Saturday, May 3, 2025

ಮೊಘಲರಿಂದ ಮುಸ್ಲಿಂ ಧರ್ಮ ಸ್ವೀಕರಿಸಿದ್ದ ಕುಟುಂಬ ಮಥುರಾದಲ್ಲಿ ಹಿಂದೂ ಧರ್ಮಕ್ಕೆ ಮತಾಂತರ

ಮಥುರಾ: ಉತ್ತರ ಪ್ರದೇಶದ, ಮಥುರಾದಲ್ಲಿ ಮುಸ್ಲಿಂ ಕುಟುಂಬವೊಂದರ ಎಂಟು ಮಂದಿ ಸದಸ್ಯರು ಧಾರ್ಮಿಕ ವಿಧಿ ವಿಧಾನದ ಅನುಸಾರವಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಇಲ್ಲಿನ ವೃಂದಾವನದ ಆಶ್ರಮದಲ್ಲಿ ನಡೆದ ವೈದಿಕ ಕಾರ್ಯಕ್ರಮದಲ್ಲಿ ಅವರು ಹಿಂದೂ ಧರ್ಮಕ್ಕೆ ಮರು ಮತಾಂತರವಾಗಿದ್ದಾರೆ. ಹಿಂದೂ ಧರ್ಮದ ಜೊತೆಗೆ ತಮ್ಮ ಹೆಸರನ್ನೂ ಕೂಡ ಬದಲಾಯಿಸಿಕೊಂಡಿದ್ದಾರೆ.

ಈ ಕುಟುಂಬದ ಮುಖ್ಯಸ್ಥ  50 ವರ್ಷದ ಜಾಕೀರ್​ ಎಂಬುವವರು ಜಗದೀಶ್​ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಹಿಂದೂ ಧರ್ಮ ಸ್ವೀಕಾರದ ಬಳಿಕ ಮಾತನಾಡಿದ ಜಗದೀಶ್​​, ನಮ್ಮ ಪೂರ್ವಜರು ಹಿಂದೂಗಳಾಗಿದ್ದು, ಮೊಘಲ್​ ಕಾಲದಲ್ಲಿ ಮುಸ್ಲಿಂ ಧರ್ಮವನ್ನು ಸ್ವೀಕರಿಸಿದ್ದರು. ಆದರೆ, ನಾನು ನಮ್ಮ ಮನಸ್ಸಿನಲ್ಲಿ ಕಾಳಿ ಮಾತೆಯನ್ನೇ ಪೂಜಿಸುತ್ತಿದ್ದೆ. ಗ್ರಾಮಸ್ಥರು ಇಂದಿಗೂ ನನ್ನನ್ನು ಭಗತ್​​ಜಿ ಎಂದೇ ಕರೆಯುತ್ತಾರೆ ಎಂದರು.

ಇದನ್ನೂ ಓದಿ :ಸರ್ಜಿಕಲ್​ ಸ್ಟ್ರೈಕ್ ಮಾಡೋದು ಬಿಟ್ಟು, ಯೂಟ್ಯೂಬ್​ ಚಾನೆಲ್​ ಬ್ಯಾನ್​ ಮಾಡ್ತಾವ್ರೆ: ಪ್ರಿಯಾಂಕ್​ ಖರ್ಗೆ

ನಮ್ಮ ಕುಟುಂಬವೂ ಮೂಲತಃ ಗುರ್ಜರ್​ ಸಮುದಾಯಕ್ಕೆ ಸೇರಿದ್ದು, ಕಳೆದ ಮೂರು ವರ್ಷಗಳಿಂದ ನಮ್ಮ ಮೂಲ ಬೇರಿಗೆ ಹಿಂದಿರುಗುವ ಕುರಿತು ಚಿಂತಿಸುತ್ತಿದ್ದೇವು. ಇದೀಗ ಹಿಂದೂ ಧರ್ಮವನ್ನು ಸಂಪೂರ್ಣವಾಗಿ ಯಾವುದೇ ಒತ್ತಡ ಮತ್ತು ಬಲವಂತವಿಲ್ಲದೇ ತೆಗೆದುಕೊಂಡಿದ್ದೇವೆ ಎಂದರು. ಇನ್ನು ಈ ಕುರಿತು ವೃಂದಾವನದ ಶ್ರೀ ಜಿ,ವಾಟಿಕಾ ಕಾಲೋನಿಯಲ್ಲಿರುವ ಭಾಗವತ್ ಧಾಮ ಆಶ್ರಮದಲ್ಲಿ ಒಂದು ಗಂಟೆಗಳ ಕಾಲ ನಡೆದ ಹೋಮ- ಹವನದ ಆಚರಣೆಯಲ್ಲಿ ಜಗದೀಶ್ ಅವರ ಪತ್ನಿ, ಪುತ್ರರು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಸೇರಿದಂತೆ ಕುಟುಂಬ ಭಾಗಿಯಾಗಿತ್ತು. ಇದನ್ನೂ ಓದಿ:ಶಶಿ ತರೂರ್​ ಜೊತೆ ಮೋದಿ: ‘ಕೆಲವರ ನಿದ್ದೆಗೆ ಭಂಗ ತರಲಿದೆ’ ಎಂದು ಕಾಂಗ್ರೆಸ್​ಗೆ ಮೋದಿ ಟಾಂಗ್​

ಮತಾಂತರಗೊಂಡ ಬಳಿಕ ಜಾಕೀರ್​- ಜಗದೀಶ್​ ಎಂದು, ಪತ್ನಿ ಗುಡ್ಡಿ- ಗುಡಿಯಾ ಎಂದು, ಮೊದಲ ಮಗ ಅನ್ವರ್​- ಸುಮಿತ್​ ಎಂದು, ಎರಡನೇ ಮಗ ರುನ್ವಾರ್​- ರಾಮೇಶ್ವರ್​ ಎಂದು, ಸೊಸೆ ಸಬಿರಾ- ಸಾವಿತ್ರಿ ಎಂದು, ಮೊಮ್ಮಕಳು ಸಬ್ರಿ- ಶತ್ರುಘ್ನನ್​, ಸೋಯಾ- ಸರಸ್ವತಿ ಮತ್ತು ನೇಹ- ಸ್ನೇಹ ಎಂದು ಹೆಸರು ಬದಲಾಯಿಸಿದರು.

ಇದನ್ನೂ ಓದಿ :ಶಿವಾನಂದ ಪಾಟೀಲ್ ಕೊಟ್ಟ​ ರಾಜೀನಾಮೆ ಅನರ್ಹ, ಇದನ್ನ ಸ್ವೀಕರಿಸಲ್ಲ: ಯು,ಟಿ ಖಾದರ್​

ಹಿಂದೂ ಯುವ ವಾಹಿನಿ ಕಾರ್ಯಕರ್ತ ಶರದ್​ ಸೈನಿ ಮಾತನಾಡಿ, ಗಂಗಾ ನದಿಯಲ್ಲಿ ಕುಟುಂಬ ಶುದ್ದೀಕರಣ ಮಾಡಿಕೊಂಡು ಬಳಿಕ ಕೇಸರಿ ಸ್ಕಾರ್ಫ್​ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಕುಟುಂಬದ ಎಲ್ಲಾ ಸದಸ್ಯರು ತಮ್ಮ ಸ್ವ ಇಚ್ಛೆಯಿಂದ ಈ ನಿರ್ಧಾರ ಮಾಡಿದ್ದು, ಮಕ್ಕಳು ಕೂಡ ಬೆಂಬಲ ನೀಡುವ ಮೂಲಕ ತಮ್ಮ ಪೂರ್ವಜರ ಧರ್ಮ ಸ್ವೀಕರಿಸಿದರು.

ವೃಂದಾವನದ ಕೊಟ್ವಾಲಿ ಉಸ್ತುವಾರಿ ಪ್ರಶಾಂತ್​ ಕಪಿಲ್​ ಮಾತನಾಡಿ, ಸಂಪೂರ್ಣವಾಗಿ ಸ್ವ ಇಚ್ಚೆಯಿಂದ ಶಾಂತಿಯುತವಾಗಿ ಮತಾಂತರಗೊಂಡಿದ್ದಾರೆ. ಯಾವುದೇ ಬಲವಂತ ಅಥವಾ ಆಮಿಷಗಳು ಅವರಿಗೆ ಒಡ್ಡಿಲ್ಲ ಎಂದರು.

RELATED ARTICLES

Related Articles

TRENDING ARTICLES