ಕನ್ನಡ ಬಿಗ್ಬಾಸ್ ಸೀಸನ್ 10ರ ಸಿಂಹಿಣಿ ಎಂದು ಖ್ಯಾತಿಯಾಗಿದ್ದ ಸಂಗೀತ ಶೃಂಗೇರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಣಯ ತೆಗೆದುಕೊಂಡಿದ್ದು. ದೇಶದಲ್ಲಿ ಯುದ್ದದ ಕಾರ್ಮೋಡವಿರುವ ಕಾರಣ ಇಂತಹ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ 10ರ ಬಳಿಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ಸಂಗೀತ ಶೃಂಗೇರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಸಹ ಇದ್ದಾರೆ. ಕಳೆದ ಬಾರಿ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಸಂಗೀತ ಈ ಭಾರಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಇದನ್ನೂ ಓದಿ :ಭಾರತದ ಮೇಲೆ ನಡೆಯುವ ಉಗ್ರಕೃತ್ಯವನ್ನು ಯುದ್ದವೆಂದೇ ಪರಿಗಣಿಸುತ್ತೇವೆ: ಧೃಡ ನಿರ್ಧಾರ ಕೈಗೊಂಡ ಭಾರತ
ಪೋಸ್ಟ್ನಲ್ಲಿ ಏನಿದೆ..!
ತಮ್ಮ ಅಭಿಮಾನಿ ಬಳಗಕ್ಕೆ ಸಂಗೀತ ಸಂದೇಶ ನೀಡಿದ್ದು. ‘ನನ್ನ ಹುಟ್ಟುಹಬ್ಬವನ್ನು ಆಚರಿಸಲು, ನನಗೆ ಸಪ್ರೈಸ್ ನೀಡಲು ನೀವು ಕಾಯುತ್ತಿದ್ದೀರಾ. ನನಗಾಗಿ ಪ್ರೀತಿಯನ್ನು ಕಳುಹಿಸಲು, ನನ್ನ ಜೊತೆ ನನ್ನ ಹುಟ್ಟುಹಬ್ಬ ಆಚರಿಸಲು ನಡೆಸಿರುತ್ತೀದ್ದೀರ. ನಿಮ್ಮ ಈ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ. ಯಾಕೆಂದರೆ ನೀವು ನನ್ನ ಮೇಲಿಟ್ಟಿರುವ ಪ್ರೀತಿ ನನ್ನ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಿದೆ ಅನ್ನೋದು ನಿಜಾ.
ಆದರೆ ಈ ವರ್ಷ ವಿಭಿನ್ನವಾಗಿದೆ. ಸದ್ಯ ಗಡಿಯಲ್ಲಿ ಏನೇನೋ ನಡೆಯುತ್ತಿದೆ. ಎಲ್ಲಾದಕ್ಕೂ ನಮ್ಮ ಹೆಮ್ಮೆಯ ಸೈನಿಕರ ಗಟ್ಟಿಯಾಗಿಯೇ ನಿಂತು ನಮ್ಮನ್ನು ರಕ್ಷಿಸುತ್ತಿದ್ದಾರೆ. ಅಲ್ಲದೇ ಮುಗ್ಧ ಜೀವಗಳು ಪ್ರಾಣ ಕಳೆದುಕೊಂಡಿವೆ, ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ನನ್ನ ಹೃದಯ ತುಂಬಿ ಬಂದಿದೆ.
ಹಾಗಾಗಿ ದೇಶದಲ್ಲಿ ಹಲವಾರು ಜನರು ನೋವಿನಲ್ಲಿ ನಲುಗುತ್ತಿರುವಾಗ, ಎಷ್ಟೋ ಜನ ತಮ್ಮ ಪ್ರೀತಿಪಾತ್ರರು ಸುರಕ್ಷಿತವಾಗಿರಲಿ ಎಂದು ಬೇಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ನನ್ನ ಹುಟ್ಟುಹಬ್ಬವನ್ನು ಆಚರಿಸೋದು ನನಗೆ ಸರಿ ಎಂದೆನಿಸುವುದಿಲ್ಲ ಎಂದಿದ್ದಾರೆ ಸಂಗೀತ ಶೃಂಗೇರಿ.
ಇದನ್ನೂ ಓದಿ :ಕನ್ನಡ ಚಿತ್ರರಂಗ ಸೇನೆ ಮತ್ತು ಪ್ರಧಾನಿಯೊಂದಿಗೆ ಧೃಡವಾಗಿ ನಿಂತಿದೆ: ಕಿಚ್ಚ ಸುದೀಪ್
ಈ ವರ್ಷ ನಾನು ಯಾಕೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಬಯಸುವುದಿಲ್ಲ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ನಾನು ನಂಬಿದ್ದೇನೆ. ಇದು ನನ್ನ ಬಗ್ಗೆ ಅಲ್ಲ, ನೋಯುತ್ತಿರುವವರೊಂದಿಗೆ ಸಹಾನುಭೂತಿ ಮತ್ತು ಒಗ್ಗಟ್ಟಿನಿಂದ ನಿಲ್ಲುವುದರ ಬಗ್ಗೆ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ ಸಂಗೀತ ಶೃಂಗೇರಿ.
ನೋವಲ್ಲಿ ಇವರುವರನ್ನು, ಸೈನಿಕರನ್ನು ನಿಮ್ಮ ಹೃದಯದಲ್ಲಿಡಿ, ನಿಮ್ಮ ಪ್ರಾರ್ಥನೆಯಲ್ಲಿರಲಿ. ಪ್ರತಿಕ್ಷಣ ನನ್ನ ಮೇಲೆ ಪ್ರೀತಿಯನ್ನು ಸುರಿಸಿರೋದಕ್ಕೆ ತುಂಬಾನೆ ಧನ್ಯವಾದಗಳು. ಮೌನದಲ್ಲೂ ನಿಮ್ಮ ಪ್ರೀತಿ ನನಗೆ ತಲುಪಲಿದೆ ಎಂದಿದ್ದಾರೆ.