Saturday, May 10, 2025

ಭಾರತದಿಂದ ತೀವ್ರ ಪ್ರತಿದಾಳಿ: ಮಾತುಕತೆಗೆ ಮುಂದಾದ ಪಾಕಿಸ್ತಾನ..!

ಪಾಕಿಸ್ತಾನ ನಡೆಸುತ್ತಿರುವ ದಾಳಿಗೆ ಅನುಗುಣವಾಗಿ ಅದಕ್ಕಿಂತ ತೀವ್ರವಾಗಿ ಭಾರತ ದಾಳಿ ನಡೆಸುತ್ತಿದ್ದು. ಇದರಿಂದ ತತ್ತರಿಸಿರುವ ಪಾಕಿಸ್ತಾನ ಸೇನೆಯ ಡಿಜಿಎಂಒ, ಭಾರತದ ಡಿಜಿಎಂಒ ಸಂಪರ್ಕಿಸಿ ಮಾತನಾಡಿದ್ದಾರೆ. ಉದ್ವಿಘ್ನತೆ ಕಡಿಮೆ ಮಾಡಲು ಚರ್ಚೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

26 ಜನ ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ಪಾಕಿಗಳ ಮೇಲೆ ಭಾರತ ಸೇನೆ ಭಾರೀ ದಾಳಿ ನಡೆಸುತ್ತಿದ್ದು. ಪಾಕಿಸ್ತಾನದ ಪ್ರಮುಖ ಸೇನಾ ನೆಲೆಗಳ ಮೇಲೆ ಡ್ರೋನ್​ ಮೂಲಕ ದಾಳಿ ನಡೆಸಿದ್ದಾರೆ. ಈ ಸಂಘರ್ಷದ ನಡುವೆ ಮಹತ್ವದ ಬೆಳವಣಿಗೆಯೊಂದು ಕಾಣಿಸಿದೆ. ಪಾಕಿಸ್ತಾನದ ದಾಳಿಗೆ ತೀವ್ರ ರೂಪದಲ್ಲಿ ಭಾರತವು ಉತ್ತರ ನೀಡಿದ ಬಳಿಕ ಪಾಕಿಸ್ತಾನವು ಮಾತುಕತೆಗೆ ಪ್ರಯತ್ನ ನಡೆಸಿದೆ. ಇದನ್ನೂ ಓದಿ :ಭಾರತಕ್ಕೆ ಬೇಕಾಗಿದ್ದ ಐವರು ಕುಖ್ಯಾತ ಉಗ್ರರ ಸಾವು: ಉಗ್ರರ ಮಾಹಿತಿ ಬಹಿರಂಗ

ಭಾರತದ ಪ್ರತಿದಾಳಿ ತೀವ್ರಗೊಂಡ ಬೆನ್ನಲ್ಲೇ ಭಾರತದ ಸೇನೆಯ ಡಿಜಿಎಂಒ ಅನ್ನು ಪಾಕಿಸ್ತಾನ ಸೇನೆ ಡಿಜಿಎಂಒ (ಡೈರೆಕ್ಟರ್ ಜನರಲ್‌ ಆಫ್ ಮಿಲಿಟರಿ ಆಪರೇಷನ್) ಸಂಪರ್ಕಿಸಿದ್ದು. ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಚರ್ಚೆಗೆ ಮುಂದಾಗಿದೆ ಎಂದು ಕೇಂದ್ರದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ :ಸ್ವಯಂ ಸೇವಕರಾಗಲು ಯುವಕರ ಉತ್ಸಾಹ: ಪ್ರಾಣವನ್ನೇ ನೀಡಲು ಸಿದ್ದವೆಂದ ಯುವಪಡೆ

ಭಾರತದ ಡಿಜಿಎಂಒ ಪ್ರಧಾನ ನಿರ್ದೇಶಕರಿಗೆ ಪಾಕಿಸ್ತಾನದ ಡಿಜಿಎಂಒಗಳು ಕರೆ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಪಾಕಿಸ್ತಾನದ ಸೇನಾ ಮುಖ್ಯಸ್ಥನಿಗೆ ಕರೆ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.

RELATED ARTICLES

Related Articles

TRENDING ARTICLES