರು, ನಂತರ ಚರ್ಚೆಗಳು ನಡೆದು ಒಮ್ಮತಕ್ಕೆ ಬರಲಾಯಿತು. ಬೇರೆ ಯಾವುದೇ ಸ್ಥಳದಲ್ಲಿ ಬೇರೆ ಯಾವುದೇ ವಿಷಯದ ಕುರಿತು ಮಾತುಕತೆ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಅವರು ಹೇಳಿದರು

RELATED ARTICLES

Related Articles

TRENDING ARTICLES