ಜಾರ್ಖಂಡ್: ರಾಂಚಿಯಲ್ಲಿ ನಡೆದ ಸಂವಿಧಾನ ಉಳಿಸಿ ರ್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ‘ಪಹಲ್ಗಾಮ್‌ನಲ್ಲಿ ಏಪ್ರೀಲ್.22ರಂದು ಅತಿದೊಡ್ಡ ಉಗ್ರದಾಳಿ ನಡೆಯಿತು. ಈ ದಾಳಿ ನಡೆಯುವ ಕುರಿತು ಪ್ರಧಾನಿ ಮೋದಿಗೆ ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅದಕ್ಕೆ ಮೋದಿ ತಮ್ಮ ಕಾಶ್ಮೀರ ಪ್ರವಾಸ ರದ್ದುಗೊಳಿಸಿದರು. ಆದರೆ ಅಮಾಯಕರ ಜೀವ ಉಳಿಸಲು ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದರು.
ಇದನ್ನೂ ಓದಿ:‘ಸೂಸೈಡ್ ಬಾಂಬರ್ ಆಗಿ ದೇಶಕ್ಕೆ ಬಲಿದಾನ ನೀಡಲು ನಾನು ಸಿದ್ದ’: ಮತ್ತೆ ಪುನರುಚ್ಚರಿಸಿದ ಜಮೀರ್
ಸಂವಿಧಾನ ಉಳಿಸಿ ರ್ಯಾಲಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ‘ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರದಾಳಿಯಲ್ಲಿ 26 ಜನ ಸಾವನ್ನಪ್ಪಿದರು. ಸರ್ಕಾರ ಈ ದಾಳಿಯನ್ನು ಗುಪ್ತಚರ ವೈಫಲ್ಯ ಎಂದು ಕರೆಯಿತು. ಸರ್ಕಾರ ಅದನ್ನು ಒಪ್ಪಿಕೊಂಡಿದೆ ಮತ್ತು ಅವರು ಅದನ್ನು ಪರಿಹರಿಸುತ್ತಾರೆ ಎಂದು ಅವರು ಹೇಳಿದರು.
ಆದರೆ ಪಹಲ್ಗಾಮ್ ದಾಳಿಯ ಮೂರು ದಿನಕ್ಕೂ ಮೊದಲ ಈ ಕುರಿತು ಸರ್ಕಾರಕ್ಕೆ ಮಾಹಿತಿ ದೊರೆತಿತ್ತು. ಗುಪ್ತಚರ ಅಧಿಕಾರಿಗಳು ಈ ಕುರಿತು ಮೋದಿಗೆ ವರದಿ ಕಳುಹಿಸಿದ್ದರು. ಆದ್ದರಿಂದ ಅವರು ಕಾಶ್ಮೀರ ಭೇಟಿ ಕಾರ್ಯಕ್ರಮವನ್ನು ರದ್ದುಗೊಳಿಸಿದರು ಎಂಬ ಮಾಹಿತಿ ನನಗೆ ಬಂದಿದೆ, ನಾನು ಇದನ್ನು ಪತ್ರಿಕೆಯಲ್ಲಿಯೂ ಓದಿದ್ದೇನೆ. ಇದನ್ನೂ ಓದಿ :‘ಸೋನು ನಿಗಮ್ ಕಾಟಾಚಾರಕ್ಕೆ ಕ್ಷಮೆ ಕೇಳಿದಂಗಿದೆ’: ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು
ಪ್ರಧಾನಿ ಮೋದಿಯ ರಕ್ಷಣೆಗಾಗಿ ಭದ್ರತಾ ಪಡೆಗಳು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳು ಈ ಕ್ರಮ ಕೈಗೊಂಡರು. ಈಗಿದ್ದಾಗ ಸಾಮಾನ್ಯ ಜನರ ಸುರಕ್ಷತೆಗಾಗಿ ನೀವು ಗಡಿ ಭದ್ರತಾ ಪಡೆ ಮತ್ತು ಪೊಲೀಸರಿಗೆ ಅದೇ ವಿಷಯವನ್ನು ಏಕೆ ಹೇಳಲಿಲ್ಲ ಎಂದು ಅವರು ಪ್ರಧಾನಿ ಮೋದಿಯವರನ್ನು ಕೇಳಿದರು. ಭಯೋತ್ಪಾದಕ ದಾಳಿಯ ಗುಪ್ತಚರ ವರದಿಗಳಿದ್ದರೂ ಕೇಂದ್ರವು ಪಹಲ್ಗಾಮ್‌ನಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ಏಕೆ ನಿಯೋಜಿಸಲಿಲ್ಲ? ಎಂದು ಖರ್ಗೆ ಪ್ರಶ್ನಿಸಿದರು.