ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆ, ಪಾಕಿಸ್ತಾನವು ಮೇ 9ಮಧ್ಯರಾತ್ರಿ ‘ಫತೇಹ್-II’ ಎಂಬ ಭಾರಿ ಕ್ಷಿಪಣಿಗಳ ಮೂಲಕ ದಾಳಿಗೆ ಯತ್ನಿಸಿದೆ. ಈ ದಾಳಿಯನ್ನು ಭಾರತದ ಹರಿಯಾಣದ ಸಿರ್ಸಾದಲ್ಲಿ ಯಶಸ್ವಿಯಾಗಿ ಆಕಾಶದಲ್ಲೇ ಹೊಡೆದುರುಳಿಸಲಾಗಿದೆ.
ಶುಕ್ರವಾರದಿಂದ ಶನಿವಾರದವರೆಗೆ ರಾತ್ರಿಯಿಡೀ ಭಾರತದ ಅನೇಕ ನಗರಗಳ ಮೇಲೆ ಅಪ್ರಚೋದಿತ ದಾಳಿ ಮುಂದುವರಿಸಿರುವ ಪಾಕಿಸ್ತಾನ, ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಭಾರತದ ಮೂರು ಪ್ರಮುಖ ವಾಯುಪಡೆಯ ನೆಲೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿದ್ದು. ರಾವಲ್ಪಿಂಡಿಯ ನೂರ್ಖಾನ್ ವಾಯುನೆಲೆ ಮತ್ತು ಚಕ್ವಾಲ್ನಲ್ಲಿ ಮುರಿಯದ್ ವಾಯುನೆಲೆ ಮತ್ತು ಶೋಕೋರ್ಟ್ನಲ್ಲಿರುವ ರಫಿಕಿ ವಾಯುನೆಲೆಯಿಂದ ಈ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಇದನ್ನೂ ಓದಿ :ಪಾಕ್ನಿಂದ ಶೆಲ್ ದಾಳಿ: ಜಮ್ಮುವಿನ ಹಿರಿಯ ಅಧಿಕಾರಿ ಸೇರಿದಂತೆ, ಇಬ್ಬರು ನಾಗರಿಕರು ಸಾ*ವು
ಆದರೆ ಭಾರತದ ವಾಯು ರಕ್ಷಣ ಪಡೆ ಈ ಎಲ್ಲಾ ದಾಳಿಗಳನ್ನು ತಡೆದಿದ್ದು. ಎಲ್ಲಾ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿದೆ.
Footage shows what is reportedly debris of a Pakistani Fattah-1 missile, which was shot down by Indian Air Defence, found in Sirsa. #IndiaPakistanWar | #IndianArmy pic.twitter.com/jUszQWzLOY
— Nikhil saini (@iNikhilsaini) May 10, 2025
ಫತೇ-II ಕ್ಷಿಪಣಿಯ ಬಗ್ಗೆ ಮಾಹಿತಿ..!
ಫತಾಹ್-II ಒಂದು ಹೈಪರ್‌ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, 400 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಈ ಕ್ಷಿಪಣಿ ಗೈಡೆಡ್ ಕ್ಷಿಪಣಿಯಾಗಿದ್ದು. ನಿರ್ದೇಶಿತ ಗುರಿಯನ್ನು ಹೊಡೆದುರುಳಿಸುವ ಸಾಮಾರ್ಥ್ಯವಿದೆ. ಈ ಕ್ಷಿಪಣಿಯನ್ನು ಸಾಮಾನ್ಯವಾಗಿ ಮಿಲಿಟರಿ ನೆಲೆಗಳು, ಸಂವಹನ ಸೌಲಭ್ಯಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳಂತಹ ಹೆಚ್ಚಿನ ಮೌಲ್ಯದ ಗುರಿಗಳ ಮೇಲೆ ನಿಖರವಾದ ದಾಳಿಗಾಗಿ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ :ಪಾಕಿಸ್ತಾನದ ಸೇನಾ ನೆಲೆ ಮತ್ತು ಡ್ರೋನ್ ಲಾಂಚ್ಪ್ಯಾಡ್ಗಳನ್ನು ಧ್ವಂಸಗೊಳಿಸಿದ ಭಾರತ
ಫತಾಹ್-II ಕ್ಷಿಪಣಿಯನ್ನು ಅಮೇರಿಕಾದ HIMARS ನಿರ್ಮಾಣದ GMLRS ಕ್ಷಿಪಣಿ ಅಥವಾ ಚೀನಾದ PHL ಕ್ಷಿಪಣಿ ವ್ಯವಸ್ಥೆಗೆ ಹೋಲಿಸಲಾಗಿದ್ದು.ಪಾಕಿಸ್ತಾನ ಈ ಕ್ಷಿಪಣಿಯನ್ನು ಸ್ಥಳಿಯವಾಗಿ ಅಭಿವೃದ್ದಿಪಡಿಸಿದೆ. ಈ ಕ್ಷಿಪಣಿ ಅಭಿವೃದ್ದಿಯಲ್ಲಿ ಚೀನಾ ಮಹತ್ವದ ಪಾತ್ರ ವಹಿಸಿದೆ.