ಬೆಂಗಳೂರು : ‘ಕೇಂದ್ರ ಸರ್ಕಾರ ಅವಕಾಶ ಕೊಟ್ಟರೆ ಪಾಕಿಸ್ತಾನದ ವಿರುದ್ದ ಯುದ್ದಕ್ಕೆ ಹೋಗುತ್ತೇನೆ’ ಎಂದು ಹೇಳಿದ್ದ ಜಮೀರ್ ಅಹಮ್ಮದ್ ಹೇಳಿಕೆಗೆ ಪರಿಷತ್ ಸದಸ್ಯ ಸಿ,ಟಿ ರವಿ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು. ಜಮೀರ್ ಪಾಕಿಸ್ತಾನದ ವಿರುದ್ದ ಯುದ್ದ ಮಾಡೋದು ಬೇಡ, ಅವರು ಪಾಕಿಸ್ತಾನದ ಪರ ಘೋಷಣೆ ಕೂಗುವವರ ವಿರುದ್ದ ಹೋರಾಟ ಮಾಡಲಿ ಎಂದು ಹೇಳಿದರು.
ಈ ಕುರಿತು ಬಿಜೆಪಿ ಕಛೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿ,ಟಿ ರವಿ ‘ಜಮೀರ್ ಅಹ್ಮದ್ ಅವರು ಯುದ್ಧಕ್ಕೆ ಹೋಗ್ತೇನೆ ಎಂದಿದ್ದಾರೆ. ನಾನು ಅವರ ಸ್ಪಿರೀಟ್ ಒಪ್ಪುತ್ತೇನೆ, ಅವರ ಹೇಳಿಕೆಯನ್ನ ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತೇನೆ. ಆದರೆ ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಸೈನಿಕರು ಇದ್ದಾರೆ. ಜಮೀರ್ ಅಹಮ್ಮದ್ ಹೋರಾಡ ಬೇಕಿರೋದು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವವರ ವಿರುದ್ಧ, ಡಿಜೆ ಹಳ್ಳಿ ಕೆಜಿ ಹಳ್ಳಿಯಲ್ಲಿ ಗಲಭೆ ಮಾಡಿದವರ ಮಟ್ಟ ಹಾಕಲು ಜಮೀರ್ ಅಹ್ಮದ್ ಹೋರಾಟ ಮಾಡಬೇಕು. ಭಾರತದ ಒಳಗೆ ಇದ್ದು ನಾಯಿ ತರ ಬೊಗಳುವವರ ವಿರುದ್ದ ಹೋರಾಟ ಮಾಡಿ ಎಂದು ಸಿ,ಟಿ ರವಿ ಹೇಳಿದರು.
ಇದನ್ನೂ ಓದಿ :ಭೀಕರ ಅಪಘಾತ: ನಿಶ್ಚಿತಾರ್ಥ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಐವರ ಧಾರುಣ ಸಾ*ವು
ಸುಹಾಸ್ ಶೆಟ್ಟಿ ಹತ್ಯೆ ಕುರಿತು ಸಿ.ಟಿ ರವಿ ಮಾತು..!
ಸುಹಾಸ್ ಶೆಟ್ಟಿ ಹತ್ಯೆ ಕುರಿತು ಮಾತನಾಡಿದ ಸಿ.ಟಿ ರವಿ ‘ಆತ ರೌಡಿಶೀಟರ್ ಎಂದು ಆತನ ಮನೆಗೆ ಹೋಗಲ್ಲ ಎಂದು ಕಾಂಗ್ರೆಸ್ ಹೇಳಿದೆ. ಆದರೆ ದನಗಳ ಕಳ್ಳ ಕಬೀರ್ ಎನ್ಕೌಂಟರ್ ಆಗಿತ್ತು, ಆಗ ಆತನ ಮನೆಗೆ ಕಾಂಗ್ರೆಸ್ ಹೋಗಿ 10 ಲಕ್ಷ ಪರಿಹಾರ ಕೊಟ್ಟಿದ್ದ್ರು. ಮತ್ತೊಬ್ಬ ದನಕಳ್ಳ ಇದ್ರಿಶ್ ಪಾಶ ಹೃದಯಘಾತದಿಂದ ಸಾವನ್ನಪ್ಪಿದ್ದ, ಆತ ಸಾಯಲು ಪುನಿತ್ ಕೆರೆಹಳ್ಳಿ ಕಾರಣ ಎಂದು ದೂರು ದಾಖಲಿಸಿದ್ರು. ಇದ್ರಿಶ್ ಪಾಷಾನಿಗೆ 25 ಲಕ್ಷ ಪರಿಹಾರ ಕೊಟ್ಟ್ರು ಎಂದು ಹೇಳಿದರು.