Sunday, May 11, 2025

ಭಾರತದ ಮೇಲೆ ನಡೆಯುವ ಉಗ್ರಕೃತ್ಯವನ್ನು ಯುದ್ದವೆಂದೇ ಪರಿಗಣಿಸುತ್ತೇವೆ: ದೃಡ ನಿರ್ಧಾರ ಕೈಗೊಂಡ ಭಾರತ

ದೆಹಲಿ : ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಉದ್ವಿಘ್ನತೆ ಹೆಚ್ಚಾಗುತ್ತಿದ್ದು. ಕಳೆದ ಎರಡು ದಿನಗಳಿಂದ ಪಾಕಿಸ್ತಾನ ಭಾರತದ ಮೇಲೆ ಸಂಜೆಯ ನಂತರ ಡ್ರೋನ್​ ದಾಳಿ ನಡೆಸುತ್ತಿದೆ. ಇದರ ನಡುವೆ ಇಂದು ಭಾರತ ಕೊನೆಯ ಎಚ್ಚರಿಕೆ ನೀಡಿದ್ದು. ಮುಂದಿನ ಬಾರಿ ಭಾರತದ ಮೇಲೆ ಪಾಕಿಸ್ತಾನದಿಂದ ನಡೆಯುವ ಭಯೋತ್ಪಾದಕ ದಾಳಿಗಳನ್ನು ಯುದ್ಧ ಕೃತ್ಯಗಳೆಂದು ಪರಿಗಣಿಸಲಾಗುವುದು ಎಂದು ಭಾರತ ಸರ್ಕಾರ ಘೋಷಿಸಿದೆ.

ಭಯೋತ್ಪಾದನೆ ಎಂಬುದು ದಶಕಗಳಿಂದ ಭಾರತ ಸೇರಿದಂತೆ ಇಡೀ ವಿಶ್ವವನ್ನು ಕಾಡುತ್ತಿದ್ದು. ಭಾರತಕ್ಕೆ ನೆರೆಯ ರಾಷ್ಟ್ರ ಪಾಕಿಸ್ತಾನ ಪ್ರಾಯೋಜಿಕ ಉಗ್ರವಾದ ತಲೆ ನೋವಾಗಿದೆ. ಇದರ ವಿರುದ್ದ ಭಾರತ ಧೃಡ ನಿರ್ಧಾರವನ್ನ ಕೈಗೊಂಡಿದ್ದು. ಭವಿಷ್ಯದಲ್ಲಿ ನಡೆಯುವ ಯಾವುದೇ ಭಯೋತ್ಪಾದಕ ಕೃತ್ಯವನ್ನು ದೇಶದ ವಿರುದ್ಧದ ಯುದ್ಧ ಕೃತ್ಯವೆಂದು ಪರಿಗಣಿಸಲಾಗುವುದು ಮತ್ತು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಲಾಗುವುದು ಎಂದು ಭಾರತ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಕನ್ನಡ ಚಿತ್ರರಂಗ ಸೇನೆ ಮತ್ತು ಪ್ರಧಾನಿಯೊಂದಿಗೆ ಧೃಡವಾಗಿ ನಿಂತಿದೆ: ಕಿಚ್ಚ ಸುದೀಪ್​

ಭಾರತಕ್ಕೆ ಕಳೆದ ಅನೇಕ ವರ್ಷಗಳಿಂದ ಭಯೋತ್ಪಾದನೆ ಬಹಳ ದೊಡ್ಡ ಸಮಸ್ಯೆಯಾಗಿದ್ದು. ಕಳೆದ 10 ವರ್ಷಗಳಿಂದ ಪ್ರತಿಬಾರಿ ಭಯೋತ್ಪಾದನ ಕೃತ್ಯಗಳು ನಡೆದಾಗ ಭಾರತ ಅದರ ವಿರುದ್ದ ಕಾರ್ಯಚರಣೆ ನಡೆಸುತ್ತಿದೆ. ಆದರೆ ಇದೀಗ ಧೃಡ ನಿರ್ಧಾರ ಕೈಗೊಂಡಿದ್ದು. ಇನ್ನು ಮುಂದೆ ಭಾರತ ತನ್ನ ಮೇಲೆ ನಡೆಯುವ ಭಯೋತ್ಪಾದನ ಕೃತ್ಯವನ್ನು ಯುದ್ದವೆಂದೆ ಪರಿಗಣಿಸಿ ಅದಕ್ಕ ತಕ್ಕ ಉತ್ತರ ನೀಡಲಾಗುವುದು ಎಂದು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES