ಉಡುಪಿ : ಬೆಂಗಳೂರು ಲಾಕ್ಡೌನ್ ಆದೇಶದ ಬೆನ್ನಲ್ಲಿ ಉಳಿದ ಜಿಲ್ಲೆಗಳನ್ನು ಕೂಡ ಲಾಕ್ಡೌನ್ ಮಾಡಿವ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿರುವ ಉಡುಪಿ ಶಾಸಕ ರಘುಪತಿ ಭಟ್ ಜಿಲ್ಲೆಗೆ ಸದ್ಯ ಲಾಕ್ಡೌನ್ ನ ಅಗತ್ಯತೆ ಇಲ್ಲ ಎಂದಿದ್ದಾರೆ. ಜನಜೀವನ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ ಮತ್ತೆ ಲಾಕ್ಡೌನ್ ಮಾಡಿದರೆ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳಲಿದೆ. ಜಿಲ್ಲೆಯ ಒಳಗಡೆ ಪರಿಸ್ಥಿತಿಯನ್ನು ನಿಯಂತ್ರಿಸುವುದು ಕಷ್ಟವಲ್ಲ ಆದರೆ ಹೊರ ಜಿಲ್ಲೆಯಿಂದ ಬರುತ್ತಿರುವ ಸೋಂಕಿತರೇ ಜಿಲ್ಲೆಗೆ ಬಹಳ ದೊಡ್ಡ ಸವಾಲಾಗಿದ್ದಾರೆ. ಜಿಲ್ಲೆಯ ಗಡಿ ಭಾಗಗಳನ್ನು ಸೀಲ್ ಡೌನ್ ಮಾಡಲು ಸಲಹೆಯನ್ನು ಡಿಸಿ ಅವರಿಗೆ ನೀಡಿದ್ದೇನೆ. ಹೊರ ಜಿಲ್ಲೆಯಿಂದ ಬರುತ್ತಿರುವವರನ್ನು ಹೋಮ್ ಕ್ವಾರಂಟೈನ್ ಮಾಡಬೇಕು. ಆಗ ಸೋಂಕು ಹರಡುವುದು ನಿಯಂತ್ರಣಕ್ಕೆ ಬರುತ್ತದೆ ಎನ್ನುವ ಸಲಹೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದೇನೆ ಎಂದಿದ್ದಾರೆ.