Tuesday, May 6, 2025

‘ಸೋನು ನಿಗಮ್ ಕಾಟಾಚಾರಕ್ಕೆ ಕ್ಷಮೆ ಕೇಳಿದಂಗಿದೆ’: ಫಿಲ್ಮ್​ ಚೇಂಬರ್​ ಅಧ್ಯಕ್ಷ ನರಸಿಂಹಲು

ಬೆಂಗಳೂರು : ಗಾಯಕ ಸೋನು ನಿಗಮ್​ ಕ್ಷಮೆ ಕೇಳಿರುವ ಕುರಿತು ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ‘ಸೋನು ನಿಗಮ್​ ಕ್ಷಮೆ ಕೇಳಿರುವುದು ಒಳ್ಳೆಯ ಬೆಳವಣಿಗೆ, ಆದರೆ ಅವರು ಕ್ಷಮೆ ಕೇಳಿರುವ ರೀತಿ ಕಾಟಾಚಾರಕ್ಕೆ ಕೇಳಿದಂಗಿದೆ. ಈ ಕುರಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ನರಸಿಂಹಲು ‘ ಸೋನು ನಿಗಮ್​ ಕ್ಷಮೆ ಕೇಳಿರುವುದು ಒಳ್ಳೆ ಬೆಳವಣಿಗೆ, ಆದರೆ ಫೇಸ್​ಬುಕ್​ನಲ್ಲಿ ಅವರು ಸಮರ್ಥನೆ ಮಾಡಿಕೊಂಡಿರುವುದು ಸರಿ ಇಲ್ಲ. ಅದು ಅಲ್ಲದೇ ಅವರು ಪ್ರಜ್ಞಾವಂತರು ಈ ಕುರಿತು ತೀರ್ಮಾನ ಹೇಳಿ ಎಂದಿರುವುದು ಸರಿ ಇಲ್ಲ. ಇದು ಉದ್ದಟತನದ ರೀತಿ ಕಾಣುತ್ತೆ, ಕಾಟಾಚಾರಕ್ಕೆ ಕ್ಷಮೆ ಕೇಳಿರುವ ಆಗಿದೆ. ಆದರೆ ಅವರ ಕ್ಷಮೆ ಕೇಳಿರುವುದನ್ನು ನಾವು ಸ್ವಾಗತ ಮಾಡ್ತೇವೆ, ಎಲ್ಲರನ್ನೂ ಒಗ್ಗೂಡಿಸಿ ಚರ್ಚೆ ಮಾಡಿ ತಿಳಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ :ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆಗೆ ಭೇಟಿ: ಕಾಲ್ನಡಿಗೆಯಲ್ಲೇ ಬೆಟ್ಟ ಏರುವ ಸಾಧ್ಯತೆ..!

ಮುಂದುವರಿದು ಮಾತನಾಡಿದ ನರಸಿಂಹಲು ‘ಕ್ಷಮೆಗಿಂತ ದೊಡ್ಡದು ಯಾವುದು ಇಲ್ಲ. ಆದರೆ ಈ ಕುರಿತು ಎಲ್ಲರನ್ನು ಚರ್ಚೆ ಕರೆದು ಸೋನು ವಿರುದ್ದ ಅಸಹಕಾರ ಕೈಗೊಂಡಿದ್ದೇವೆ. ಅದೇ ರೀತಿ ಮತ್ತೆ ಎಲ್ಲರನ್ನು ಕರೆದು ಅವರ ಕುರಿತು ಏನು ನಿರ್ಧಾರ ಕೈಗೊಳ್ಳಬೇಕು ಎಂಬ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES