Saturday, May 10, 2025

ಪಾಕಿಸ್ತಾನದ ಸೇನಾ ನೆಲೆ ಮತ್ತು ಡ್ರೋನ್​ ಲಾಂಚ್​ಪ್ಯಾಡ್​​ಗಳನ್ನು ಧ್ವಂಸಗೊಳಿಸಿದ ಭಾರತ

ದೆಹಲಿ: ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಪ್ರದೇಶಗಳ ಉಗ್ರರ ದಮನಕ್ಕೆ ಭಾರತ ಸೇನೆಯು ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಆರಂಭಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಘರ್ಷ ತಾರಕಕ್ಕೆ ಏರಿದೆ. ಇದರ ನಡುವೆ ಭಾರತ ನಡೆಸಿದ ಡ್ರೋನ್​​ ಮತ್ತು ಕ್ಷಿಪಣಿ ದಾಳಿಯಲ್ಲಿ ಪಾಕಿಗಳ ಮಿಲಿಟರಿ ಪೋಸ್ಟ್​ಗಳು ನಾಶವಾಗಿದೆ ಎಂದು ತಿಳಿದು ಬಂದಿದೆ.

ಆಪರೇಷನ್​ ಸಿಂಧೂರದ ಹೆಸರಿನಲ್ಲಿ ಭಾರತ ಪಾಕಿಸ್ತಾನದ ಉಗ್ರರನ್ನು ಭೇಟೆಯಾಡುತ್ತಿದ್ದು. ಉಗ್ರರಿಗೆ ತರಭೇತಿ ನೀಡಿ ಪೋಷಿಸುತ್ತಿದ್ದ ಸೇನಾ ನೆಲೆಗಳ ಮೇಲೂ ಭಾರತ ದಾಳಿ ನಡೆಸಿದೆ. ಭಾರತದ ದಾಳಿಗೆ ಪಾಕಿಗಳು ಭಾರತದ ಸೇನಾ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದು. ಇದಕ್ಕೆ ಪ್ರತ್ಯತ್ತರವಾಗಿ ಭಾರತವೂ ಪಾಕಿಸ್ತಾನದ ಲಾಂಚ್​ಪ್ಯಾಡ್​ಗಳ ಮೇಲೆ ದಾಳಿ ನಡೆಸಿದೆ.

ಇದನ್ನೂ ಓದಿ :ಪಾಕ್‌ನಿಂದ ಶೆಲ್ ದಾಳಿ: ಸ್ಥಳಾಂತರಗೊಂಡ ಜನರೊಂದಿಗೆ ಕ್ರಿಕೆಟ್ ಆಡಿದ ಒಮರ್​ ಅಬ್ದುಲ್ಲಾ

ಡ್ರೋನ್​ ದಾಳಿಗಳನ್ನು ನಡೆಸಲು ಪಾಕಿಸ್ತಾನ ಬಳಸುತ್ತಿದ್ದ ಮಿಲಿಟರಿ ಪೋಸ್ಟ್‌ಗಳು ಮತ್ತು ಲಾಂಚ್‌ ಪ್ಯಾಡ್‌ಗಳನ್ನು ಭಾರತೀಯ ಸೇನಾಪಡೆಗಳು ನಾಶಪಡಿಸಿವೆ ಎಂದು ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ. ಪಾಕಿಸ್ತಾನವು ಟ್ಯೂಬ್ ಲಾಂಚ್‌ಪ್ಯಾಡ್ ಅನ್ನು ಡ್ರೋನಗಳನ್ನು ಉಡಾಯಿಸಲು ಬಳಸುತ್ತಿತ್ತು. ಜಮ್ಮು ಬಳಿ ನೆಲೆಗೊಂಡಿರುವ ಭಾರತೀಯ ಸೇನಾ ಪಡೆಗಳು ಈ ಕಾರ್ಯಾಚರಣೆಯನ್ನು ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES