Saturday, May 10, 2025

ಪಾಕ್​ ಪ್ರಧಾನಿ ಮನೆ ಬಳಿ ಮಿಸೈಲ್​​ ದಾಳಿ: ಬಂಕರ್‌ನಲ್ಲಿ ಅಡಗಿ ಕುಳಿತ ಶೆಹಬಾಜ್​ ಷರೀಫ್​..!

ಇಸ್ಲಾಮಾಬಾದ್: ಪಹಲ್ಗಾಮ್‌ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಮೇಲೆ ಪ್ರತಿಕಾರವನ್ನು ಮುಂದುವರಿಸಿದ್ದು. ಭಾರತದ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಇತ್ತ ನೆನ್ನೆ ರಾತ್ರಿ ಭಾರತದ ಮೇಲೆ ಪಾಕಿಸ್ತಾನ ಡ್ರೋನ್​ ಮತ್ತು ಮಿಸೈಲ್​ಗಳನ್ನು ಬಳಸಿಕೊಂಡು ದಾಳಿಗೆ ಯತ್ನಿಸಿದ್ದು. ಇದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನದ ರಾಜಧಾನಿ ಮೇಲೆ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಪಾಕ ಪ್ರಧಾನಿ ಪ್ರಾಣಭಯದಿಂದ ಬಂಕರ್​ ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.

ನಿನ್ನೆ ನಡು ರಾತ್ರಿ ಭಾರತ ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್​ ಸೇರಿದಂತೆ ಪಾಕಿಸ್ತಾನದ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದು. ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ನಿವಾಸದ ಸಮೀಪದಲ್ಲೇ ಸ್ಫೋಟ ಸಂಭವಿಸಿದೆ. ಪಾಕ್‌ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶೆಹಬಾಜ್‌ ಶರೀಫ್‌ ಅವರ ಮನೆಯಿದೆ. ಆ ಮನೆಯಿಂದ 20 ಕಿಮೀ ದೂರದಲ್ಲೇ ಭಾರೀ ಸ್ಫೋಟದ ಸದ್ದಾಗಿದೆ.

ಇದನ್ನೂ ಓದಿ:ನಮ್ಮ ಯೋಧರು ನಿಖರತೆ, ಜಾಗರೂಕತೆ ಮತ್ತು ಮಾನವೀಯವಾಗಿ ವರ್ತಿಸಿ ದಾಳಿ ಮಾಡಿದ್ದಾರೆ: ರಾಜನಾಥ್​ ಸಿಂಗ್

ಇದರಿಂದ ಪಾಕ್‌ ಪ್ರಧಾನಿ ಬೆಚ್ಚಿದ್ದಾರೆ. ಇದರಿಂದ ಪಾಕಿಸ್ತಾನದಲ್ಲಿ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಹಲವು ನಗರಗಳು ಕತ್ತಲಲ್ಲಿ ಸಿಲುಕಿವೆ. ಕೆಲವು ನಗರಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ರಸ್ತೆಗಳಿಗೆ ಬಾರದಂತೆ ಪಾಕ್‌ ನಾಗರಿಕರಿಗೆ ಅಲ್ಲಿನ ಸ್ಥಳೀಯ ಆಡಳಿತ ಸೂಚನೆ ನೀಡಿದೆ. ಇದರ ನಡುವೆಯೇ ಪಾಕಿಸ್ತಾನದ ಪೈಲಟ್‌ನನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.

 

RELATED ARTICLES

Related Articles

TRENDING ARTICLES