Tuesday, May 6, 2025

‘ಸೂಸೈಡ್​ ಬಾಂಬರ್​ ಆಗಿ ದೇಶಕ್ಕೆ ಬಲಿದಾನ ನೀಡಲು ನಾನು ಸಿದ್ದ’: ಮತ್ತೆ ಪುನರುಚ್ಚರಿಸಿದ ಜಮೀರ್​

ಕಲಬುರಗಿ: ಕಳೆದ ಕೆಲದಿನಗಳ ಹಿಂದೆ ಬಳ್ಳಾರಿಯಲ್ಲಿ ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಸಚಿವ ಜಮೀರ್ ಅಹಮ್ಮದ್​ ಖಾನ್​ ‘ಕೇಂದ್ರ ಸರ್ಕಾರ ಅವಕಾಶ ಕೊಟ್ಟರೆ ನಾನು ಯುದ್ದಕ್ಕೆ ಹೋಗ್ತೀನಿ, ಸೂಸೈಡ್​ ಬಾಂಬ್​ ಕಟ್ಟಿಕೊಂಡು ಹೋಗ್ತೀನಿ ಎಂದು ಹೇಳಿದ್ದರು. ಇದೀಗ ಮತ್ತೊಮ್ಮೆ ಇದೇ ಮಾತನ್ನ ಸಚಿವ ಜಮೀರ್ ಪುನರ್​ ಉಚ್ಚರಿಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಜಮೀರ್ ಅಹಮ್ಮದ್​ ಖಾನ್​ ‘ ಭಾರತ ಪಾಕಿಸ್ತಾನ ನಡುವೆ ಯುದ್ದದ ಕಾರ್ಮೋಡ ಕವಿದಿದೆ.  ಕೇಂದ್ರ ಸರಕಾರ ಈ ವಿಚಾರದಲ್ಲಿ ಏನು ತೀರ್ಮಾನ ಕೈಗೊಳ್ತದೋ ಕೈಗೊಳ್ಳಲ್ಲಿ. ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಕೇಂದ್ರ ಸರ್ಕಾರದ ಜೊತೆ ನಾವಿದ್ದೀವಿ. ಅವರು ಏನು ಬೇಕಾದ್ರು ತೀರ್ಮಾನ ಕೈಗೊಳ್ಳಲಿ ಎಂದು ಹೇಳಿದರು. ಇದನ್ನೂ ಓದಿ :‘ಸೋನು ನಿಗಮ್ ಕಾಟಾಚಾರಕ್ಕೆ ಕ್ಷಮೆ ಕೇಳಿದಂಗಿದೆ’: ಫಿಲ್ಮ್​ ಚೇಂಬರ್​ ಅಧ್ಯಕ್ಷ ನರಸಿಂಹಲು

ಇನ್ನು ಸೂಸೈಡ್​ ಬಾಂಬರ್​ ವಿಚಾರವಾಗಿ ಮಾತನಾಡಿದ ಜಮೀರ್​ ‘ ನೂರಕ್ಕೆ ನೂರು ನಾನು ಈ ದೇಶಕ್ಕಾಗಿ ಬಲಿಯಾಗಲು ಸಿದ್ದನಿದ್ದೇನೆ. ಭಾರತ ಪಾಕಿಸ್ತಾನದೊಂದಿಗೆ ಯುದ್ದ ಮಾಡಿದರೆ, ಕೇಂದ್ರ ಸರ್ಕಾರ ನನಗೆ ಅವಕಾಶ ಕೊಟ್ಟರೆ ನಾನು ಸೂಸೈಡ್​ ಬಾಂಬ್​ ಕಟ್ಟಿಕೊಂಡು ಹೋಗ್ತೇನೆ. ನನಗೆ ದೇಶ ಮುಖ್ಯ ಎಂದು ಹೇಳಿದರು.

ಇದನ್ನೂ ಓದಿ :ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆಗೆ ಭೇಟಿ: ಕಾಲ್ನಡಿಗೆಯಲ್ಲೇ ಬೆಟ್ಟ ಏರುವ ಸಾಧ್ಯತೆ..!

ಇನ್ನು ವಕ್ಪ್​​ ವಿಚಾರದ ಕುರಿತು ಮಾತನಾಡಿದ ಸಚಿವ ಜಮೀರ್ ‘ ವಕ್ಫ್ ವಿಚಾರದಲ್ಲಿ ಕೇಂದ್ರ ಸರಕಾರದ ತಂದಿರುವ ಕಾಯ್ದೆಗೆ ನಮ್ಮ ಪಕ್ಷ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಂಡಿದೆ. ಸದ್ಯ ವಕ್ಫ್​ ಕಾಯ್ದೆಗೆ ಸುಪ್ರೀಂ ಕೋರ್ಟ್​ ಸ್ಟೇ ಕೊಟ್ಟಿದೆ. ನಮಗೆ ಸುಪ್ರೀಂ ಕೋರ್ಟ್​ನಲ್ಲಿ ನ್ಯಾಯ ಸಿಗುತ್ತೆ ಅನ್ನೋ ವಿಶ್ವಾಸವಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES