Sunday, May 11, 2025

ಹಣೆಗೆ ಸಿಂಧೂರವಿಟ್ಟುಕೊಂಡು ‘ಆಪರೇಷನ್​ ಸಿಂಧೂರ’ದ ಬಗ್ಗೆ ಸಿಎಂ ಸುದ್ದಿಗೋಷ್ಟಿ; ಕೇಂದ್ರಕ್ಕೆ ಬೆಂಬಲ

ಬೆಂಗಳೂರು : ಕರ್ನಾಟಕ ಸಿಎಂ ಸಿದ್ದರಾಮಯ್ಯ ಭಾರತೀಯ ಸೇನೆ ನಡೆಸಿದ ‘ಆಪರೇಷನ್​ ಸಿಂಧೂರ’ ಕಾರ್ಯಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು. ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ವಿಶೇಷವೆನ್ನುವಂತೆ ಸಿಎಂ ಈ ಸುದ್ದಿಗೋಷ್ಟಿಗೆ ಸಿಂಧೂರವಿಟ್ಟುಕೊಂಡು ಹಾಜರಾಗಿದ್ದಾರು.

ಸಿಎಂ ಅಧಿಕೃತ ನಿವಾಸದಲ್ಲಿ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಟಿ ನಡೆಸಿದ್ದು. ಸುದ್ದಿಗೋಷ್ಟಿಗೂ ಮೊದಲು ಪಟಾಲಮ್ಮ ದೇವಸ್ಥಾನಕ್ಕೆ ಹೋಗಿದ್ದ ಸಿಎಂ ದೇವರಿಗೆ ಪೂಜೆ ಸಲ್ಲಿಸಿ ಹಣೆಗೆ ಕುಂಕುಮವಿಟ್ಟುಕೊಂಡು ಸುದ್ದಿಗೋಷ್ಟಿಗೆ ಹಾಜರಾದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಎಂ ‘ನಮ್ಮ ದೇಶದ ರಕ್ಷಣಾ ಪಡೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರಗಾಮಿಗಳ ನೆಲೆ ನಾಶ ಮಾಡಿ ಪರಾರ್ಕಮ ಮೆರೆದಿದ್ದಾರೆ. ನಮ್ಮ ದೇಶದ ಸೈನಿಕರಿಗೆ ನಾನು ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ :‘ಆಪರೇಷನ್​ ಸಿಂಧೂರ’: ಮೋಸ್ಟ್​ ವಾಟೆಂಡ್​ ಉಗ್ರ ಮಸೂದ್ ಅಜರ್ ಕುಟುಂಬದ 14 ಮಂದಿ ಸಾವು..!

ಮುಂದುವರಿದು ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ ಭಾರತದ ಸೈನ್ಯ ಸಿಂಧೂರ್ ಆಪರೇಷನ್ ಅಂತ ಹೇಳಿ ಒಂಬತ್ತು ಟೆರರಿಸ್ಟ್ ಬೇಸ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಈ ಅಟ್ಯಾಕ್ ಮಾಡುವಾಗ ಪಾಕಿಸ್ತಾನದ ಉಗ್ರಗಾಮಿಗಳ ಮೇಲೆ ಮಾತ್ರ ದಾಳಿ ನಡೆಸಿದ್ದಾರೆ. ಉಗ್ರರು ಭಾರತದ 26 ಜನ ಪ್ರಯಾಣಿಕರ ಮೇಲೆ ದಾಳಿ ನಡೆಸಿದ್ದರು. ಇಂತಹ ಉಗ್ರರನ್ನು ಪಾಕಿಸ್ತಾನ ಬೆಂಬಲಿಸಿದೆ. ಪಾಕಿಸ್ತಾನ ಭಯೋತ್ಪಾದನೆಯನ್ನು ಖಂಡಿಸುವ ಕೆಲಸವನ್ನ ಎಂದು ಮಾಡಿಲ್ಲ. ನಾನು ಈ ದಾಳಿಯನ್ನ ಬೆಂಬಲಿಸುತ್ತೇನೆ ಎಂದು ಸಿಎಂ ಹೇಳಿದರು.

ಇದನ್ನೂ ಓದಿ :‘ನಮ್ಮ ಸಹೋದರರ ಹತ್ಯೆಗೆ ಆಪರೇಷನ್​ ಸಿಂಧೂರದ ಮೂಲಕ ಉತ್ತರ’: ಸೇನೆಗೆ ಅಮಿತ್​ ಶಾ ಶ್ಲಾಘನೆ

ಭಾರತ ದೇಶದ ಸೈನಿಕರು ಉಗ್ರರು ಮೇಲೆ ದಾಳಿ ನಡೆಸಿದ್ದಾರೆ, ಇದು ಮೆಚ್ಚುವಂತಹ ಕೆಲಸ. ದಾಳಿಯಲ್ಲಿ
ಅಮಾಯಕರ ಸಾವು ನೋವು ಆಗದಂತೆ ನೋಡಿಕೊಂಡಿದ್ದಾರೆ. ಸೈನಿಕರ ಕಾರ್ಯದಕ್ಷತೆಗೆ ನಮ್ಮ ಸರ್ಕಾರ ಮತ್ತು ರಾಜ್ಯ ದೊಡ್ಡ ಸಲಾಂ ನೀಡುತ್ತದೆ. ನಾನು ಕೂಡ ಸರ್ಕಾರದ ಪರವಾಗಿ ಬೆಂಬಲವನ್ನ ಘೋಷಿಸುತ್ತೇನೆ
ನಮ್ಮ ರಾಜ್ಯ ಕೂಡ ಬೆಂಬಲ ಘೋಷಣೆ ಮಾಡುತ್ತದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES